ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಧೂಳೆಬ್ಬಿಸಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ರಾಜ್ಯದ ಮತದಾರ ಕಾಂಗ್ರೆಸ್ ಸ್ಪಷ್ಟ ಬಹುಮತ ನೀಡಿದೆ. ಹಳೆ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹವಾ ಜೋರಾಗಿದ್ದು, ಸಿದ್ದು ಸೋಲಿಸಲು ಪ್ಲಾನ್ ಮಾಡಿದ್ದ ಬಿಜೆಪಿ ನಾಯಕರು ಮಕಾಡೆ ಮಲಗಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿಹೊಯ್ತು ಜೆಡಿಎಸ್ , ಬಿಜೆಪಿ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಹವಾ. ವರುಣದಲ್ಲಿ ಸೋಮಣ್ಣಗೆ ಸಿದ್ದರಾಮಯ್ಯ ಡಿಚ್ಚಿ. ಎಸ್ ತವರಿನಲ್ಲೇ ಮಾಜಿ ಸಿಎಂ ಕಟ್ಟಿಹಾಕ್ಬೇಕು ಅನ್ನೋ ವಿಪಕ್ಷಗಳ ಪ್ಲಾನ್ ವಿಪಕ್ಷಗಳಿಗೆ ಕೈಕೊಟ್ಟಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಸೋಮಣ್ಣ ವಿರುದ್ಧ. 46006 ಮತಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಬಿಟ್ರೆ ಬಿಜೆಪಿ ಎಲ್ಲೂ ಖಾತೆ ತೆರೆಯಲ್ಲೇ ಇಲ್ಲ.
ನಂಜನಗೂಡಿನಲ್ಲಿ ದಿ.ಧೃವನಾರಾಯಣ್ ಪುತ್ರ ದರ್ಶನ್ ಧೃವ ಗೆಲುವು ಸಾಧಿಸಿದ್ರೆ, ಪಿರಿಯಾಪಟ್ಟಣದಲ್ಲಿ ಕೆ.ವೆಂಕಟೇಶ್, ಹಾಲಿ ಕೆ.ಆರ್. ನಗರದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಜೆಡಿಎಸ್ ನ ಸಾ.ರಾ.ಮಹೇಶ್ ಕಾಂಗ್ರೆಸ್ ನ ಡಿ.ರವಿಶಂಕರ್ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ. ಇನ್ನೂ ಕೇವಲ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ, ಪುತ್ರ ಹರೀಶ್ ಗೌಡ ಗೆಲುವಿಗೆ ಮೈಸೂರು ಜಿಲ್ಲೆ ಸೀಮಿತವಾಗಿದೆ. ಈ ಬಗ್ಗೆ ಮಾತನಾಡಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಮೋದಿ, ಅಮಿತ್ ಶಾ, ನಡ್ಡ ಎಷ್ಟೇ ಬಾರಿ ಬಂದ್ರೂ ಏನೂ ಪ್ರಯೋಜನ ಇಲ್ಲ ಎಂದಿದ್ದಾರೆ.
ಇನ್ನೂ, ಮೈಸೂರು ಹೊರತುಪಡಿಸಿ ಮಂಡ್ಯ ಜಿಲ್ಲೆಯಲ್ಲಿ ಹುರಿಗೌಡ, ನಂಜೇಗೌಡ ಸ್ಟ್ಯಾಟರ್ಜಿ ಬಿಜೆಪಿಗೆ ವರ್ಕೌಟ್ ಆಗಿಲ್ಲ. ಮಂಡ್ಯ 7 ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಆಗಿದೆ. ಮಂಡ್ಯದ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಐದರಲ್ಲಿ ಗೆದ್ರೆ, ಮೇಲುಕೋಟೆ ಕಾಂಗ್ರೆಸ್ ರೈತಸಂಘ ಬೆಂಬಲಿತ ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಮಂಜು ಗೆಲುವು ಸಾಧಿಸಿದ್ದು, ಜೆಡಿಎಸ್ ಭದ್ರಕೋಟೆ ಛಿದ್ರವಾಗಿದೆ. ಇನ್ನುಳಿದಂತೆ ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಆಗಿದೆ. ಜಿಲ್ಲೆಯಲಿದ್ದ ಇಬ್ಬರು ಹಾಲಿ ಬಿಜೆಪಿ ಶಾಸಕರಾದ ನಿರಂಜನ್ ಕುಮಾರ್, ಎನ್ ಮಹೇಶ್ ಸೋಲು ಕಂಡಿದ್ದಾರೆ. ಚಾಮರಾಜನಗರ, ವರುಣ ಎರಡೂ ಕಡೆ ನಿಂತಿದ್ದ ವಿ.ಸೊಮಣ್ಣ ಹರಕೆಯ ಕುರಿತಂತಾಗಿದ್ದಾರೆ.
ಇದನ್ನೂ ಓದಿ: Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು
ಒಟ್ಟಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಾಗಿದೆ. ಸಿದ್ದರಾಮಯ್ಯ ಸೋಲಿಸ್ತಿವಿ ಸೋಲಿಸ್ತೀವಿ ಅಂತಿದ್ದ ಬಿಜೆಪಿ, ಜೆಡಿಎಸ್ ನಾಯಕರು ತಾವೇ ಸೋತು ಸೋಲೊಪ್ಪಿಕೊಂಡಿರೋದಂತು ಸುಳ್ಳಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ