Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!

ಕೀರ್ತಿನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ನಡೆದಿದೆ.

Updated: May 4, 2019 , 02:09 PM IST
Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!
Video Grab

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯ ಪ್ರೇಮ ನಿವೇದನೆಗೆ ಯಾವುದೇ ಲಗಾಮ್ ಇಲ್ಲದಂತಾಗಿದೆ. ಎಲ್ಲಂದರಲ್ಲಿ ಕುಳಿತು ಪ್ರೇಮದಾಟ ಆಡುವವರ ಸಂಖ್ಯೆ ಎಗ್ಗಿಲ್ಲದೇ ಹೆಚ್ಚುತ್ತಿದೆ. ಇದೀಗ ಅಂತಹದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ದೆಹಲಿಯ ಪುಲ್ ಟ್ರಾಫಿಕ್ ಇರೋ ರಾಜೋರಿ ಗಾರ್ಡನ್ ಬಳಿಯಿರುವ ಕೀರ್ತಿನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ನಡೆದಿದೆ.

ಈ ಘಟನೆಯ ವೀಡಿಯೋವನ್ನು ಐಪಿಎಸ್ ಅಧಿಕಾರಿ HGS ಧಲಿವಾಲ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಇಂತಹ ಪ್ರಕರಣಗಳಿಗಾಗಿ ಮೋಟಾರು ವಾಹನ ಕಾಯ್ದೆಯಡಿ ನೂತನ ನಿಯಮಗಳನ್ನು ಜಾರಿಗೆ ತರಬೇಕಿದೆ ಎಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.