"ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ"

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಇದು ಮಹತ್ವದ ಚುನಾವಣೆ. ಒಂದುವೇಳೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯದೇ ಹೋದರೆ ನಮಗೆ ಯಾರಿಗೂ ವೋಟಿನ ಅಧಿಕಾರ ನಮಗೆ ಇರೋದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ ಎಂದು ಮಳವಳ್ಳಿಯಲ್ಲಿ ನಡೆದ ಸಾರ್ವಜನಿಕ‌ ಸಭೆಯಲ್ಲಿ‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Written by - Zee Kannada News Desk | Last Updated : Apr 29, 2023, 06:09 PM IST
  • ರಾಹುಲ್ ಗಾಂಧಿ ಅವರು ಅವರೇನು ಪ್ರಧಾನಿ ಆಗಕ್ಕೆ ಈ ಯಾತ್ರೆಯನ್ನು ಮಾಡಿಲ್ಲ
  • ಜನಸಾಮಾನ್ಯರ ಕಲ್ಯಾಣಕ್ಕಾಗಿ ಮಾಡಿದ್ದರು
  • ರಾಹುಲ್ ಗಾಂಧಿ ಹೆದರುವವರು ಅಲ್ಲ
"ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ" title=

ಮಳವಳ್ಳಿ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಇದು ಮಹತ್ವದ ಚುನಾವಣೆ. ಒಂದುವೇಳೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯದೇ ಹೋದರೆ ನಮಗೆ ಯಾರಿಗೂ ವೋಟಿನ ಅಧಿಕಾರ ನಮಗೆ ಇರೋದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ ಎಂದು ಮಳವಳ್ಳಿಯಲ್ಲಿ ನಡೆದ ಸಾರ್ವಜನಿಕ‌ ಸಭೆಯಲ್ಲಿ‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ-ಮಧುಮೇಹಿಗಳಿಗೂ ಪಾರ್ಶ್ವವಾಯುವಾಗಬಹುದು ! ಈ ಲಕ್ಷಣಗಳಿದ್ದರೆ ಎಚ್ಚರವಿರಲಿ

ಇಂದು ಯುವಕರು/ ಮುದುಕರು,  ಹೆಣ್ಣು / ಗಂಡು ಎಲ್ಲ ವಯಸ್ಕರಿಗೂ ವೋಟಿನ ಅಧಿಕಾರವಿದೆ. ಒಂದು ವೇಳೆ ಅಂಬೇಡ್ಕರ್, ನೆಹರೂ ಅವರು ಮತದಾನದ ಹಕ್ಕನ್ನು ಕೊಡದೇ ಇರುತ್ತಿದ್ದರೆ ಇಂದು ಯಾರೂ ನಿಮ್ಮ ಮನೆಬಾಗಿಲಿಗೆ ಮತಯಾಚನೆಗೆ ಬರುತ್ತ ಇರಲ್ಲಿಲ್ಲ. ಹಾಗಾಗಿ ನಮಗೆ ಇಂದು ಮತದಾನವನ್ನು ಮಾಡುವ ಅವಕಾಶ ಕಲ್ಲಿಸಿದ್ದು ಅಂಬೇಡ್ಕರ್ ಮತ್ತು ನೆಹರೂ ಅವರು.ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಸೇರಿದಂತೆ ಅನೇಕ ಗರೀಬಿ ಹಟವೋ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರ ಮಾತ್ರ ಸಂವಿಧಾನವನ್ನು ತಿರುಚಬೇಕು ಮತ್ತು ಪ್ರಜಾಪ್ರಭುತ್ವವನ್ನು ಅಲುಗಾಡಿಸಬೇಕು  ಎಂಬ ಪ್ರಯತ್ನ ನಡೆಸುತ್ತಲೇ ಇದೆ.ಆದ್ದರಿಂದ ಕರ್ನಾಟಕದ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜಯಬೇರಿ ಗಳಿಸಿದರೆ ಇಡೀ ದೇಶದಲ್ಲಿ ಜಾಗೃತರಾಗುತ್ತಾರೆ ಎಂದು ಅವರು ಹೇಳಿದರು.

ನೀವು ಸತ್ಯವಾಗಿ ಮಾತನಾಡಿದರೆ ಬಿಜೆಪಿ ಸರ್ಕಾರ ಜೈಲಿಗೆ ಕಳಿಸುತ್ತಾರೆ. ಅನೇಕ ಜನ ಪ್ರಗತಿಪರ ವಿಚಾರಧಾರೆಗೆ ಬೆಂಬಲಕೊಟ್ಟರೆ ಅವರಿಗೆ ಈಡೀ, ಐಟಿ ಅಂತ ಬೆದರಿಸುವ ಮುಖೇನ ಅವರನ್ನು ಹತ್ತಿಕುವ ಕೆಲಸ ಈ ಸರ್ಕಾರ ಮಾಡುತ್ತಲೇ ಇದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಸತ್ಯ ಹೇಳಿದ್ರೆ ಅವರ ಭಾಷಣವನ್ನು ತೆಗೆದ್ರು ರಾಜ್ಯಸಭೆ ಮಾತನಾಡಿದ ನನ್ನ ಭಾಷಣವನ್ನು ತೆಗೆದ್ರು. ನಮ್ಮನ್ನು ಬಾಯಿ ಮುಚ್ಚಿಸಲು ರಾಹುಲ್ ಗಾಂಧೀ ಅವರ ಸದಸ್ಯತ್ವವನ್ನೇ ತೆಗೆದ್ರು. ಮೋದಿಯ ಗೆಳೆಯ, ಗುಜರಾತ್ತಿನ ಸಂಸದ ನಾರಯಣ ಭಾಯ್ ಕಚಾಡಿಯಾ ಅವರು ದಲಿತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಅವರಿಗೆ 3 ವರ್ಷ 10 ತಿಂಗಳು ಶಿಕ್ಷೆಯಾಯಿತು. ಅವರನ್ನು ಅನರ್ಹಗೊಳಿಸಲಿಲ್ಲ. ಮತ್ತೇ 2019 ರಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆ ಆದಾಗ ಅವರನ್ನು ಒಂದೇ ದಿನದಲ್ಲಿ ಅನರ್ಹ ಮಾಡಿದರು. ಮನೆ ಖಾಲಿ ಮಾಡಿಸಿದರು ಎಂದು ಖರ್ಗೆ ಕಿಡಿ ಕಾರಿದರು.

ಕರ್ನಾಟಕ ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದಲಿತರಿಗೆ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಅನುದಾನವನ್ನು ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಸ್ ಈಪಿ ಅನುದಾವನ್ನು ಕೊಟ್ಟರು, ಬೇರೆ ಯಾವ ರಾಜ್ಯದಲ್ಲಿ ಈ ರೀತಿಯ ಅನುದಾನವನ್ನು ಕೊಟ್ಟಿಲ್ಲ.5 ಗ್ಯಾರಂಟಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಹಾಗೆಯೇ ಕಾಂಗ್ರೆಸ್ ಪಕ್ಷ ಇದೀಗ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ  ಅದರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಯುಪಿಎ ಸರ್ಕಾರ ಮನರೇಗಾ ಕಾರ್ಯಕ್ರಮ ಮಾಡಿದ್ದೇವೆ. ನಾವು ಎನ್ನೆಲ್ಲಾ ವಾಗ್ದಾನ ಮಾಡಿದ್ದೇವೆ ಅದು ಅಧಿಕಾರದಲ್ಲಿರುವಾಗ ಕೇಂದ್ರ ಮತ್ತು ರಾಜ್ಯದಲ್ಲೂ ನಾವು ನುಡಿದಂತೆ ನಡೆದಿದ್ದೇವೆ. ನಾವು ಘೋಷಣೆ ಮಾಡಿರುವ 5 ಗ್ಯಾರಂಟಿ ಕಾರ್ಯಕ್ರಮಗಳು ಅದು ಗ್ಯಾರಂಟಿಯೇ ಎಂಬ ಭರವಸೆ ವ್ಯಕ್ತಪಡಿಸುತ್ತೇನೆ. ಅದು ಬೋಗಸ್ ಅಲ್ಲ, ಸುಳ್ಳು ಹೇಳೊದು ಬಿಜೆಪಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದ್ದೇವೆ. ನಾವು ಯಾವತ್ತೂ ಬಡವರು ಮತ್ತು ಕಾರ್ಮಿಕರ ಪರ. ನಾವು ಬಡವರ ಕೃಷಿಕರ ಪರ ಪ್ರಗತಿಪರ ಕಾರ್ಯಕ್ರಮದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿ ಮೇಕೇದಾಟು ಪಾದಯಾತ್ರೆ, ರಾಜ್ಯದ ರೈತರಿಗೆ ಮಾಡಿದ ಮೊದಲ ಚಳವಳಿ ಈ ರೀತಿಯ ಚಳವಳಿ ಯಾರು ಮಾಡಿಲ್ಲ. ಭಾರತ್ ಜೋಡೊ ಯಾತ್ರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವುದರ ಮೂಲಕ 12 ರಾಜ್ಯಗಳಲ್ಲಿ ಸುಮಾರು 3,500 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದರು.  ಇದರಲ್ಲಿ ಜನಸಾಮಾನ್ಯರ ಕಷ್ಟ ಬವಣೆಗಳು ಅರಿಯಲು ಸಾಧ್ಯವಾಯಿತು.   ರಾಹುಲ್ ಗಾಂಧಿ ಅವರು  ಅವರೇನು ಪ್ರಧಾನಿ ಆಗಕ್ಕೆ ಈ ಯಾತ್ರೆಯನ್ನು ಮಾಡಿಲ್ಲ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಮಾಡಿದ್ದರು.  ರಾಹುಲ್ ಗಾಂಧಿ ಹೆದರುವವರು ಅಲ್ಲ ಎಂದು ಹೇಳಿದರು.

ಇದನ್ನೂ ಓದಿ-Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್!

ನಮಗೆ ಬಿಜೆಪಿ ಅವರು ಕೇಳ್ತಾರೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದ್ದಾರೆ ಅಂತ ಕೇಳ್ತಾರೆ. 75% ರಷ್ಟು ಸಾಕ್ಷರತೆಯನ್ನು ಮತ್ತು ಶಿಕ್ಷಣದ ಮೂಲಕ ಜನರನ್ನು ವಿದ್ಯಾವಂತರನ್ನು ಮಾಡಿದ್ದೇ ಕಾಂಗೆಸ್ಸಿನ ದೊಡ್ಡ ಕೊಡುಗೆ. ಮೂಲಭೂತ ಸೌಕರ್ಯವನ್ನು ಕೊಟ್ಟಿದ್ದೇವೆ, ಆಸ್ಪತ್ರೆ ಮಾಡಿದ್ದೇವೆ.
ಬೇಲೆಯೇರಿಕೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ.ಅದೇ ರೀತಿ ಮಿತಿಮೀರಿದ ಭ್ರಷ್ಟಾಚಾರ ಇವೆಲ್ಲಾ ನೋಡಿದಾಗ ಈ ಬಿಜೆಪಿ ಸರ್ಕಾರ ಯಾರಿಗೂ ಬೇಕಾಗಿಲ್ಲ. ಅದಕ್ಕೆ ತೆಗೆಯಬೇಕಂತ ರಾಜ್ಯದ ಜನ ಮನಸ್ಸು ಮಾಡಿದ್ದಾರೆ.  ಹಾಗಾಗಿ ಮನುಷ್ಯನ ಅಂಗಾಗಗಳಲ್ಲಿ ಕೈ ಅವಿಭಾಜ್ಯ ಅಂಗ ಹಾಗಾಗಿ. ಈ ಬಾರಿ ಕೈ ಯನ್ನು ಬಲಪಡಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಹಾಗೂ ಈ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿಯಲ್ಲಿ ಈ ಬಾರಿ ನರೇಂದ್ರ ಸ್ವಾಮಿಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ಕ್ಷೇತ್ರದ ಜನತೆಗೆ ಕರೆ ನೀಡಿದರು.

ಮಳವಳ್ಳಿಯಲ್ಲಿ ನಡೆದ ಸಾರ್ವಜನಿಕ‌ ಸಭೆಯಲ್ಲಿ‌ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವರಾದ ಬಿ ಸೋಮಶೇಖರ್, ನರೇಂದ್ರ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News