Wedding Viral Video : ಮದುವೆ ಎನ್ನುವುದು ಒಂದು ಪವಿತ್ರ ಸಂಬಂಧ. ಅದು ಒಂದೆರಡು ದಿನದ ಆಟವಲ್ಲ. ಜೀವನ ಪೂರ್ತಿ ನಿಭಾಯಿಸಬೇಕಾಗಿರುವ ಸಂಬಂಧ. ವೈವಾಹಿಕ ಜೀವನದಲ್ಲಿಯೂ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಯಾವುದೋ ಒಂದು ಕಾರಣದಿಂದ ಮದುವೆ ಮುರಿದು ಬೀಳುವುದೂ ಇದೆ. ಆದರೆ ವೈವಾಹಿಕ ಸಂಬಂಧವನ್ನು ಸಾಮಾನ್ಯವಾಗಿ ಯಾರು ಕೂಡಾ ಸುಲಭವಾಗಿ ಮುರಿದುಕೊಳ್ಳುವುದಿಲ್ಲ. ಒಮ್ಮೊಮ್ಮೆಅನಿವಾರ್ಯವಾಗಿ ಈ ಬಂಧದಿಂದ ಮುಕ್ತವಾಗ ಬೇಕಾದ ಸನ್ನಿವೇಶವನ್ನು ಕೂಡಾ ತಳ್ಳಿ ಹಾಕುವಂತಿಲ್ಲ.
ಇದೇ ಕಾರಣಕ್ಕೆ ಮದುವೆ ಮಾಡಬೇಕಾದರೆ ವಧು ಮತ್ತು ವರನ ಬಗ್ಗೆ ಎರಡೂ ಮನೆಯವರು ಬಹಳ ವಿಚಾರಣೆ ನಡೆಸುತ್ತಾರೆ. ಹುಡುಗ ತಮ್ಮ ಮಗಳಿಗೆ ಯೋಗ್ಯನೇ, ಹುಡುಗಿ ನಮ್ಮ ಮನೆಗೆ ಸರಿ ಹೊಂದುತ್ತಾಳೆಯೇ ಎನ್ನುವುದರ ಬಗ್ಗೆ ಬಹಳ ವಿಚಾರಣೆ ನಡೆಸಿ ಸಂಬಂಧ ಮುಂದುವರೆಸುತ್ತಾರೆ. ಆದರೆ ಕೆಲವೊಂದು ಕಡೆಗಳಲ್ಲಿ ಹೆತ್ತವರ ಒತ್ತಾಯಕ್ಕೆ, ಹಠಕ್ಕೆ ಬಿದ್ದು ಮದುವೆ ನಿಶ್ಚಯ ಮಾಡಿಕೊಳ್ಳುವುದೂ ಇದೆ. ಆದರೆ ಇಂಥಹ ಸಂಬಂಧ ಎಲ್ಲಿಯವರೆಗೆ ನಿಲ್ಲಬಲ್ಲದು ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ.
ಇದನ್ನೂ ಓದಿ : Viral Video : ಮಹಿಳೆಯ ಜೊತೆ ಮಾತನಾಡುವ ಮೊಸಳೆ.! ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಇಲ್ಲೊಂದು ಮದುವೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇಲ್ಲಿ ವರ ವಧು ವೇದಿಕೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ವರ ತನ್ನ ಪಕ್ಕದಲ್ಲಿ ಕುಳಿತುರುವ ಮಹಿಳೆಯ ಜೊತೆ ಮಾತಿನಲ್ಲಿಯೇ ಮುಳುಗಿ ಹೋಗಿದ್ದಾನೆ. ಹಿಂದಿನಿಂದ ಬಂದ ಆ ವಧುವಿನ ಪ್ರೇಮಿ ವಧುವಿನ ಹಣೆಗೆ ಐದು ಬಾರಿ ಸಿಂಧೂರ ಹಚ್ಚುತ್ತಾನೆ. ಅಂದ ಹಾಗೆ ಉತ್ತರ ಭಾರತದ ಮದುವೆಯಲ್ಲಿ ಸಿಂಧೂರಕ್ಕೆ ಬಹಳ ಪ್ರಾಶಸ್ತ್ಯವಿದೆ. ಹಣೆಗೆ ಸಿಂಧೂರ ಹಚ್ಚಿದರೆಂದರೆ ಮದುವೆ ನಡೆದೇ ಹೋಯಿತು ಎನ್ನುವ ಲೆಕ್ಕಾಚಾರ.
ಇದನ್ನೂ ಓದಿ : Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು
ಸಿಂಧೂರ ಹಚ್ಚುತ್ತಿದ್ದಂತೆಯೇ ವಧುವನ್ನು ಅಲ್ಲಿಂದ ಕರೆದುಕೊಂಡು ಹಿಂಬಾಗಿಲಿನ ಮೂಲಕ ತೆರಳುತ್ತಾನೆ. ವಧು ಕೂಡಾ ಬಹಳ ಆರಾಮಾಗಿಯೇ ಆ ವ್ಯಕ್ತಿಯ ಜೊತೆ ತೆರಳಿದ್ದಾಳೆ. ಈ ವಿಡಿಯೋ ನೋಡುವಾಗ ಆ ವ್ಯಕ್ತಿಯ ಪೂರ್ವಾಪರ ವಧುವಿಗೆ ಮೊದಲೇ ಗೊತ್ತು ಎನ್ನುವುದು ವಧುವಿನ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ. ಯಾಕೆಂದರೆ ಸಿಂಧೂರ ಹಚ್ಚುವಾಗ ಒಂದು ಸಣ್ಣ ಪ್ರತಿರೋಧ ಕೂಡಾ ವಧುವಿನಿಂದ ವ್ಯಕ್ತವಾಗುವುದಿಲ್ಲ.
ಈ ವೀಡಿಯೊವನ್ನು Instagram ನಲ್ಲಿ shitty.humours ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. (ಗಮನಿಸಿ : Zee News ಈ ವೀಡಿಯೊದ ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ. ಇದು ತಮಾಷೆಯ ವೀಡಿಯೊ ಕೂಡ ಆಗಿರಬಹುದು.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.