"ಸಿಟಿ" ರವಿಗೂ "ಓಟಿ" ಮದ್ಯಕ್ಕೂ ಯಾವ ಜನ್ಮದ ಮೈತ್ರಿ!?: ಕಾಂಗ್ರೆಸ್ ವ್ಯಂಗ್ಯ

ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ RSS ಕಚೇರಿಯಿಂದ ಬಂದಿದ್ದೇ ಸಿಟಿ ರವಿಯವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Mar 27, 2023, 05:50 PM IST
  • ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು
  • ಹೆಂಡ ಹಂಚುವ ಕಾರ್ಯಸೂಚಿ RSS ಕಚೇರಿಯಿಂದ ಬಂದಿದ್ದೇ ಸಿಟಿ ರವಿಯವರೇ?
  • ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ, ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ?
"ಸಿಟಿ" ರವಿಗೂ "ಓಟಿ" ಮದ್ಯಕ್ಕೂ ಯಾವ ಜನ್ಮದ ಮೈತ್ರಿ!?: ಕಾಂಗ್ರೆಸ್ ವ್ಯಂಗ್ಯ   title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಚಿಕ್ಕಮಗಳೂರಿನ ಎಐಟಿ ವೃತ್ತ ಸಮೀಪ ಅಪಘಾತಕೀಡಾಗಿದ್ದ ಕಾರಿನಲ್ಲಿ ಶಾಸಕ ಸಿ.ಟಿ.ರವಿ ಭಾವಚಿತ್ರದ ಕ್ಯಾಲೆಂಡರ್‌ಗಳು, ಮದ್ಯದ ಪ್ಯಾಕೆಟ್‌ಗಳು, ಕತ್ತಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.

ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿಟಿ" ರವಿಗೂ "ಓಟಿ" ಮದ್ಯಕ್ಕೂ ಯಾವ ಜನ್ಮದ ಮೈತ್ರಿ!?’ ಎಂದು ವ್ಯಂಗ್ಯವಾಡಿದೆ. ‘ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ RSS ಕಚೇರಿಯಿಂದ ಬಂದಿದ್ದೇ ಸಿಟಿ ರವಿಯವರೇ? ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ ಬಿಜೆಪಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಶಂಕರ್ ನಾಗ್ ಕನಸು ನನಸು: ಸಿಎಂ ಬೊಮ್ಮಾಯಿ

‘ಸಿಟಿ ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ "ಸಿಟಿ" ರವಿಗೂ, ಕಾರು ಆಘಾತಕ್ಕೂ, "ಓಟಿ" ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ! ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ!’ ಎಂದು ಕಾಂಗ್ರೆಸ್ ಕುಟುಕಿದೆ.

‘ಶಾಸಕರಿಗೆ "ಬಾಂಬೆ ಮಿಠಾಯಿ" ಆಮಿಷ ತೋರಿಸಿ ಆಪರೇಷನ್ ಮಾಡುವ ಬಿಜೆಪಿ ಮತದಾರರಿಗೆ ಹೆಂಡ ತೋರಿಸಿ ಮತ ಪಡೆಯಲು ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಸಿಟಿ ರವಿಗೆ ಸಂಬಂಧಿಸಿದ ಕಾರಿನಲ್ಲಿ "ಓಟಿ ಮದ್ಯ" ಹಾಗೂ ಲಾಂಗ್ ಪತ್ತೆಯಾಗಿದೆ. ಹೆಂಡ ಕುಡಿಸಿ, ಬೆದರಿಸಿ ಮತ ಪಡೆಯುವ ಜವಾಬ್ದಾರಿಯನ್ನು ರೌಡಿ ಮೋರ್ಚಾಗೆ ವಹಿಸಲಾಗಿದೆಯೇ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಸಿಎಂ ಬಲಗೈ ಭಂಟ ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ.ಶಿವಕುಮಾರ್

#BJPvsBJP ಕಿತ್ತಾಟವು "ಬಂಡಾಯಪರ್ವ"ವಾಗಿ ಬದಲಾಗಿದೆ. ಬಿಜೆಪಿಯ ಸಾಲು ಸಾಲು ಶಾಸಕರು, ಸಚಿವರ ವಿರುದ್ಧ ಅವರ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಇದು ಆಕ್ರೋಶವು ಸರ್ಕಾರದ ವೈಫಲ್ಯಕ್ಕಾಗಿಯೋ, ಶಾಸಕರ ವೈಫಲ್ಯಕ್ಕಾಗಿಯೋ ಬಿಜೆಪಿ? ಸ್ವಂತ ಕಾರ್ಯಕರ್ತರನ್ನೇ ಮೆಚ್ಚಿಸಲಾಗದ ಬಿಜೆಪಿ ಜನಸಾಮಾನ್ಯರನ್ನು ಮೆಚ್ಚಿಸಲು ಸಾಧ್ಯವೇ’ ಎಂದು ಕಾಂಗ್ರೆಸ್ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News