ಗೋದ್ರಾ ಗಲಭೆಗೆ ನೀವೇ ಕಾರಣ ಎನ್ನಬಹುದೇ? ಪ್ರಧಾನಿ ಮೋದಿಗೆ ಅಮರೀಂದರ್ ಸಿಂಗ್ ತಿರುಗೇಟು

2002ರಲ್ಲಿ ನಡೆದಿದ್ದ ಗುಜರಾತ್‌ನ ಗೋದ್ರಾ ಹಿಂಸಾಚಾರಕ್ಕೂ, ನಿಮಗೂ ಸಂಬಂಧವಿದೆ ಎಂದು ಯಾರಾದರೂ ಆರೋಪಿಸಿದರೆ ನೀವೇನು ಹೇಳುತ್ತೀರಿ?' ಎಂದು ಪ್ರಧಾನಿ ಮೋದಿಯನ್ನು ಅಮರೀಂದರ್ ಸಿಂಗ್ ಪ್ರಶ್ನಿಸಿದ್ದಾರೆ.

Last Updated : May 11, 2019, 12:08 PM IST
ಗೋದ್ರಾ ಗಲಭೆಗೆ ನೀವೇ ಕಾರಣ ಎನ್ನಬಹುದೇ? ಪ್ರಧಾನಿ ಮೋದಿಗೆ ಅಮರೀಂದರ್ ಸಿಂಗ್ ತಿರುಗೇಟು title=

ಪಟಿಯಾಲ: 1984ರ ಸಿಖ್ ವಿರೋಧಿ ಹಿಂಸೆಗೆ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿರುಗೇಟು ನೀಡಿದ್ದಾರೆ.

"2002ರಲ್ಲಿ ನಡೆದಿದ್ದ ಗುಜರಾತ್‌ನ ಗೋದ್ರಾ ಹಿಂಸಾಚಾರಕ್ಕೂ, ನಿಮಗೂ ಸಂಬಂಧವಿದೆ ಎಂದು ಯಾರಾದರೂ ಆರೋಪಿಸಿದರೆ ನೀವೇನು ಹೇಳುತ್ತೀರಿ?' ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿರುವ ಅಮರೀಂದರ್ ಸಿಂಗ್,  1984ರ ಸಿಕ್ಖ್ ವಿರೋಧಿ ಹಿಂಸೆಗೆ ಮಾಜಿ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ ಕಾರಣರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸುವುದು ತಪ್ಪು. ಚುನಾವಣೆಯನ್ನು ಗೆಲ್ಲುವ ಸಲುವಾಗಿ ಪ್ರಧಾನಿ ಮೋದಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ದುರದೃಷ್ಟಕರ. ಇದು ಅವರ ಸ್ಥಾನಕ್ಕೇ ಧಕ್ಕೆ ತರುವಂಥದ್ದು" ಎಂದಿದ್ದಾರೆ.

"1984 ರ ಗಲಭೆಯಲ್ಲಿ  ಹಲವಾರು ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಹೆಸರುಗಳು ಎಫ್ಐಆರ್ ನಲ್ಲಿ ಕಾಣಿಸಿಕೊಂಡಿರುವುದನ್ನು ಮೋದಿ ಮರೆಯಬಾರದು" ಎಂದ ಸಿಂಗ್, ಮುಗ್ಧ ಸಿಖ್ಕರ ಮೇಲೆ ಹಿಂಸೆ ನಡೆಸಿದ ಪ್ರತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.

Trending News