CM of Uttarakhand : ಎರಡು ಬಾರಿ ಶಾಸಕನಾದವನು ಈಗ ಉತ್ತರಾಖಂಡ ನೂತನ ಸಿಎಂ..!

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ನೂತನ ಉತ್ತರಾಖಂಡ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಡೆಹ್ರಾಡೂನ್‌ನ ರಾಜ್ಯ ಪ್ರಧಾನ ಕಚೇರಿಯಲ್ಲಿ ವಿಧಾನಸಭಾ ಸಭೆ ನಡೆಯಿತು.

Last Updated : Jul 3, 2021, 04:25 PM IST
  • ಬಿಜೆಪಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡದ ನೂತನ ಸಿಎಂ ಆಗಿ ಆಯ್ಕೆ
  • ಪುಷ್ಕರ್ ಸಿಂಗ್ ಧಾಮಿ ಉದಾಮ್ ಸಿಂಗ್ ನಗರ ಜಿಲ್ಲೆಯ ಖತಿಮಾ ಕ್ಷೇತ್ರದ ಶಾಸಕ
  • ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ನೂತನ ಸಿಎಂ ಆಯ್ಕೆ
CM of Uttarakhand : ಎರಡು ಬಾರಿ ಶಾಸಕನಾದವನು ಈಗ ಉತ್ತರಾಖಂಡ ನೂತನ ಸಿಎಂ..! title=

ನವದೆಹಲಿ : ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡದ ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಕೇವಲ ಎರಡು ಬಾರಿ ಶಾಸಕರಾಗಿ ಆಯ್ಕೆ ಆದ ಇವರನ್ನು ಇಂದು ವಿಧಾನಸಭಾ ಸಭೆಯಲ್ಲಿ ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಪುಷ್ಕರ್ ಸಿಂಗ್ ಧಾಮಿ(Pushkar Singh Dhami) ಉದಾಮ್ ಸಿಂಗ್ ನಗರ ಜಿಲ್ಲೆಯ ಖತಿಮಾ ಕ್ಷೇತ್ರದಿಂದ ಉತ್ತರಾಖಂಡ ವಿಧಾನಸಭೆಯ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ :  Uttarakhand CM : 9 ಜನ ಮುಖ್ಯಮಂತ್ರಿಗಳು ಆದ್ರೆ, 5 ವರ್ಷ ಪೂರೈಸಿದ್ದು ಮಾತ್ರ ಒಬ್ಬರೇ!

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತರ ಬಿಜೆಪಿ(BJP) ನಾಯಕರ ಸಮ್ಮುಖದಲ್ಲಿ ನೂತನ ಉತ್ತರಾಖಂಡ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಡೆಹ್ರಾಡೂನ್‌ನ ರಾಜ್ಯ ಪ್ರಧಾನ ಕಚೇರಿಯಲ್ಲಿ ವಿಧಾನಸಭಾ ಸಭೆ ನಡೆಯಿತು.

ಇದನ್ನೂ ಓದಿ : PM Kisan ರೈತರಿಗೆ ಸಿಹಿ ಸುದ್ದಿ : ಈ ದಿನ ನಿಮ್ಮ ಖಾತೆಗೆ ₹2,000 ಜಮಾ, ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿ

ಶುಕ್ರವಾರ ತ್ರಿವೇಂದ್ರ ಸಿಂಗ್ ರಾವತ್(Trivendra Singh Rawat) ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಗೆ ಹಸ್ತಾಂತರಿಸಿದ್ದು, 'ಸಾಂವಿಧಾನಿಕ ಬಿಕ್ಕಟ್ಟು' ಉಂಟಾಗಬಹುದು ಎಂದು ಉಲ್ಲೇಖಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! DA ಹೆಚ್ಚಳದ ಜೊತೆಗೆ CEA ನಿಯಮ ಸಡಿಲುಗೊಳಿಸಿದೆ ಸರ್ಕಾರ

ತೀರ್ಥ ಸಿಂಗ್ ರಾವತ್ ನಾಲ್ಕು ತಿಂಗಳುಗಳ ಕಾಲ ಉತ್ತರಾಖಂಡ ಮುಖ್ಯಮಂತ್ರಿ(Uttarakhand CM)ಯಾಗಿ ಅಧಿಕಾರ ಅನುಭವಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News