ಬೆಂಗಳೂರು: ಹಾವುಗಳನ್ನು ಕಂಡರೆ ಕೆಲವರು ಮಾರುದ್ದ ದೂರ ಓಡಿಹೋಗುತ್ತಾರೆ. ಹಾವು ನೋಡಿದರೆ ಸಾಕು ಕೆಲವರಿಗೆ ಮಾತೇ ಬರುವುದಿಲ್ಲ. ಪ್ರಪಂಚದಲ್ಲಿ ಅನೇಕ ವಿಷಕಾರಿ ಸರ್ಪಗಳಿವೆ. ಈ ಪೈಕಿ ನಾಗರಹಾವು ಅತ್ಯಂತ ವಿಷಕಾರಿ. ಈ ಹಾವು ಕಚ್ಚಿದರೆ ಕೆಲವೇ ನಿಮಿಷಗಳಲ್ಲಿ ಮನುಷ್ಯನ ಪ್ರಾಣ ಹಾರಿಹೋಗುತ್ತದೆ.
ನಾಗರಹಾವಿಗೆ ಭಾರತೀಯರು ವಿಶೇಷ ಸ್ಥಾನ ನೀಡಿದ್ದಾರೆ. ದೈವಿಸ್ವರೂಪವೆಂದು ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ನಾಗರಹಾವು ಕಂಡರೆ ಪ್ರತಿಯೊಬ್ಬರೂ ಕೈಮುಗಿಯುತ್ತಾರೆ. ಹಾವುಗಳ ಜೊತೆ ಚೆಲ್ಲಾಟವಾಡುವುದು ಪ್ರಾಣಕ್ಕೆ ಕುತ್ತು ತಂದುಕೊಂಡಂತೆ. ಕೆಲವರು ವಿಷಕಾರಿ ಹಾವುಗಳ ಜೊತೆಗೆ ಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತಹದ್ದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Mallikarjun Kharge : 'ಬಕ್ರೀದ್‌ನಲ್ಲಿ ಬದುಕಿದರೆ ಮೊಹರಂನಲ್ಲಿ ಕುಣಿಯಬಹುದು'
ಇತ್ತೀಚೆಗಷ್ಟೇ ನಡೆದಿರುವ ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಉರಗ ತಜ್ಞನೊಬ್ಬ ನಾಗರಹಾವು ರಕ್ಷಿಸಿರುತ್ತಾನೆ. ಹೀಗೆ ರಕ್ಷಿಸಿದ ಹಾವಿನ ಹೆಡೆಗೆ ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಆ ಹಾವು ಆತನ ತುಟಿಗೆ ಕಚ್ಚಿಬಿಟ್ಟಿದೆ. ಕೂಡಲೇ ಕೈಯಲ್ಲಿದ್ದ ಹಾವನ್ನು ಆತ ದೂರಕ್ಕೆ ಎಸೆದಿದ್ದಾನೆ. ಈ ದೃಶ್ಯ ನೊಡುತ್ತಿದ್ದ ಸ್ಥಳದಲ್ಲಿದ್ದವರು ಒಂದುಕ್ಷಣ ಬೆಚ್ಚಿಬಿದ್ದಿದ್ದಾರೆ.
A reptile expert who went to kiss a cobra and got bitten on the lip..
He tried to kiss the snake after rescuing it.
#Kiss #Cobra #CobraBite #Viral pic.twitter.com/Khbfc2vK3W— AH Siddiqui (@anwar0262) October 1, 2022
ಹಾವುಗಳೊಂದಿಗೆ ಸರಸವಾಡುವುದು ಜೀವಕ್ಕೆ ಕುತ್ತು ತಂದುಕೊಂಡಂತೆ. ಈ ಉರಗ ತಜ್ಞನಿಗೂ ಅದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಹಲವಾರು ಬಾರಿ ತಾವು ಹಿಡಿದು ರಕ್ಷಿಸಿದ ಹಾವುಗಳ ಹೆಡೆಗೆ ಉರಗ ತಜ್ಞರು ಮುತ್ತಿಡುವ ಸಾಹಸ ಮಾಡುತ್ತಾರೆ. ಹಲವು ಬಾರಿ ಈ ರೀತಿ ಮಾಡಲು ಹೋಗಿ ಹಾವು ಕಚ್ಚಿಸಿಕೊಂಡು ಅನೇಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಭಿನ್ನ ಅಭಿಪ್ರಾಯಗಳು.! ಸಿಜೆಐ ಪೀಠಕ್ಕೆ ಪ್ರಕರಣ
ಹಾವಿನ ಹೆಡೆಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಉರಗ ತಜ್ಞನ ಈ ವಿಡಿಯೊ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನರು ಈ ವಿಡಿಯೋ ವೀಕ್ಷಿಸಿ ಹೌಹಾರಿದ್ದಾರೆ. ಹಾವುಗಳ ಜೊತೆಗೆ ಸರಸವಾಡಲು ಹೋಗುವ ಮುನ್ನ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಸೂಕ್ತವೆಂದು ಅನೇಕರು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.