ಏಕಾದಶಿಯಂದು ಯುಎಸ್ ಚಂದ್ರನ ಬಳಿ ನೌಕೆ ಉಡಾವಣೆ ಮಾಡಿದ್ದರಿಂದ ಸಫಲವಾಯಿತು- ಸಂಭಾಜಿ ಭಿಡೆ

  ಅಮೆರಿಕಾದ ವಿಜ್ಞಾನಿಗಳು ಏಕಾದಶಿಯಂದು ಚಂದ್ರನ ಬಳಿ ರಾಕೆಟ್ ಉಡಾವಣೆ ಮಾಡಿದ್ದರಿಂದಾಗಿ ಅದು ಯಶಸ್ವಿಯಾಯಿತು ಎಂದು ಸಂಭಾಜಿ ಭಿಡೆ ಅಭಿಪ್ರಾಯಪಟ್ಟಿದ್ದಾರೆ.

Last Updated : Sep 10, 2019, 12:49 PM IST
ಏಕಾದಶಿಯಂದು ಯುಎಸ್ ಚಂದ್ರನ ಬಳಿ ನೌಕೆ ಉಡಾವಣೆ ಮಾಡಿದ್ದರಿಂದ ಸಫಲವಾಯಿತು- ಸಂಭಾಜಿ ಭಿಡೆ  title=

ನವದೆಹಲಿ:  ಅಮೆರಿಕಾದ ವಿಜ್ಞಾನಿಗಳು ಏಕಾದಶಿಯಂದು ಚಂದ್ರನ ಬಳಿ ರಾಕೆಟ್ ಉಡಾವಣೆ ಮಾಡಿದ್ದರಿಂದಾಗಿ ಅದು ಯಶಸ್ವಿಯಾಯಿತು ಎಂದು ಸಂಭಾಜಿ ಭಿಡೆ ಅಭಿಪ್ರಾಯಪಟ್ಟಿದ್ದಾರೆ.

ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಸಂಪರ್ಕ ಇನ್ನೇನೂ ಚಂದ್ರನ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು, ಈ ಹಿನ್ನಲೆಯಲ್ಲಿ ಪ್ರತಿಕ್ರಿಯೇ ನೀಡಿರುವ ಮಹಾರಾಷ್ಟ್ರದ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಮುಖ್ಯಸ್ಥರಾಗಿರುವ ಸಂಭಾಜಿ ಭಿಡೆ 'ಅಮೆರಿಕಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ  ಕಳುಹಿಸಲು 38 ಬಾರಿ ಪ್ರಯತ್ನಿಸಿ ವಿಫಲವಾಗಿತ್ತು ಎಂದು ಭಿಡೆ ಸೋಲಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಪುನರಾವರ್ತಿತ ವೈಫಲ್ಯಗಳನ್ನು ಅನುಸರಿಸಿ, ಅಮೆರಿಕದ ವಿಜ್ಞಾನಿಗಳಲ್ಲಿ ಒಬ್ಬರು ಭಾರತೀಯ ವ್ಯವಸ್ಥೆಯನ್ನು ಸಮಯ ಮಾಪನ ಅನುಸರಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು. ಆಶ್ಚರ್ಯ ಎನ್ನುವಂತೆ ಅಮೆರಿಕನ್ನರು ತಮ್ಮ ಬಾಹ್ಯಾಕಾಷ ನೌಕೆಯನ್ನು ಭಾರತೀಯ ಕಾಲಮಾನದ ಪ್ರಕಾರ ಅವರು ಕಳಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು. 

ಇಂತಹ ವಿವಾದಾತ್ಮಕ ಹೇಳಿಕೆಯನ್ನು ಅವರು ನೀಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಅವರು ತಮ್ಮ ತೋಟದಿಂದ ಮಾವಿನ ಹಣ್ಣನ್ನು ತಿಂದ ಹೆಣ್ಣು ಮಕ್ಕಳು ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ ಎಂದು ಹೇಳಿದ್ದರು.

 ಸಂಭಾಜಿ ಭಿಡೆ 2018 ರ ಜನವರಿಯಲ್ಲಿ ನಡೆದ ಕೋರೆಗಾಂವ್-ಭೀಮಾ ಹಿಂಸಾಚಾರದ ಆರೋಪಿಯಾಗಿದ್ದಾರೆ.

 

Trending News