ಈ ಬಾರಿ ಚುನಾವಣೆ ಇಂಟರೆಸ್ಟಿಂಗ್‌ ಅನಿಸಲಿಲ್ಲ, ಅದಕ್ಕೆ ಪ್ರಚಾರಕ್ಕೆ ಹೋಗಿಲ್ಲ..!

actor Yash casting his vote :  ಎಲ್ಲರೂ ತಪ್ಪದೇ ಮತದಾನ ಮಾಡಬೇಕು, ಅದು ನಮ್ಮ ಹಕ್ಕು, ಕರ್ತವ್ಯ. ನನ್ನ ಹಕ್ಕು ಚಲಾಯಿಸಿದ್ದೀನಿ. ನನಗೆ ಈ ಬಾರಿ ಚುನಾವಣೆ ಇಂಟರೆಸ್ಟಿಂಗ್‌ ಅನಿಸಲಿಲ್ಲ. ಅದಕ್ಕಾಗಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ಕಳೆದ ಬಾರಿ ಒಂದಷ್ಟು ಉದ್ದೇಶಗಳಿದ್ದವು ಎಂದು ಯಶ್‌ ಪ್ರಚಾರಕ್ಕೆ ತೆರಳದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. 

Written by - Krishna N K | Last Updated : May 10, 2023, 06:06 PM IST
  • ಮತದಾನ ಮಾಡಿದ ನಟ ರಾಕಿಂಗ್‌ ಸ್ಟಾರ್‌ ಯಶ್‌.
  • ಎಲ್ಲರಿಗೂ ಮತದಾನ ಮಾಡುವಂತೆ ಮನವಿ ಮಾಡಿದ ರಾಕಿಭಾಯ್‌.
  • ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಕುರಿತು ಯಶ್‌ ಪ್ರತಿಕ್ರಿಯೆ.
ಈ ಬಾರಿ ಚುನಾವಣೆ ಇಂಟರೆಸ್ಟಿಂಗ್‌ ಅನಿಸಲಿಲ್ಲ, ಅದಕ್ಕೆ ಪ್ರಚಾರಕ್ಕೆ ಹೋಗಿಲ್ಲ..! title=

Yash voted in Bangalore : ಈ ಬಾರಿಯ ಚುನಾವಣಾ ಕಣದಲ್ಲಿ ಸ್ಟಾರ್‌ ಪ್ರಚಾರಕ ಪೈಕಿ ರಾಕಿಂಗ್‌ ಸ್ಟಾರ್‌ ಯಶ್‌ ಗೈರಾಗಿದ್ದರು, ಕಿಚ್ಚ ಸುದೀಪ್‌ ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಇದೀಗ ಪ್ರಚಾರಕ್ಕೆ ಬಾರದ ಕಾರಣ ಕುರಿತು ನಟ ಯಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು.. ಇಂದು ಬೆಂಗಳೂರಿನ ಹೊಸಕೆರೆಹಳ್ಳಿ ಮತದಾನ ಕೇಂದ್ರದಲ್ಲಿ ಮತದಾನ ಚಲಾಯಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್‌, ಎಲ್ಲರೂ ತಪ್ಪದೇ ಮತದಾನ ಮಾಡಬೇಕು, ಅದು ನಮ್ಮ ಹಕ್ಕು, ಕರ್ತವ್ಯ. ನನ್ನ ಹಕ್ಕು ಚಲಾಯಿಸಿದ್ದೀನಿ. ಅದು ಬಹಳ ಮುಖ್ಯ ಎಂದು ಮತದಾನದ ಮಹತ್ವದ ಕುರಿತು ಮಾತನಾಡಿದರು. ಅಲ್ಲದೆ ಇದೇ ವೇಳೆ ಚುನಾವಣಾ ಪ್ರಚಾರದಲ್ಲಿ ಯಶ್ ಭಾಗಿಯಾಗದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Janhvi Kapoor : ಜಿಮ್‌ನಲ್ಲಿ ಬೆವರಿಳಿಸಿದ ಜಾನ್ವಿ..! ಅಬ್ಬಬ್ಬಾ... ಏನ್‌ ವರ್ಕೌಟ್‌ ಗುರು

ನನಗೆ ಈ ಬಾರಿ ಇಂಟರೆಸ್ಟಿಂಗ್‌ ಅನಿಸಲಿಲ್ಲ.. ಆ ಕಾರಣದಿಂದ ಹೋಗಲಿಲ್ಲ. ಕಳೆದ ಬಾರಿ ಒಂದಷ್ಟು ಉದ್ದೇಶಗಳಿತ್ತು. ಯಶೋಮಾರ್ಗದಿಂದ ಕೆಲಸಗಳು ಮಾಡ್ತಿದ್ವಿ ಎಂದರು. ಅಲ್ಲದೆ, ಯೂತ್ ಕೂಡ ವೋಟ್ ಮಾಡ್ತಿದ್ದಾರೆ. ವೋಟಿಂಗ್ ನಮ್ಮ ಹಕ್ಕು ಅನ್ನೋದನ್ನ ಯಂಗ್'ಸ್ಟರ್ಸ್ ಅರ್ಥ ಮಾಡಿಕೊಳ್ಳಬೇಕು. ಈಗಿನ ಚುನಾವಣೆ ವಿಚಾರವಾಗಿ ಮಾತನಾಡಿ, ರಾಜಕಾರಣಿಗಳು ಹಾಗೂ ಪಕ್ಷಗಳು ಮೂಲಭೂತ ಕೆಲಸಗಳನ್ನ ಸರಿಯಾಗಿ ಮಾಡಬೇಕು. ಆರೋಗ್ಯ, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನ ಮಾಡಬೇಕು. ಅದನ್ನ ಮಾಡಿದರೆ ಸಾಕು. ಜನ ಉಳಿದದ್ದನ್ನ ನೀಟ್ ಆಗಿ ಮಾಡ್ಕೊಂಡು ಹೋಗ್ತಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News