Karnataka Assembly Election:ವಿಭಿನ್ನ ರೀತಿಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ : ಯುವಕನ ನಡೆಗೆ ಅಧಿಕಾರಿಗಳಿಂದ ಮೆಚ್ಚುಗೆ !

Karnataka Assembly Election: ತಹಸಿಲ್ದಾರ ಕಛೇರಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ತಾಲೂಕಿನ ಯಂಕಪ್ಪ ದೇವಿಂದ್ರಪ್ಪ ಎಂಬುವನು ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲು ವಿಭಿನ್ನ ರೀತಿಯಲ್ಲಿ ಬಂದಿದ್ದನು. ಅಭ್ಯರ್ಥಿ ವಿಭಿನ್ನ ನೆಲೆಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. 

Written by - Zee Kannada News Desk | Last Updated : Apr 18, 2023, 06:27 PM IST
  • ವಿಭಿನ್ನ ರೀತಿಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ
  • ಕಾವಿ ಬಟ್ಟೆ ಧರಿಸಿರುವ ಅಭ್ಯರ್ಥಿ ಎಂ.ಎ ಪದವಿಧರ
  • ಅಭ್ಯರ್ಥಿ ನಡೆಗೆ ಅಧಿಕಾರಿಗಳಿಂದ ಮೆಚ್ಚುಗೆ
Karnataka Assembly Election:ವಿಭಿನ್ನ ರೀತಿಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ : ಯುವಕನ ನಡೆಗೆ ಅಧಿಕಾರಿಗಳಿಂದ ಮೆಚ್ಚುಗೆ ! title=

ಯಾದಗಿರಿ:  ತಹಸಿಲ್ದಾರ ಕಛೇರಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ತಾಲೂಕಿನ ಯಂಕಪ್ಪ ದೇವಿಂದ್ರಪ್ಪ ಎಂಬುವನು ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲು ವಿಭಿನ್ನ ರೀತಿಯಲ್ಲಿ ಬಂದಿದ್ದನು. ಅಭ್ಯರ್ಥಿ ವಿಭಿನ್ನ ನೆಲೆಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. 

ರಾಮಸಮುದ್ರ ಗ್ರಾಮದ ಯಂಕಪ್ಪನು ಎಂ.ಎ ಪದವಿಧರನಾಗಿದ್ದಾನೆ. ಸಮಾಜದಲ್ಲಿರುವ ಕೆಲವು ಅನಿಷ್ಟ ಪದ್ದತಿಗಳನ್ನು ತೊಲಗಿಸಿ, ಸಮಾನತೆಯ ಸಾಮರಸ್ಯದ ಸಮಾಜ ನಿರ್ಮಾಣ ಮಾಡಬೇಕೆಂಬುವುದು ಈತನ ನಿಲುವುವಂತೆ.!

ಇದನ್ನೂ ಓದಿ: Crime News: ಚುನಾವಣೆ ಬೆನ್ನಲೇ ಹೆಚ್ಚಾಯಿತ್ತು ನಗರದಲ್ಲಿ ಗಡಿಪಾರಾದ ರೌಡಿಗಳ ಅಟ್ಟಹಾಸ !

ಇದಕ್ಕಾಗಿಯೇ 27 ವರ್ಷದ ಯುವಕ ಕಳೆದ ಒಂದು ವರ್ಷದಿಂದ ತನ್ನ ಮನೆ ಬಿಟ್ಟು ,ವ್ಯಯಕ್ತಿಕ ಎಲ್ಲಾ ಸುಖ ಜೀವನ ತೊರೆದು, ಕಾವಿ ಬಟ್ಟೆ ಧರಿಸಿ ಸಮಾಜದಲ್ಲಿರುವ ಕೆಲವು ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡುತ್ತಿದ್ದಾನೆ. ಮಾದರಿಯಾಗಿರುವ ಈ ಯುವಕ  ಪ್ರತಿ ಹಳ್ಳಿ ಹಳ್ಳಿಗಳಿಗೂ ಹೋಗಿ ಚುನಾವಣೆ ಜೊತೆಗೆ ಅನಿಷ್ಟ ಪದ್ದತಿಗಳ ಜಾಗೃತಿ ಮೂಡಿಸಿ ಬರುತ್ತಾನಂತೆ. 

ಇದನ್ನೂ ಓದಿ: ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ; ಶೆಟ್ಟರ್ ವಿರುದ್ಧ ಮಹೇಶ್ ತೆಂಗಿನಕಾಯಿ ಕಣಕ್ಕೆ

ಇದೀಗ ಈ ಪದವೀಧರ ಸಮಾಜದ ತೊಡಕುಗಳನ್ನು ಹೋಗಲಾಡಿಸಲು  ರಾಜಕೀಯ ಪ್ರವೇಶ ಮಾಡಿದ್ದಾನೆ. ಜಾಗೃತಿ ಮೂಡಿಸುವ ವೇಳೆ ಕಂಡ ಬಂದ ದೃಶ್ಯಗಳಿಂದ ಅವುಗಳನ್ನು   ತೊಡಕುಗಳನ್ನು ತೊಡೆದು ಹಾಕಲು ಯುವಕ ರಾಜಕೀಯ ದಾರಿ ಹಿಡಿದಿದ್ದಾನೆ.  ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.  ಯುವಕನ ನಡೆ ಗಮನಿಸಿದ ಜನರು ಚುನಾವಣೆಗೆ ಸಹಕಾರಿಯಾಗಿಲಿ ಎಂದು  1-2-5 ರೂ. ನಾಣ್ಯಗಳನ್ನು  ಆತನ ಜೋಳಿಗೆಗೆ ಹಾಕಿದ್ದಾರೆ. 

ಜನರು ನೀಡಿರುವ ನಾಣ್ಯಗಳನ್ನು ಸಂಗ್ರಹಿಸಿ, ಸಮಾಜ ಸೇವೆ ಮಾಡಬೇಕು ಎಂಬ ಉದ್ದೆಶದೊಂದಿಗೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಯಂಕಪ್ಪ ತಿಳಿಸಿದ್ದಾರೆ.  ಪಕ್ಷೇತರ ಅಭ್ಯರ್ಥಿಯ  ನಾಣ್ಯಗಳನ್ನು ತಂದಿರುವುದನ್ನು ಗಮನಿಸಿ  ಗೊಂದಲಕ್ಕೆ ಈಡಾಗಿ, ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ 4 ಸಿಬ್ಬಂದಿಗಳು ಸುಮಾರು ಗಂಟೆಗಳ ಕಾಲ 10 ಸಾವಿರ ನಾಣ್ಯಗಳನ್ನು ಎಣಿಕೆ ಮಾಡಿದ್ದಾರೆ.   ಈತನ ನಡೆಗೆ  ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಇದೀಗ ಯುವಕರಿಗೆ ಮಾದರಿಯಾಗಿರುವ  ಯಂಕಪ್ಪ ಅವರ ನಾಮಪತ್ರವು  ಸ್ವಿಕೃತವಾಗಿದೆ. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News