ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಲಿತರ ಮನೆಗೆ ಭೇಟಿ ನೀಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಅಧ್ಯಕ್ಷ ಮಾಯಾವತಿ ಆರೋಪಿಸಿದ್ದಾರೆ.
ಬಿಜೆಪಿಯು ದಲಿತರನ್ನು ಹೇಗೆ ಕಾಣುತ್ತದೆ ಎಂದು ಪ್ರತಿಯೊಬ್ಬರೂ ಗೊತ್ತಿದೆ. ಅದು ಅವರಿಗೆ ದಲಿತರ ಮನೆಯಲ್ಲಿ ಊಟ ಮಾಡುತ್ತಿರುವಾಗ ಮಂತ್ರಿಗಳು ಸ್ವಂತ ಆಹಾರ ಮತ್ತು ಪಾತ್ರೆಗಳನ್ನು ಬಳಸುತ್ತಾರೆ. ಈ ಹಿಂದೆ ಇದನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿತ್ತು, ಆದರೆ ಈಗ ಬಿಜೆಪಿ ಮಾಡುತ್ತಿದೆ ಎಂದು ಮಾಯಾವತಿ ತಿಳಿಸಿದರು.
"ಅವರು ದಲಿತ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಎಂದು ಕಾಳಜಿ ವಹಿಸುವುದಿಲ್ಲ ಆದರೆ ಚುನಾವಣೆಗಳು ಬಂದಾಗ ಮಾತ್ರ ಫೋಟೋ ಮತ್ತು ನಾಟಕಕ್ಕಾಗಿ ಮೊರೆ ಹೋಗುತ್ತಾರೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಸಾಬೀತಾಗಿದೆ" ಎಂದು ತಿಳಿಸಿದರು.
ಸೋಮವಾರರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಾಪ್ಗಢ ಜಿಲ್ಲೆಯ ಕಂದಾಹೀಪುರ ಮಧುಪುರ್ ಗ್ರಾಮದಲ್ಲಿ ದಲಿತ ಕುಟುಂಬದ ಮನೆಗೆ ಭೇಟಿ ನೀಡಿ ಅವರೊಂದಿಗೆ ಊಟ ಮಾಡಿದ್ದರು.