ನವದೆಹಲಿ: ಪಾಕಿಸ್ತಾನದ ಸೀಮೆದಾಟಿ ನೇಪಾಳ ಮೂಲಕ ಭಾರತಕ್ಕೆ ಆಗಮಿಸಿರುವ ಪಬ್‌ಜಿ ಪ್ರೇಮಿ ಸೀಮಾ ಹೈದರ್‍ಗೆ ಸಂಕಷ್ಟ ಎದುರಾಗಿದೆ. ಈಕೆ ಕಾನೂನು ಕುಣಿಕೆಯಲ್ಲಿ ಸಿಲುಕುತ್ತಾಳಾ ಅನ್ನೋ ಪ್ರಶ್ನೆ ಮೂಡಿದೆ. ಅತ್ತ ಸೀಮಾ ಹೈದರ್ ಪಾಕಿಸ್ತಾನಕ್ಕೆ ಮರಳದಿದ್ದರೆ 26/11 ಮಾದರಿ ದಾಳಿ ನಡೆಸಲಾಗುವುದು ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಆಕೆಗಾಗಿ ಸಿಂಧ್ ಪ್ರಾಂತ್ಯದ 30 ಹಿಂದೂಗಳನ್ನು ಪಾಕಿಸ್ತಾನ ಒತ್ತೆಯಾಳಾಗಿಟ್ಟಿದೆ.
ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಸೀಮಾ ಹೈದರ್ ಪಾಕಿಸ್ತಾನದಿಂದ ಭಾರತಕ್ಕೆ ಹೇಗೆ ಬಂದಲು ಅನ್ನೋ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ. ಉತ್ತರಪ್ರದೇಶದ ಎಟಿಎಸ್ ನಂತರ, ಈಗ ಐಬಿಯ ವಿಶೇಷ ತಂಡವು ನೇಪಾಳದ ಮೂಲಕ ಸೀಮಾ ಹೈದರ್ ಭಾರತಕ್ಕೆ ಹೇಗೆ ಪ್ರವೇಶಿಸಿದಳು ಅನ್ನೋದರ ಬಗ್ಗೆ ತನಿಖೆ ಕೈಗೊಂಡಿದೆ. ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ(Sashastra Seema Bal) ನಿಯೋಜಿಸಿದ್ದರೂ ಈ ಲೋಪ ಹೇಗಾಯ್ತು ಅನ್ನೋದು ಭದ್ರತಾ ಏಜೆನ್ಸಿಗಳ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಗಡಿಯಿಂದ ಬರುವವರ ಮೇಲೆ ನಿಕಟ ನಿಗಾ ಇಡಲಾಗುತ್ತದೆ. ಹೀಗಿರುವಾಗ ಪಾಕಿಸ್ತಾನಿ ಮಹಿಳೆಯೊಬ್ಬರು ಭಾರತಕ್ಕೆ ಬರುತ್ತಿರುವ ವಿಚಾರ ಎಸ್‌ಎಸ್‌ಬಿ ಜವಾನರಿಗೆ ಏಕೆ ತಿಳಿಯಲಿಲ್ಲ ಅನ್ನೋದು ಪ್ರಶ್ನೆಯಾಗಿದೆ. ಕೇಂದ್ರ ಭದ್ರತಾ ಏಜೆನ್ಸಿ ಮೂಲಗಳ ಪ್ರಕಾರ, ಇಂಡೋ-ನೇಪಾಳ ಗಡಿಯ ಮೂಲೆ ಮೂಲೆಗಳಲ್ಲಿ ಎಸ್‌ಎಸ್‌ಬಿಯನ್ನು ನಿಯೋಜಿಸಲಾಗಿದ್ದು, ಸಂದರ್ಶಕರ ಮೇಲೆ ನಿಗಾ ಇಡುವುದು ಅವರ ಜವಾಬ್ದಾರಿಯಾಗಿದೆ. ಅಲ್ಲದೆ ಯಾವುದೇ ಒಬ್ಬ ವ್ಯಕ್ತಿಯು ನೇಪಾಳದ ಮೂಲಕ ಭಾರತಕ್ಕೆ ಬರುತ್ತಿದ್ದರೆ ಅವರ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.
ಇದನ್ನೂ ಓದಿ: ಹೈಹೀಲ್ಸ್ & ಸ್ಕರ್ಟ್ ಧರಿಸಿ, ಮೈ ಬಳುಕಿಸಿ ಯುವತಿಯರಿಗೆ ಸೆಡ್ ಹೊಡೆದ ಯುವಕ; ವಿಡಿಯೋ ವೈರಲ್!
ಭಾರತ-ನೇಪಾಳದ ಪಕ್ಕದ ಪ್ರದೇಶಗಳ ಮೂಲಕ ಭಾರತದ ಗಡಿಯೊಳಕ್ಕೆ ಭಯೋತ್ಪಾದಕರು ಮತ್ತು ಜಿಹಾದಿ ಸಂಘಟನೆಗಳನ್ನು ನುಸುಳಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಿರಂತರವಾಗಿ ಸಂಚು ನಡೆಸುತ್ತಿರುವುದು ಕೇಂದ್ರ ಭದ್ರತಾ ಏಜೆನ್ಸಿಗಳನ್ನು ಚಿಂತೆಗೀಡು ಮಾಡಿದೆ. ಕೆಲವು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಸಿಕ್ಕಿಬಿದ್ದಿದ್ದ ಭಯೋತ್ಪಾದಕನ ವಿಚಾರಣೆ ವೇಳೆ ಆತ ನೇಪಾಳದ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ ಎಂಬುದು ಬಹಿರಂಗವಾಗಿತ್ತು. ಹಾಗೇ ನೋಡಿದರೆ ಭಾರತ-ನೇಪಾಳ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳ ಯಾವುದೇ ಸಂಚಿನ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಕಾಲಕಾಲಕ್ಕೆ ತಮ್ಮ ವರದಿಗಳನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುತ್ತವೆ. ಭಾರತ-ನೇಪಾಳದ ಮುಕ್ತ ಗಡಿಯ ಲಾಭ ಪಡೆದು ಭಯೋತ್ಪಾದಕರು ಭಾರತದ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಈ ವರದಿಗಳಲ್ಲಿದೆ.
ಇಷ್ಟು ಸೂಕ್ಷ್ಮ ಗಡಿಯಾಗಿದ್ದರೂ, ಇಂಡೋ-ನೇಪಾಳ ಗಡಿಯಲ್ಲಿ ನಿಯೋಜಿಸಲಾದ ಎಸ್‌ಎಸ್‌ಬಿ ಜವಾನರು ಏಕೆ ಸೀಮಾ ಹೈದರ್ ನುಸುಳುವಿಕೆಯನ್ನು ಪತ್ತೆ ಹಚ್ಚಲಿಲ್ಲ. ಎಲ್ಲಾ ಸ್ಥಳಗಳಲ್ಲಿ ಎಸ್‌ಎಸ್‌ಬಿ ಭದ್ರತೆಯನ್ನು ಒದಗಿಸುತ್ತದೆ ಎಂದು ಮೂಲಗಳು ಹೇಳಿವೆ. ಅವರ ಪ್ರಕಾರ, ಭಾರತ-ನೇಪಾಳ ಗಡಿಯಿಂದ ಯಾವುದೇ ಪಕ್ಷಿ ಕೂಡ ನುಸುಳಲು ಸಾಧ್ಯವಿಲ್ಲ. ಆದರೆ ನೇಪಾಳದ ಗಡಿಯಿಂದ ನೋಯ್ಡಾದಲ್ಲಿರುವ ತನ್ನ ಪಬ್‍ಜಿ ಪ್ರೇಮಿ ಸಚಿನ್ ಅನ್ನು ಸೀಮಾ ಹೈದರ್ ತಲುಪಿದ ರೀತಿ ಆಘಾತಕಾರಿಯಾಗಿದೆ. ಈ ಎಲ್ಲಾ ಭದ್ರತಾ ನ್ಯೂನತೆಗಳ ಬಗ್ಗೆ ಏಜೆನ್ಸಿಗಳ ನಡುವೆ ಅಸಮಾಧಾನವಿದೆ. ಇದರೊಂದಿಗೆ ಎಸ್‌ಎಸ್‌ಬಿ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಮೂಲಗಳ ಪ್ರಕಾರ, ಸೀಮಾ ಹೈದರ್ ಪ್ರಕರಣದ ತನಿಖೆಗಾಗಿ ರಚಿಸಲಾದ ಐಬಿಯ ವಿಶೇಷ ತಂಡವು ಎಸ್‌ಎಸ್‌ಬಿಯಿಂದ ವರದಿಯನ್ನು ಕೇಳಲಿದೆ. ಇದರೊಂದಿಗೆ ಇಂಡೋ-ನೇಪಾಳ ಗಡಿಯಲ್ಲಿ ನಿಯೋಜಿಸಲಾದ ವರದಿಯನ್ನು ಹಂಚಿಕೊಳ್ಳಲು ಅಂತಹ ಎಲ್ಲಾ ಏಜೆನ್ಸಿಗಳನ್ನು ಕೇಳಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎನ್ಡಿಎ ಸಭೆಯಲ್ಲಿ 38 ಪಕ್ಷಗಳ ಭಾಗಿ, ಮೋದಿ ಪ್ರಭಾವ ಎಂದ ನಡ್ದಾ..!
ಏನಿದು ಘಟನೆ?: ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಮೂಲದ ನಿವಾಸಿ ಸಚಿನ್ ಪಬ್‍ಜಿ ಆಡುವ ವೇಳೆ ಒಬ್ಬ ಮಹಿಳೆಗೆ ಮೆಸೇಜ್ ಮಾಡಿ ಆಕೆಯನ್ನೇ ಪ್ರೀತಿಸಿದ್ದ. ಆ ಮಹಿಳೆಯೇ ಪಾಕಿಸ್ತಾನದ ಮೂಲದ ಸೀಮಾ ಗುಲಾಮ್ ಹೈದರ್. ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ ಸಚೀನ್‍ನನ್ನು ಆಕೆ ಕೂಡ ಪ್ರೀತಿಸಿದ್ದಾಳೆ. ಬಳಿಕ ತನ್ನ 4 ಮಕ್ಕಳ ಸಮೇತ ಅಕ್ರಮವಾಗಿ ನೇಪಾಳದ ಮೂಲಕ ಭಾರತಕ್ಕೆ ಪ್ರವೇಶಿಸಿ ಸಚಿನ್ ಇದ್ದ ಗ್ರೇಟರ್ ನೋಯ್ಡಾ ತಲುಪಿದ್ದಾಳೆ. ಇದೀಗ ತಾನು ಸಚಿನ್‍ನನ್ನು ಪ್ರೀತಿಸುತ್ತಿದ್ದು, ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗುವುದಿಲ್ಲವೆಂದು ಸೀಮಾ ಪಟ್ಟು ಹಿಡಿದಿದ್ದಾಳೆ. ಆಕೆಯನ್ನು ಕೂಡಲೇ ಗಡಿಪಾರು ಮಾಡುವಂತೆ ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.