ಕಾರನ್ನು ಅಡ್ಡಗಟ್ಟಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಕಲ್ಲು ಮತ್ತು ಇಟ್ಟಿಗೆಗಳಿಂದ ಕಾರಿನ ಕಿಟಕಿಗಳನ್ನು ಒಡೆದು, ಆಕೆಯನ್ನು ಹೊರಗೆಳೆದು 7ಕ್ಕೂ ಹೆಚ್ಚು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

Last Updated : Feb 12, 2019, 10:52 AM IST
ಕಾರನ್ನು ಅಡ್ಡಗಟ್ಟಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ title=

ಲುಧಿಯಾನ: ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ಹೊರಗೆಳೆದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಲುಧಿಯಾನದ ಇಸ್ಸೇವಲ್ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ 21 ವರ್ಷದ ಸಂತ್ರಸ್ತ ಯುವತಿ, ಶನಿವಾರ ರಾತ್ರಿ ಗೆಳೆಯನೊಂದಿಗೆ ಲುಧಿಯಾನದಿಂದ ಇಸ್ಸೇವಾಲ್ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಲುಧಿಯನದಿಂದ 15 ಕಿ.ಮೀ. ದೂರದಲ್ಲಿರುವ ಸಿದ್ವಾನ್ ಕಣಿವೆ ದಡದಲ್ಲಿರುವ ಗ್ರಾಮದ ಬಳಿ ತನ್ನ ಕಾರನ್ನು ಅಡ್ಡಗಟ್ಟಿದ 10 ದುಷ್ಕರ್ಮಿಗಳು ತನ್ನನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾಳೆ.

ಈ ಬಗ್ಗೆ ಮಾಹಿತಿ ನೀಡಿರುವ ಪೋಲಿಸ್ ಅಧಿಕಾರಿ ತರಣ್ ರತನ್ ಅವರು, ಯುವತಿ ಚಲಿಸುತ್ತಿದ್ದ ಕಾರನ್ನು ಬಹಳ ದೂರದಿಂದಲೇ ಮೂರು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಕಲ್ಲು ಮತ್ತು ಇಟ್ಟಿಗೆಗಳಿಂದ ಕಾರಿನ ಕಿಟಕಿಗಳನ್ನು ಒಡೆದು, ಆಕೆಯನ್ನು ಹೊರಗೆಳೆದು 7ಕ್ಕೂ ಹೆಚ್ಚು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ವೈದ್ಯಕೀಯ ವರದಿ ಕೂಡ ದೃಢಪಡಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

Trending News