ಯುಪಿ: 'ಹನುಮಾನ್ ಜಿ ಮುಸ್ಲಿಂ' ಎಂದ ಬಿಜೆಪಿ MLC, ನೀಡಿದ ವಿಚಿತ್ರ ತರ್ಕ ಏನು ಗೊತ್ತಾ?

ಬುಕ್ಕಲ್ ನವಾಬ್ ಹೇಳಿಕೆಯ ನಂತರ, ಅಯೋಧ್ಯೆಯ ಸಂತರು ಮತ್ತು ಬಾಬರಿ ಮಸೀದಿ ಮೌಲ್ವಿಗಳ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು.

Last Updated : Dec 21, 2018, 09:33 AM IST
ಯುಪಿ: 'ಹನುಮಾನ್ ಜಿ ಮುಸ್ಲಿಂ' ಎಂದ ಬಿಜೆಪಿ MLC, ನೀಡಿದ ವಿಚಿತ್ರ ತರ್ಕ ಏನು ಗೊತ್ತಾ? title=
File Image

ಲಕ್ನೋ: ಭಾರತೀಯ ಜನತಾ ಪಕ್ಷದ ಎಂಎಲ್ಸಿ ಬುಕ್ಕಲ್ ನವಾಬ್ 'ಹನುಮಾನ್ ಜಿ ಮುಸ್ಲಿಂ' ಎಂದು ವರ್ಣಿಸಿದ್ದಾರೆ. ಹನುಮಾನ್ ಇಡೀ ವಿಶ್ವಕ್ಕೆ ಸೇರಿದವರು, ಪ್ರತಿ ಧರ್ಮಕ್ಕೂ ಸೇರಿದವರು ಎಂದು ಬುಕ್ಕಲ್ ನವಾಬ್ ಹೇಳಿದ್ದಾರೆ. ಹಾಗಾಗಿ ನಾವು 'ಹನುಮಾನ್ ಜಿ ಮುಸ್ಲಿಂ' ಎಂದು ನಂಬುತ್ತೇವೆ ಎಂದು ಹೇಳಿರುವ ಬುಕ್ಕಲ್ ನವಾಬ್, ನಮ್ಮಲ್ಲಿ ರೆಹಮಾನ್, ರಮ್ಜಾನ್, ಫರ್ಮನ್, ಜಿಶನ್, ಕುರ್ಬಾನ್ ಹೀಗೆ ಬಹುತೇಕ ಹೆಸರುಗಳನ್ನು ಹನುಮಾನ್ ಜಿ ಹೆಸರಿನಲ್ಲಿ ಮಾತ್ರ ಇರಿಸಲಾಗಿದೆ ಎಂದಿದ್ದಾರೆ.

ಬುಕ್ಕಲ್ ನವಾಬ್ ಹೇಳಿಕೆಯ ನಂತರ, ಅಯೋಧ್ಯೆಯ ಸಂತರು ಮತ್ತು ಬಾಬರಿ ಮಸೀದಿ ಮೌಲ್ವಿಗಳ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು. ಶ್ರೀರಾಮ್ ಭೂಮಿ ಟ್ರಸ್ಟ್ ಅಧ್ಯಕ್ಷ ಗೋಪಾಲ್ ದಾಸ್, ಬುಕ್ಕಲ್ ನವಾಬ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮುಸ್ಲಿಂ ಸಹೋದರರಿಗೆ ಧನ್ಯವಾದಗಳು, ಅವರು ಹನುಮಾನ್ ಜಿನನ್ನು ಅನುಸರಿಸಿದ್ದಾರೆ ಎಂದು ಹೇಳಿದರು. ಆದಾಗ್ಯೂ, ಹನುಮಾನ್ ಜೀ ಎಲ್ಲಾ ಧರ್ಮಗಳನ್ನು ಒಳಗೊಂಡಿದ್ದಾರೆ. ಹನುಮಾನ್ ಜೀ ಜನಿಸಿದಾಗ ಇಸ್ಲಾಂ ಧರ್ಮ ಜನಿಸಿರಲಿಲ್ಲ ಎಂದು ಶ್ರೀ ರಾಮ್ ಲಲಾದ ಮುಖ್ಯ ಅರ್ಚಕರಾದ ಸಾತಂದರ್ ದಾಸ್ ಹೇಳಿದ್ದಾರೆ.  ಅಂತಹ ಹೇಳಿಕೆಗಳು ದೇವತೆಗಳಿಗೆ ಅವಮಾನ ಮಾಡುವಂತಹದ್ದಾಗಿದೆ. ಬುಕ್ಕಲ್ ನವಾಬ್ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.

ಬಾಬರಿ ಮಸೀದಿ ಮೌಲ್ವಿಯಾದ ಇಕ್ಬಾಲ್ ಅನ್ಸಾರಿ ಬುಕ್ಕಲ್ ನವಾಬ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬುಕ್ಕಲ್ ನವಾಬ್ ಹಿಂದುವೋ? ಮುಸಲ್ಮಾನರೋ ಎಂದು ಹೇಳಬೇಕು ಎಂದಿದ್ದಾರೆ. ಬುಕ್ಕಲ್ ನವಾಬ್ ಪಾರಿವಾಳಗಳ ಬಾಜಿ ಕಟ್ಟುತ್ತಿದ್ದರು. ಅವರಿಗೆ ಧರ್ಮದ ತುಳಿತ ತಿಳಿದಿಲ್ಲ. ಈ ರೀತಿಯ ಹೇಳಿಕೆ ಸಮಾಜವನ್ನು ಪ್ರೇರೇಪಿಸುವುದು ಎಂದು ಹೇಳಿದ್ದರೆ.

ಬುಕ್ಕಲ್ ನವಾಬ್ ಈ ಹೇಳಿಕೆ ಪ್ರತಿಕ್ರಿಯಿಸಿರುವ ಯುಪಿ ಸರಕಾರದ ಹಿರಿಯ ಕ್ಯಾಬಿನೆಟ್ ಮಂತ್ರಿಯಾದ ಸುರೇಶ್ ಖನ್ನಾ ತಾನು ಹನುಮಂತನ ದೊಡ್ಡ ಭಕ್ತನೆಂದು ಹೇಳುತ್ತಾರೆ. ಹನುಮಾನ್ ಅತಿದೊಡ್ಡ ಪ್ರತಿಮೆಯನ್ನು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. ನಾವು ಪೂಜಿಸುವ ದೇವರನ್ನು ನಾವು ಹೇಗೆ ವಿಭಾಗಿಸಬಹುದು? ದೇವರನ್ನು ಜಾತಿಗಳಾಗಿ ವಿಭಜಿಸುವುದು ತಪ್ಪು ಎಂದಿದ್ದಾರೆ.

ವಿಪಕ್ಷದ ದಾಳಿ:
ಸಮಾಜವಾದಿ ಪಕ್ಷದ ವಕ್ತಾರ ಸುನಿಲ್ ಸಿಂಗ್ ಸಾಜನ್, ಬಿಜೆಪಿ ನಾಯಕರು ಹನುಮಾನ್ ಜಾತಿ ತಿಳಿಸಲು ತರಾತುರಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೊದಲು ಅವರ ಮುಖ್ಯಮಂತ್ರಿ ಹನುಮಾನ್ ಜಿ ಅವರು 'ದಲಿತ'ರಾಗಿದ್ದರೆಂದು ಹೇಳಿದರು. ಅವರ ಮಂತ್ರಿ ಹನುಮಾನ್ 'ಜಾಟ್' ಎಂದುದ್ದರು, ಇದೀಗ ಬುಕ್ಕಲ್ ನವಾಬ್ ಹನುಮಾನ್ 'ಮುಸ್ಲಿಂ' ಎಂದಿದ್ದಾರೆ. ದೇವರಿಗೆ ಯಾವುದೇ ಜಾತಿ ಇಲ್ಲ. ಆದರೆ ಇದು ಬಿಜೆಪಿಯ ನಾಯಕರ ಮಾನಸಿಕ ಸ್ಥಿತಿಯಾಗಿದೆ. ಅವರು ಹನುಮಾನ್ ಜಿಯನ್ನು ವಿಭಜಿಸಲು ಬದ್ಧರಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮಾನ್ ಜಿ ದಲಿತ ಎಂದು ಹೇಳಿದ ಬಳಿಕವೇ ಹನುಮನ ಜಾತಿ ರಾಜಕೀಯವಾಗಿ ಸಕ್ರಿಯವಾಗಿದೆ. ಈ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. 
 

Trending News