ನಾವು ಹಿಂದು ಅಥವಾ ಮುಸ್ಲಿಮರಾಗಿ ಕಾರ್ಯ ನಿರ್ವಹಿಸುತ್ತಿಲ್ಲ - ಕಾಶ್ಮೀರದ ಡಿಜಿಪಿ

    

Updated: Apr 13, 2018 , 04:10 PM IST
ನಾವು ಹಿಂದು ಅಥವಾ ಮುಸ್ಲಿಮರಾಗಿ ಕಾರ್ಯ ನಿರ್ವಹಿಸುತ್ತಿಲ್ಲ - ಕಾಶ್ಮೀರದ ಡಿಜಿಪಿ

ನವದೆಹಲಿ: ಕಾಶ್ಮೀರದ ಕಥುವಾದಲ್ಲಿ ನಡೆದ ಬಾಲಕಿಯ ಮೇಲೆ ನಡೆದ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ  ವಹಿಸಬೇಕೆಂದು ಒತ್ತಾಯಿಸುತ್ತಿರುವ  ಬಿಜೆಪಿ ನಾಯಕರ ವಿರುದ್ದ ಕಾಶ್ಮೀರದ ಡಿಜಿಪಿ ಎಸ್ ಪಿ ವೈದ್ಯ ಹರಿಹಾಯ್ದಿದ್ದಾರೆ.

ಘಟನೆಯ ಕುರಿತಾಗಿ ಈಗಾಗಲೇ ಕ್ರೈಂ ಬ್ರಾಂಚ್  ಮತ್ತು ವಿಶೇಷ ಪೋಲಿಸ್ ತಂಡವು ವೃತ್ತಿ ಪರತೆಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದ್ದು,ಇದರಲ್ಲಿ ಸಾಕ್ಷಿ ನಾಶಪಡಿಸಲು ಯತ್ನಿಸಿದ ತಮ್ಮದೇ ಸಿಬ್ಬಂಧಿಯನ್ನು ಸಹ ಕೈ ಬಿಟ್ಟಿಲ್ಲ ಎಂದು ಅವರು ತಿಳಿಸಿದರು.ಇನ್ನೂ ಮುಂದುವರೆದು ನಾವು ಇಲಾಖೆಯಲ್ಲಿ ಹಿಂದು ಅಥವಾ ಮುಸ್ಲಿಮರಾಗಿ ಕೆಲಸ ನಿರ್ವಹಿಸುತ್ತಿಲ್ಲ ಬದಲಾಗಿ ಪೋಲಿಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.