'ಸುಂದರ ಮುಖ ನೋಡಿ ಮತ ಹಾಕಲ್ಲ': ಪ್ರಿಯಾಂಕ ಗಾಂಧಿ ಉದ್ದೇಶಿಸಿ ಬಿಜೆಪಿ ಸಚಿವ

ಪ್ರಿಯಾಂಕಾ ಗಾಂಧಿ ವಾದ್ರಾ ತುಂಬಾ ಸುಂದರವಾಗಿದ್ದಾರೆ. ಆದರೆ ರಾಜಕೀಯದಲ್ಲಿ ಅವರು ಏನೂ ಸಾಧನೆ ಮಾಡಿಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

Last Updated : Jan 25, 2019, 02:59 PM IST
'ಸುಂದರ ಮುಖ ನೋಡಿ ಮತ ಹಾಕಲ್ಲ': ಪ್ರಿಯಾಂಕ ಗಾಂಧಿ ಉದ್ದೇಶಿಸಿ ಬಿಜೆಪಿ ಸಚಿವ title=
Pic Courtesy: ANI

ಪಾಟ್ನಾ: ಬಿಹಾರ ಸರ್ಕಾರದ ಬಿಜೆಪಿ ಸಚಿವ ವಿನೋದ್ ನಾರಾಯಣ್ ಝಾ ಮಾಧ್ಯಮದೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, 'ಸುಂದರವಾದ ಮುಖ ನೋಡಿ ಮತ ಹಾಕಲ್ಲ' ಎಂದು ಹೇಳಿದ್ದಾರೆ. ಇದರ ಜೊತೆಯಲ್ಲೇ ಪ್ರಿಯಾಂಕ ಅವರು ರಾಬರ್ಟ್ ವಾದ್ರಾ ಅವರ ಪತ್ನಿ, ರಾಬರ್ಟ್ ವಾದ್ರಾ ಭ್ರಷ್ಟಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚೆಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಯುಪಿ ಉಸ್ತುವಾರಿಯಾಗಿ ಪ್ರಿಯಾಂಕ ಗಾಂಧಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಿಯಾಂಕಾ ಗಾಂಧಿ ವಾದ್ರಾ ತುಂಬಾ ಸುಂದರವಾಗಿದ್ದಾರೆ. ಆದರೆ ರಾಜಕೀಯದಲ್ಲಿ ಅವರು ಏನೂ ಸಾಧನೆ ಮಾಡಿಲ್ಲ ಎಂದರು.

ಏತನ್ಮಧ್ಯೆ, ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಕಾಂಗ್ರೆಸ್ ಮೈತ್ರಿ ತೊರೆದಿದೆ. ಈ ಒತ್ತಡದಲ್ಲಿ ಕಾಂಗ್ರೆಸ್ ಪ್ರಿಯಾಂಕ ಗಾಂಧಿಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಾಡಲು ನಿರ್ಧರಿಸಿದೆ. ರಾಬರ್ಟ್ ವಾದ್ರಾ ಅವರ ಪ್ರತಿನಿಧಿಯಾಗಿ ಅವರು ರಾಜಕೀಯಕ್ಕೆ ಬರುತ್ತಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ. 

ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ಬಗ್ಗೆ ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಹಿರಿಯ ನಾಯಕ ರವಿ ಶಂಕರ್ ಪ್ರಸಾದ್, ಅವರು(ಪ್ರಿಯಾಂಕ) ವೈಯಕ್ತಿಕವಾಗಿ  ಪಕ್ಷದಲ್ಲಿ  "ದೊಡ್ಡ ಪಾತ್ರ"ಕ್ಕೆ ಅರ್ಹರಾಗಿದ್ದಾರೆ ಎಂದು ಹಳಿದರು. ಪ್ರಿಯಾಂಕರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಕ್ಕೆ ಶುಭಾಶಯ ತಿಳಿಸಿದ ರವಿಶಂಕರ್, ವಾಸ್ತವವಾಗಿ, ಅವರ ವ್ಯಕ್ತಿತ್ವ ಅವರಿಗೆ ನೀಡಿರುವ ಜವಾಬ್ದಾರಿಗೆ ಅರ್ಹವಾಗಿದೆ. ಆದರೆ ಪೂರ್ವ ಉತ್ತರ ಪ್ರದೇಶಕ್ಕೆ ಮಾತ್ರ ಅವರಿಗೆ ಸೀಮಿತ ಪಾತ್ರ ನೀಡಲು ಕಾರಣವೇನು ಎಂದು ತಿಳಿಯಲು ಬಯಸುತ್ತೇನೆ? ಎಂದರು.
 

Trending News