Bihar Nalanda Murder Case : ಪ್ರೀತಿಯ ಬಲೆಗೆ ಬಿದ್ದು ವೃದ್ಧರೊಬ್ಬರು ಪ್ರಾಣವನ್ನೇ ಕಳೆದುಕೊಂಡ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ವಿಧವೆಯನ್ನು ಗ್ರಾಮದ ನಾಲ್ವರು ವೃದ್ಧರು ಪ್ರೀತಿಸುತ್ತಿದ್ದರು. ನಾಲ್ವರ ಸಾಲಿನಲ್ಲಿ ಐದನೇ ಪ್ರೇಮಿಯ ಪ್ರವೇಶವಾಗುತ್ತಿದ್ದಂತೆಯೇ ಎಲ್ಲರೂ ಸೇರಿ ಆತನ ಕೊಲೆಗೈದಿದ್ದಾರೆ.
ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಘಟನೆ :
ಪೊಲೀಸ್ ವಶದಲ್ಲಿರುವ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮರ್ಡರ್ ಮಿಸ್ಟ್ರಿ ಹೊರ ಬಿದ್ದಿದೆ. ಅಸ್ತವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ವಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಷಯ ಹೊರ ಬೀಳುತ್ತಿದ್ದಂತೆಯೇ ಪೊಲೀಸರು ಕೂಡಾ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ : ಶಿವಭಾಕ್ತನಾದರೆ ಮಹಾಮೃತ್ಯುಂಜಯ ಮಂತ್ರ ಪಠಿಸಲಿ : ರಾಹುಲ್ ಗಾಂಧಿಗೆ ಬಿಜೆಪಿ ಸವಾಲು
ನಾಲವರು ವೃದ್ದರ ಪ್ರೇಮಕಥೆ :
32 ವರ್ಷದ ವಿಧವೆ ಗ್ರಾಮದಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿದ್ದರು. ಈ ಮಹಿಳೆಗೆ ಅದೇ ಗ್ರಾಮದ ನಾಲ್ಕು ಜನ ವೃದ್ದರೊಂದಿಗೆ ಸಂಬಂಧವಿತ್ತು. ಈ ಮಧ್ಯೆ, 70 ವರ್ಷದ ತ್ರಿಪಿತ್ ಶರ್ಮಾ ಪ್ರವೇಶವಾಗುತ್ತದೆ. ತ್ರಿಪಿತ್ ಶರ್ಮಾ ಕೂಡ ಈ ಮಹಿಳೆಯನ್ನು ತನ್ನನ್ನು ಪ್ರೀತಿಸುವಂತೆ ಕೇಳಿ ಕೊಂಡಿದ್ದಾರೆ.
ಕಥೆಯಲ್ಲಿ ಟ್ವಿಸ್ಟ್ :
ಆದರೆ ತ್ರಿಪಿತ್ ಶರ್ಮಾ ಮಹಿಳೆಯ ಜೀವನದಲ್ಲಿ ಬಂದಿರುವುದನ್ನು ನಾಲ್ಕು ಮಂದಿ ಪ್ರೇಮಿಗಳಿಗೆ ಸಹಿಸುವುದು ಸಾಧ್ಯವಾಗಲಿಲ್ಲ. ಮಹಿಳೆಯೊಂದಿಗೆ ಸೇರಿಕೊಂಡು ತ್ರಿಪಿತ್ ಶರ್ಮಾನನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದಾರೆ. ಈ ಯೋಜನೆಯ ಅನ್ವಯ ಮಹಿಳೆ ಮತ್ತು ಆಕೆಯ ನಾಲ್ಕು ಮಂದಿ ಪ್ರೇಮಿಗಳು ಅಕ್ಟೋಬರ್ 19 ರಂದು ಶರ್ಮಾ ಅವರನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ತ್ರಿಪಿತ್ ಶರ್ಮಾ ಅವರನ್ನು ಕೊಲೆ ಮಾಡಿದ್ದಾರೆ. ಕೊಲೆಗೈದ ನಂತರ ಶರ್ಮಾ ಮೃತದೇಹವನ್ನು ಹೊಸದಾಗಿ ನಿರ್ಮಿಸಲಾಗಿದ್ದ ಸಮುದಾಯ ಭವನದ ನೀರಿನ ಟ್ಯಾಂಕ್‌ಗೆ ಎಸೆದಿದ್ದಾರೆ. ಇದಕ್ಕೂ ಮೊದಲು ಮೃತ ವ್ಯಕ್ತಿಯ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಮುಖವನ್ನು ಕಲ್ಲಿನಿಂದ ಜಜ್ಜಲಾಗಿತ್ತು.
ಇದನ್ನೂ ಓದಿ : RBI Imposes Penalty: ಈ ಬ್ಯಾಂಕ್ ಗೆ ಬರೋಬ್ಬರಿ 1.25 ಕೋಟಿ ದಂಡ ವಿಧಿಸಿದ RBI: ನಿಮ್ಮ ಖಾತೆ ಇದೆಯೇ?
ಪೊಲೀಸರು ಪ್ರಕರಣವನ್ನು ಭೇದಿಸಿದ್ದು ಹೀಗೆ :
ಘಟನೆ ನಡೆದ ಎರಡು ದಿನಗಳ ನಂತರ ಪೊಲೀಸರು ಶರ್ಮಾ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಶರ್ಮಾ ಅವರ ಮಗ ಮಿಥು ಕುಮಾರ್ ಆಸ್ತಾವನ್ ಪೊಲೀಸ್ ಠಾಣೆಯಲ್ಲಿ ತಂದೆಯ ಹತ್ಯೆಯ ಎಫ್‌ಐಆರ್ ದಾಖಲಿಸಿದ್ದಾರೆ. ಮೃತ ಶರ್ಮಾ, ಆಸ್ತಾವನ್ ಪಾಲಿಟೆಕ್ನಿಕ್ ಕಾಲೇಜು ಬಳಿಯ ಟೀ ಅಂಗಡಿಯಲ್ಲಿ ಹೆಚ್ಚು ಕುಳಿತುಕೊಳ್ಳುತ್ತಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ಪೊಲೀಸರಿಗೆ ಸಿಕ್ಕಿದೆ. ತನಿಖೆ ವೇಳೆ ಪೊಲೀಸರಿಗೆ ಮೃತರ ಮೊಬೈಲ್ ಫೋನ್ ಸಿಕ್ಕಿರಲಿಲ್ಲ. ಅದಾಗಲೇ ಫೋನ್ ಅನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಆದರೆ ಒಂದು ತಿಂಗಳ ನಂತರ, ಫೋನ್ ಅನ್ನು ಸ್ವಿಚ್ ಆನ್ ಮಾಡಲಾಗಿದೆ. ಫೋನ್ ಸ್ವಿಚ್ ಆನ್ ಆಗುತ್ತಿದ್ದಂತೆಯೇ ಪೊಲೀಸರು ಮಹಿಳೆ ಮತ್ತು ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಚಾರಣೆಯಲ್ಲಿ ಮೌನ ಮುರಿದ ಮಹಿಳೆ :
ಇಷ್ಟಾದ ಬಳಿಕ ಮಹಿಳೆಯನ್ನು ವಿಚಾರಿಸುತ್ತಿದ್ದಂತೆಯೇ ಒಂದೊಂದೇ ವಿಚಾರ ಹೊರ ಬಿದ್ದಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಮಹಿಳೆಯ ನಾಲ್ಕು ಮಂದಿ ಪ್ರೇಮಿಗಳನ್ನು ಕೂಡಾ ಬಂಧಿಸಲಾಗಿದೆ. ಮಾತ್ರವಲ್ಲ ಬಂಧಿತರೆಲ್ಲರೂ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.