ಕೇಜ್ರಿವಾಲ್ ರ ಡೆನ್ಮಾರ್ಕ್ ಭೇಟಿಗೆ ಕೇಂದ್ರ ಅನುಮತಿ ನಿರಾಕರಿಸಿದ್ದೇಕೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿರುವ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  

Last Updated : Oct 9, 2019, 05:03 PM IST
ಕೇಜ್ರಿವಾಲ್ ರ ಡೆನ್ಮಾರ್ಕ್ ಭೇಟಿಗೆ ಕೇಂದ್ರ ಅನುಮತಿ ನಿರಾಕರಿಸಿದ್ದೇಕೆ?   title=
file photo

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿರುವ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  

ಅರವಿಂದ್ ಕೇಜ್ರಿವಾಲ್ ಅವರು ಕೋಪನ್ ಹ್ಯಾಗನ್ ನಲ್ಲಿ ನಡೆದ ಹವಾಮಾನ ಶೃಂಗಸಭೆಗಾಗಿ ಎಂಟು ಸದಸ್ಯರ ನಿಯೋಗದಲ್ಲಿ ಡೆನ್ಮಾರ್ಕ್ ಗೆ ಪ್ರಯಾಣಿಸಬೇಕಿತ್ತು. ವಿದೇಶಾಂಗ ಸಚಿವಾಲಯವು ಕೇಜ್ರಿವಾಲ್ ಅವರ ಪ್ರಯಾಣಕ್ಕೆ ಅನುಮತಿ ನೀಡದೆ ಪಶ್ಚಿಮ ಬಂಗಾಳ ಸಚಿವ ಫಿರ್ಹಾದ್ ಹಕೀಂಗೆ  ಮಾತ್ರ ಅನುಮತಿ ನೀಡಿತು.ಈ ಕುರಿತು ಸ್ಪಷ್ಟನೆ ನೀಡಿದ ಜಾವಡೆಕರ್ 'ಇದು ಮೇಯರ್ ಮಟ್ಟದ ಸಮ್ಮೇಳನ ಮತ್ತು ಬಂಗಾಳ ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳಂತಹ ರಾಜಕೀಯ ಪ್ರತಿನಿಧಿಗಳನ್ನು ಆಹ್ವಾನಿಸಿದಾಗ ಪ್ರತ್ಯೇಕ ಪ್ರೋಟೋಕಾಲ್ ಇದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿನ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ತಮ್ಮ ಸರ್ಕಾರದ ಪ್ರಯತ್ನಗಳ ಕುರಿತು ಸಿ -40 ಹವಾಮಾನ ಬದಲಾವಣೆ ಕಾರ್ಯಕ್ರಮದಲ್ಲಿ  ಕೇಜ್ರಿವಾಲ್ ಅವರು ಮಾತನಾಡಲಿದ್ದಾರೆ ಎಂದು ದೆಹಲಿ ಸರ್ಕಾರ ಕಳೆದ ತಿಂಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.ನಿಗದಿಯಂತೆ ಕೇಜ್ರಿವಾಲ್ ಮಂಗಳವಾರ ಡೆನ್ಮಾರ್ಕ್‌ಗೆ ತೆರಳಬೇಕಿತ್ತು. ಆದರೆ ಈಗ ಅವರಿಗೆ ವಿದೇಶಾಂಗ ಸಚಿವಾಲಯ ನಿರಾಕರಿಸಿರುವುದರ ಹಿನ್ನಲೆಯಲ್ಲಿ ಅವರು ಈಗ ಗೈರು ಹಾಜರಾಗಬೇಕಾಗಿದೆ. ಈಗ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

'ಇದು ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಭೇಟಿಯಾಗಿರಲಿಲ್ಲ, ಅವರು ಮೋಜು ಮಸ್ತಿಗಾಗಿ ಹೋಗುತ್ತಿರಲಿಲ್ಲ ಆದರೆ ಏಷ್ಯಾದ 100 ನಗರ ಮೇಯರ್‌ಗಳಿಗೆ, ದೆಹಲಿಯ ಮಾಲಿನ್ಯವನ್ನು ಶೇಕಡಾ 25 ರಷ್ಟು ಹೇಗೆ ಕಡಿಮೆಗೊಳಿಸಲಾಯಿತು ಎಂಬುದನ್ನು ವಿವರಿಸಲು ಅವರು ಬೆಸ-ಸಮದ ಯೋಜನೆ ಪ್ರಯೋಜನವನ್ನು ವಿವರಿಸಲಿದ್ದಾರೆ, ಇದು ಪ್ರಜಾಪ್ರಭುತ್ವಕ್ಕೆ ಅಥವಾ ಫೆಡರಲ್ ರಚನೆಗೆ ಒಳ್ಳೆಯದಲ್ಲ' ಎಂದು ಆಪ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದರು.

ಇದರಿಂದಾಗಿ ಕೇಜ್ರಿವಾಲ್ ಅವರು ನಾಲ್ಕು ಮೇಯರ್ಗಳೊಂದಿಗಿನ ನಿಗದಿತ ಮಾತುಕತೆಯನ್ನು ರದ್ದುಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

Trending News