ನವದೆಹಲಿ: ಭಾರತ ರತ್ನ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾದ ನಂತರ ಪ್ರತಿಕ್ರಿಯಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಸಂವಿಧಾನದ ಮೂಲಭೂತ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ, ಸಮಾನತೆಯನ್ನು ರಕ್ಷಿಸಬೇಕೆಂದು ಕರೆ ನೀಡಿದರು.
Our Founding Fathers have guided us this far, let us go farther with greater vigour & spirit to create an India of our dreams. On this #RepublicDay, let us strengthen our resolve to live up to the ideals of our Constitution. (2/3)#CitizenMukherjee pic.twitter.com/3tv65Xgzxs
— Pranab Mukherjee (@CitiznMukherjee) January 26, 2019
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಶುಕ್ರವಾರದಂದು ಭೂಪೇನ್ ಹಜಾರಿಕಾ, ನಾನಾಜಿ ದೇಶಮುಖ್ ಅವರ ಜೊತೆ ಜಂಟಿಯಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ನಂತರ ಗಣರಾಜ್ಯೋತ್ಸವದ ನಿಮಿತ್ತ ದೇಶದ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತಾ " ಭಾರತದ ಗಣರಾಜ್ಯೋತ್ಸವ 70 ವರ್ಷಕ್ಕೆ ಪಾದರ್ಪಣೆಯಾಗುತ್ತಾ ಬಂತು, ನಮ್ಮ ಸಂವಿಧಾನದ ಮಹತ್ವವೆನೆಂದರೆ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆ ಮತ್ತು ಭಾತೃತ್ವದ ಅಂಶಗಳನ್ನು ದೇಶದ ಅಭಿವೃದ್ದಿಗೆ ಸಹಾಯಕವಾಗುವ ನಿಟ್ಟಿನಲ್ಲಿ ರೂಪಿಸಲಾಗಿದೆ.ಆದ್ದರಿಂದ ಈ ದಿನದಂದು ನಮ್ಮ ಸಂವಿಧಾನದ ಈ ಮೌಲ್ಯಗಳನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಣಬ್ ಮುಖರ್ಜೀ ರಾಷ್ಟ್ರಪತಿಯಾಗುವುದಕ್ಕೂ ಮುನ್ನ ಕೇಂದ್ರದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು, ವಿಶೇಷವೆಂದರೆ ಇಂದಿರಾ ಗಾಂಧಿಯವರ ಕಾಲದಿಂದಲೂ ಅವರು ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.