Unlock-4 ಗೈಡ್ ಲೈನ್ಸ್ ಜಾರಿಗೊಳಿಸಿದ ಕೇಂದ್ರ ಗೃಹ ಸಚಿವಾಲಯ, ಇಲ್ಲಿವೆ ಡಿಟೇಲ್ಸ್

ಮಾರ್ಗಸೂಚಿಗಳ ಪ್ರಕಾರ ಸೆಪ್ಟೆಂಬರ್ 21 ರಿಂದ ಸಾಮಾಜಿಕ ಅಕಾಡೆಮಿ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಆದರೆ, 100 ಕ್ಕಿಂತ ಹೆಚ್ಚು ಜನರು ಸೇರಲು ಸಾಧ್ಯವಾಗುವುದಿಲ್ಲ.

Last Updated : Aug 29, 2020, 08:59 PM IST
Unlock-4 ಗೈಡ್ ಲೈನ್ಸ್ ಜಾರಿಗೊಳಿಸಿದ ಕೇಂದ್ರ ಗೃಹ ಸಚಿವಾಲಯ, ಇಲ್ಲಿವೆ ಡಿಟೇಲ್ಸ್ title=

ನವದೆಹಲಿ: Unlock -4 ಗಾಗಿ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅಡಿಯಲ್ಲಿ ಸೆಪ್ಟೆಂಬರ್ 7 ರಿಂದ ಮೆಟ್ರೋ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ. ಷರತ್ತುಗಳೊಂದಿಗೆ ಇದನ್ನು ಪ್ರಾರಂಭಿಸಲಾಗುವುದು. ಮಾರ್ಗಸೂಚಿಗಳ ಪ್ರಕಾರ, ಸೆಪ್ಟೆಂಬರ್ 21 ರಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು, ಆದರೆ 100 ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ.

Unlock-4 ಡಿಟೇಲ್ಸ್
- ಶಾಲಾ-ಕಾಲೇಜು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳು ಸೆಪ್ಟೆಂಬರ್ 30 ರವರೆಗೆ ಬಂದ್ ಇರಲಿವೆ.
- ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50 ರಷ್ಟು ಶೈಕ್ಷಣಿಕ ಹಾಗೂ ಶೈಕ್ಷಣಿಕವಲ್ಲದ ಸಿಬ್ಬಂದಿಗಳು ಆನ್ಲೈನ್ ಶಿಕ್ಷಣ, ಟೆಲಿಕೌನ್ಸಲಿಂಗ್ ಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಶಾಲೆಗೇ ಕರೆಯಿಸಿಕೊಳ್ಳಬಹುದು.
- ಕಂಟೆನ್ಮೆಂಟ್ ಜೋನ್ ಹೊರಗಿರುವ ಶಾಲೆಗಳಲ್ಲಿ 9 ರಿಂದ 12 ನೇ ತರಗತಿಗಳವರೆಗಿನ ವಿದ್ಯಾರ್ಥಿಗಳಿಗೆ ಪೋಷಕರ ಲಿಖಿತ ಅನುಮತಿಯನ್ನು ಪಡೆದು ಶಾಲೆಗೆ ಬರಬಹುದಾಗಿದೆ.
- ಓಪನ್ ಏರ್ ಥಿಯೇಟರ್ ಹೊರತುಪಡಿಸಿ, ಸಿನೆಮಾ ಹಾಲ್ ಗಳು, ಸ್ವಿಮ್ಮಿಂಗ್ ಪೂಲ್ ಗಳು ಹಾಗೂ ಥಿಯೇಟರ್ ಗಳು ಸೆಪ್ಟೆಂಬರ್ 30ರವರೆಗೆ ಬಂದ್ ಇರಲಿವೆ.
- ಅಂತಾರಾಷ್ಟ್ರೀಯ ವಿಮಾನಯಾನ ಸೇವೆ, ಗೃಹ ಸಚಿವಾಲಯದ ಅನುಮತಿ ಹೊಂದಿದ ಸೇವೆಗಳನ್ನು ಹೊರತುಪಡಿಸಿ ಬಂದ್ ಇರಲಿವೆ.

Trending News