West Bengal Elections 2021: ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಲ್ಲಿ ಮತದಾನ ಆರಂಭ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಹೌರಾದ 44 ಸ್ಥಾನಗಳಲ್ಲಿ 9, ದಕ್ಷಿಣ 24 ಪರಗಣಗಳಲ್ಲಿ 11, ಅಲಿಪುರ್ದುರ್‌ನಲ್ಲಿ 5, ಕೂಚ್ ಬೆಹಾರ್‌ನಲ್ಲಿ 9 ಮತ್ತು ಹೂಗ್ಲಿಯಲ್ಲಿ 10  ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

Written by - Yashaswini V | Last Updated : Apr 10, 2021, 08:39 AM IST
  • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ನಾಲ್ಕನೇ ಹಂತದ ಮತದಾನ
  • ಒಟ್ಟು 15,940 ಮತದಾನ ಕೇಂದ್ರಗಳಲ್ಲಿ ಮತದಾನ
  • ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 1,15,81,022 ಮತದಾರರು 373 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ
West Bengal Elections 2021: ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಲ್ಲಿ ಮತದಾನ ಆರಂಭ title=
Image courtesy: ANI

Assembly Elections 2021: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದ್ದು ಹೌರಾದಲ್ಲಿ ಒಂಬತ್ತು, ದಕ್ಷಿಣ 24 ಪರಗಣಗಳಲ್ಲಿ 11, ಅಲಿಪುರ್ದುರ್‌ನಲ್ಲಿ ಐದು, ಕೂಚ್ ಬೆಹಾರ್‌ನಲ್ಲಿ ಒಂಬತ್ತು ಮತ್ತು ಹೂಗ್ಲಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 15,940 ಮತದಾನ ಕೇಂದ್ರಗಳಲ್ಲಿ  ಮತದಾನ ನಡೆಯುತ್ತಿದೆ. 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ (West Bengal Assembly Elections) ನಾಲ್ಕನೇ ಹಂತದ ಮತದಾನದ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಲು 15,940 ಮತದಾನ ಕೇಂದ್ರಗಳಲ್ಲಿ ಚುನಾವಣಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಕನಿಷ್ಠ 789 ತುಕಡಿಗಳನ್ನು ನಿಯೋಜಿಸಿದೆ. ಪ್ರತಿ ಸಿಎಪಿಎಫ್ ತುಕಡಿಯು ಅಧಿಕಾರಿಗಳು ಸೇರಿದಂತೆ 100 ಸಿಬ್ಬಂದಿಗಳನ್ನು ಒಳಗೊಂಡಿದೆ.  ಕೂಚ್ ಬಿಹಾರದಲ್ಲಿ ಗರಿಷ್ಠ ಸಂಖ್ಯೆಯ ಸಿಎಪಿಎಫ್‌ನ 187 ಸೈನಿಕರನ್ನು ನಿಯೋಜಿಸಲಾಗಿದ್ದು ಅಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ವಿರಳವಾದ ಹಿಂಸಾಚಾರ ಘಟನೆಗಳು ನಡೆದವು. ಅಂತಹ ಒಂದು ಘಟನೆಯಲ್ಲಿ, ರಾಜ್ಯ ಬಿಜೆಪಿ ಬೆಂಬಲಿಗರು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ - ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ರಾಜ್ಯಪಾಲರಿಗೆ ಕರೆ ಮಾಡಿದ ದೀದಿ

ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 1,15,81,022 ಮತದಾರರು 373 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ವಿವಿಧ ಸ್ಥಳಗಳಲ್ಲಿ ಪ್ರಚಾರ ನಡೆಸಿದರು. ಟಿಎಂಸಿ ಪರವಾಗಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಮತ್ತು ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅನೇಕ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು.

ಇಂದು ಮತದಾನ ನಡೆಯುವ ಕ್ಷೇತ್ರಗಳಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಪಶ್ಚಿಮ ಬಂಗಾಳ ಸಚಿವರಾದ ಪಾರ್ಥ ಚಟರ್ಜಿ ಮತ್ತು ಅರೂಪ್ ಬಿಸ್ವಾಸ್ ಅವರ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ - ಮಮತಾ ಬ್ಯಾನರ್ಜೀಗೆ ನೋಟಿಸ್ ಜಾರಿ ಮಾಡಿದ ಚುನಾವಣಾ ಆಯೋಗ

ಕೋಲ್ಕತ್ತಾದ ಬಂಗಾಳಿ ಚಲನಚಿತ್ರೋದ್ಯಮದ ಹೃದಯ ಎಂದು ಕರೆಯಲ್ಪಡುವ ಟೋಲಿಗಂಜ್‌ನ ಬಾಬುಲ್ ಸುಪ್ರಿಯೋ ಮತ್ತು ಹಾಲಿ ಶಾಸಕ ಅರುಪ್ ಬಿಸ್ವಾಸ್ ವಿರುದ್ಧದ ಚುನಾವಣಾ ಯುದ್ಧದಲ್ಲಿ ನಾಲ್ಕನೇ ಹಂತದಲ್ಲಿ ಉನ್ನತ ಮಟ್ಟದ ಸ್ಪರ್ಧೆಯು ಆಸಕ್ತಿದಾಯಕವಾಗಿದೆ. ಅದೇ ಸಮಯದಲ್ಲಿ, ಸತತ ನಾಲ್ಕನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಬಿಜೆಪಿ ಅಭ್ಯರ್ಥಿ ಮತ್ತು ಚಲನಚಿತ್ರ ನಟಿ ಶ್ರಬಂತಿ ಚಟರ್ಜಿ ಅವರೊಂದಿಗೆ ಬೆಹಲಾ ವೆಸ್ಟ್ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News