Weather Update 8 January Coldwave Alert: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಚಳಿ ಮುಂದುವರೆದಿದೆ. ಗುಡ್ಡಗಾಡು ರಾಜ್ಯಗಳಲ್ಲಿ ಹಿಮಪಾತವಾಗುತ್ತಿದ್ದು, ಬಯಲು ಸೀಮೆಯಲ್ಲಿ ಚಳಿಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಶನಿವಾರ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಮೈಕೊರೆಯುವ ಚಳಿಗಾಳಿ ಕಾಣಿಸಿಕೊಂಡಿದ್ದು, ರಾಜಧಾನಿಯ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಕನಿಷ್ಠ ತಾಪಮಾನ 2.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹೆಚ್ಚಿನ ಸ್ಥಳಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರವಾಸಿ ಸ್ಥಳಗಳಿಗಿಂತ ಕಡಿಮೆಯಾಗಿದೆ. ಇನ್ನು ಕೇಂದ್ರ ದೆಹಲಿಯ ರಿಡ್ಜ್ ಹವಾಮಾನ ಕೇಂದ್ರದಲ್ಲಿ ಕನಿಷ್ಠ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ.
ಇದನ್ನೂ ಓದಿ: ಇಶಾನ್ ಕಿಶನ್ ಮೇಲೆ ಮುನಿಸಿಕೊಂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!
ಹವಾಮಾನ ಇಲಾಖೆಯು ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಿಗೆ ಭಾನುವಾರ 'ಆರೆಂಜ್' ಅಲರ್ಟ್ ನೀಡಿದ್ದು, ದಟ್ಟವಾದ ಮಂಜು, ಶೀತ ಮತ್ತು ಶೀತ ಗಾಳಿಯ ಪರಿಸ್ಥಿತಿಗಳು ಮುಂದುವರಿಯುತ್ತದೆ ಎಂದು ಎಚ್ಚರಿಸಿದೆ.
ಹವಾಮಾನ ಇಲಾಖೆಯ (ಐಎಂಡಿ) ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಈ ತೀವ್ರ ಚಳಿಯು ಕೆಲ ದಿನಗಳ ಕಾಲ ಹೀಗೆ ಮುಂದುವರೆಯುವ ಸಾಧ್ಯತೆಯಿದೆ. ಉತ್ತರ ಭಾರತದ ಬಹುತೇಕ ನಗರಗಳು ಚಳಿಯ ಹಿಡಿತದಲ್ಲಿವೆ. ಬನಸ್ಥಲಿ (1.7°C), ಸಿಕರ್ (1°C), ಪಿಲಾನಿ (0.6°C) ಮತ್ತು ಚುರು (0°C) ಸೇರಿದಂತೆ ರಾಜಸ್ಥಾನದ ಕೆಲವು ಸ್ಥಳಗಳಲ್ಲಿಯೂ ಸಹ ಸರಾಸರಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ.
ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಜನವರಿ 8 ರಿಂದ 9 ರವರೆಗೆ ವಾಯುವ್ಯ ಭಾರತದಲ್ಲಿ ಚಳಿಗಾಲದ ತೀವ್ರ ಪರಿಸ್ಥಿತಿಗಳು ಇರುತ್ತವೆ. ಸದ್ಯ ಸೋಮವಾರವಾದರೂ ಚಳಿ, ಮಂಜು ಮುಂದುವರೆಯಲಿದೆ. ಅದೇ ರೀತಿ ಮುಂದಿನ 48 ಗಂಟೆಗಳಲ್ಲಿ ಹರಿಯಾಣ ಮತ್ತು ಪಂಜಾಬ್ ನಲ್ಲಿ ದಟ್ಟವಾದ ಮಂಜು ಆವರಿಸಲಿದೆ.
ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಮುಂದಿನ ಮೂರು ದಿನಗಳ ಕಾಲ ಚಳಿಗಾಳಿ ಮೊದಲಿಗಿಂತ ಹೆಚ್ಚು ಇರಲಿದೆ. ಮಧ್ಯಪ್ರದೇಶದಲ್ಲೂ ಇನ್ನೆರಡು ದಿನ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದ್ದು, ಚಳಿ ಹೆಚ್ಚಾಗಲಿದೆ. ಜನವರಿ 8 ರಂದು ರಾಜಸ್ಥಾನ, ಹರಿಯಾಣ, ಚಂಡೀಗಢದಲ್ಲಿ ಚಳಿಯ ಸ್ಥಿತಿ ಮುಂದುವರಿಯಲಿದೆ.
ದಟ್ಟವಾದ ಮಂಜಿನ ಹೊದಿಕೆಯು ವಾಯುವ್ಯ ಭಾರತ, ದೇಶದ ಮಧ್ಯ ಮತ್ತು ಪೂರ್ವ ಭಾಗಗಳನ್ನು ಆವರಿಸಿದೆ. ಇದು ರಸ್ತೆ, ರೈಲು ಮತ್ತು ವಾಯು ಸಂಚಾರದ ಮೇಲೆ ಪರಿಣಾಮ ಬೀರಲಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿಯಿರುವ ಪಾಲಂ ವೀಕ್ಷಣಾಲಯದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ 25 ಮೀಟರ್‌ಗೆ ಕುಸಿದಿದೆ.
ಇನ್ನು ಮಂಜಿನ ವಾತಾವರಣದಿಂದಾಗಿ 36 ರೈಲುಗಳು ಒಂದು ಗಂಟೆಯಿಂದ ಏಳು ಗಂಟೆಗಳವರೆಗೆ ತಡವಾಗಿ ಚಲಿಸುತ್ತಿವೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಮೆಟ್ ಆಫೀಸ್ ಪ್ರಕಾರ, ಗೋಚರತೆ ಶೂನ್ಯ ಮತ್ತು 50 ಮೀಟರ್ ನಡುವೆ ಇದ್ದಾಗ, 'ಅತ್ಯಂತ ದಟ್ಟವಾದ' ಮಂಜು ಇರುತ್ತದೆ. ಆದರೆ, 51 ಮತ್ತು 200 ಮೀಟರ್‌ಗಳ ನಡುವಿನ ಗೋಚರತೆಯಲ್ಲಿ 'ದಟ್ಟವಾದ' ಮಂಜು ಸಂಭವಿಸುತ್ತದೆ. 201 ಮತ್ತು 500 ಮೀಟರ್‌ಗಳ ನಡುವೆ 'ಮಧ್ಯಮ', 501 ಮತ್ತು 1,000 ಮೀಟರ್‌ಗಳ ನಡುವಿನ ಗೋಚರತೆಯಲ್ಲಿ 'ಬೆಳಕು' ಕಂಡುಬರುತ್ತದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಉತ್ಸವ 2023 : ಸಿಎಂ ಕಾಲಿಗೆ ಬಿದ್ದು, ತಬ್ಬಿಕೊಂಡ ಕಿಚ್ಚ ಸುದೀಪ್!
IMD ಯ ಮುನ್ಸೂಚನೆಯ ಪ್ರಕಾರ, 'ಉತ್ತರ ಭಾರತದ ಕೆಲವು ಭಾಗಗಳಲ್ಲಿ ಚಳಿಯಿಂದ ಎರಡು ದಿನಗಳ ನಂತರ ಅಂದರೆ ಮಂಗಳವಾರದಿಂದ ಸ್ವಲ್ಪ ನೆಮ್ಮದಿ ಸಿಗಬಹುದು. ವಾಯುವ್ಯ ಭಾರತದಲ್ಲಿ, ಮುಂದಿನ 2 ದಿನಗಳ ನಂತರ, ಕನಿಷ್ಠ ತಾಪಮಾನದಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಳ ದಾಖಲಾಗಬಹುದು. ಇದರ ಪ್ರಕಾರ ನಡುಗುವ ಚಳಿಯಿಂದ ಕೊಂಚ ಸಮಾಧಾನ ಖಂಡಿತಾ ಸಿಗುತ್ತದೆಯಾದರೂ ತಾಪಮಾನದಲ್ಲಿ ಹೆಚ್ಚು ಏರಿಕೆಯಾಗುವ ಸಾಧ್ಯತೆ ಇಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.