ನವದೆಹಲಿ: ಆರು ತಿಂಗಳ ಹಿಂದೆ ವಿವಾಹವಾದ 21 ವರ್ಷದ ಯುವತಿಗೆ ಬಣ್ಣ ಕಪ್ಪು ಎಂದು ಗಂಡ ನಿಂದಿಸಿದ್ದಕ್ಕೆ ಮನನೊಂದು ಆಕೆ ಆತ್ಮಹತ್ಯೆ ಶರಣಾಗಿದ್ದಾಳೆ.
ಈ ಘಟನೆ ರಾಜಸ್ಥಾನದ ಜಲಾವರ್ ಜಿಲ್ಲೆ ಬನ್ಸಕೊಯಾರಾ ಗ್ರಾಮದಲ್ಲಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ಮಂಗಿಬಾಯಿ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಬಲ್ವೀರ್ ಸಿಂಗ್ ತಿಳಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ, ಅಲ್ಲಿ ವೈದ್ಯರು ಮಹಿಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಈಗ ಆ ಮಹಿಳೆಯ ಪತಿ ದಿನೇಶ್ ಲೋಧಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆ) ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಗೆ (ಡಿಎಸ್ಪಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಮಹಿಳೆ ಮದುವೆಯಾದಾಗಿನಿಂದಲೂ ಆಕೆ ಪದೆ ಪದೆ ಆಕೆ ಬಣ್ಣದ ಬಗ್ಗೆ ಪತಿ ನಿಂದಿಸುತ್ತಿದ್ದನು ಎನ್ನಲಾಗಿದೆ. ಮರಣೋತ್ತರದ ನಂತರ ಆಕೆಯ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.