ಹಳೆಯ ನಾಣ್ಯಗಳಿಗೆ ಬೆಲೆ ಜಾಸ್ತಿ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಮನೆ ಡ್ರಾಯರ್ ಮೂಲೆಯಲ್ಲಿ ಸಿಕ್ಕಿದ ನಾಣ್ಯವೊಂದು 2.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾದ ಘಟನೆ ನಡೆದಿದೆ. ನಿಷ್ಪ್ರಯೋಜಕ ಅಂದುಕೊಂಡಿದ್ದ ಈ ನಾಣ್ಯ ಕೋಟಿಗಳನ್ನು ಸಂಪಾದಿಸಿ ಕೊಟ್ಟಿದೆ.
ಈ ನಾಣ್ಯ 17 ನೇ ಶತಮಾನದಲ್ಲಿ ಮುದ್ರಿತವಾಗಿದೆ. ಈ ಸಣ್ಣ ಬೆಳ್ಳಿ ನಾಣ್ಯವನ್ನು ಇತ್ತೀಚೆಗೆ 2.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. ಇಂದಿನ ಮಾರುಕಟ್ಟೆಯಲ್ಲಿ ಈ ನಾಣ್ಯದ ಮೌಲ್ಯವು 1.03 ಡಾಲರ್‌ಗಳಿಗಿಂತ ಹೆಚ್ಚಿಲ್ಲ. ಆದರೂ ಇದನ್ನು 2.5 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಲಾಗಿದೆ.
ಇದನ್ನೂ ಓದಿ : GK: ಜೀವಂತವಾಗಿರುವ ವಿಷಕಾರಿ ಹಾವುಗಳನ್ನು ತಿನ್ನುವ ಏಕೈಕ ಪ್ರಾಣಿ ಯಾವುದು ಗೊತ್ತೇ?
ಈ ನಾಣ್ಯವನ್ನು 1652 ರಲ್ಲಿ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದ ಬೋಸ್ಟನ್‌ನಲ್ಲಿ ಮುದ್ರಿಸಲಾಯಿತು. ಈ ನಾಣ್ಯದ ಹರಾಜು, ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು, ಅಮೆರಿಕನ್ ಕ್ರಾಂತಿಯ ಮೊದಲು ತಯಾರಿಸಲಾದ ನಾಣ್ಯವನ್ನು 646,250 ಡಾಲರ್ ಗೆ ಹರಾಜು ಮಾಡಲಾಗಿತ್ತು. 1792 ರಲ್ಲಿ US ಟಂಕಸಾಲೆ ಸ್ಥಾಪನೆಯ ಮೊದಲು ಬಿಡುಗಡೆ ಮಾಡಲಾದ US ನಾಣ್ಯಕ್ಕೆ ಪಾವತಿಸಿದ ಅತ್ಯಧಿಕ ಬೆಲೆ ಇದಾಗಿತ್ತು. ಅಚ್ಚರಿಯ ವಿಷಯವೆಂದರೆ ಕೋಟ್ಯಂತರ ರೂಪಾಯಿಗೆ ಮಾರಾಟವಾಗಿದ್ದ ಈ ನಾಣ್ಯ 2016ರಲ್ಲಿ ಹಳೆಯ ಡ್ರಾಯರ್‌ನಲ್ಲಿ ಪತ್ತೆಯಾಗಿತ್ತು.ಕೋಟ್ಯಂತರ ರೂಪಾಯಿ ಕೊಟ್ಟು ಈ ನಾಣ್ಯ ಖರೀದಿಸಿದವರು ಯಾರು ಎಂಬುದು ಬಹಿರಂಗವಾಗಿಲ್ಲ.
ಅತ್ಯಂತ ಅಪರೂಪದ ನಾಣ್ಯ :
ಬೋಸ್ಟನ್ ಮಿಂಟ್ ಅನ್ನು ಮೇ 27, 1652 ರಂದು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಇಂಗ್ಲೆಂಡ್ ತನ್ನ ವಸಾಹತುಗಳಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕಳುಹಿಸಲು ಸಿದ್ಧರಿರಲಿಲ್ಲ. ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಅಮೇರಿಕನ್ ಹಿಸ್ಟರಿ ಪ್ರಕಾರ, ಬೋಸ್ಟನ್ ಅಧಿಕಾರಿಗಳು 1652 ರಲ್ಲಿ ಜಾನ್ ಹಲ್ ಮತ್ತು ರಾಬರ್ಟ್ ಸ್ಯಾಂಡರ್ಸನ್ ಅವರಿಗೆ ಟಂಕಸಾಲೆಯನ್ನು ಸ್ಥಾಪಿಸಲು ಅನುಮತಿ ನೀಡಿದರು. ಶೀಘ್ರದಲ್ಲೇ ಇಬ್ಬರೂ ಬ್ರಿಟಿಷ್ ರಾಜಪ್ರಭುತ್ವದ ಅಧಿಕಾರವನ್ನು ಧಿಕ್ಕರಿಸಿ ಬೆಳ್ಳಿ ನಾಣ್ಯಗಳನ್ನು ತಯಾರಿಸಲು ಪ್ರಾರಂಭಿಸಿದರು. ಯಾವುದೇ ವಸ್ತುಸಂಗ್ರಹಾಲಯದಲ್ಲಿ ಇಲ್ಲದ ಆ ಕಾಲದ ನಾಣ್ಯ ಇದೀಗ ಹರಾಜಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ಕ್ವಿನ್ಸಿ ಕುಟುಂಬಕ್ಕೆ ಸೇರಿದ ನಾಣ್ಯ :
ಬೋಸ್ಟನ್ ಮಿಂಟ್‌ನಲ್ಲಿ ಮುದ್ರಿಸಲಾದ ಎಲ್ಲಾ ನಾಣ್ಯಗಳು ಅಪರೂಪ. ಹರಾಜಾದ ನಾಣ್ಯವು ಮೂರು ಪೆನ್ಸ್ ಆಗಿದೆ. ಇದು ಬೋಸ್ಟನ್‌ನ ಕ್ವಿನ್ಸಿ ಕುಟುಂಬದಿಂದ ಬಂದಿದೆ ಎನ್ನಲಾಗಿದೆ. ಈ ನ್ಯೂ ಇಂಗ್ಲೆಂಡ್ ರಾಜಕೀಯ ರಾಜವಂಶವು ಅಬಿಗೈಲ್ ಆಡಮ್ಸ್ ಅನ್ನು ಒಳಗೊಂಡಿತ್ತು. ಅವರ ಪತಿ ಜಾನ್ 1770 ಮತ್ತು 1780 ರ ದಶಕಗಳಲ್ಲಿ ನೆದರ್ಲ್ಯಾಂಡ್ಸ್ ರಾಯಭಾರಿಯಾಗಿದ್ದರು.ಇದಾದ ನಂತರ ಯುನೈಟೆಡ್ ಸ್ಟೇಟ್ಸ್ ನ ಎರಡನೇ ಅಧ್ಯಕ್ಷರಾದರು.ಅಬಿಗೈಲ್ ಅವರ ಮುತ್ತಜ್ಜ ಈ ನಾಣ್ಯಗಳನ್ನು ಮುದ್ರಿಸಿದ ಜಾನ್ ಹಲ್ ಅವರ ಮಲ ಸಹೋದರರಾಗಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ