Karnataka Election 2023: ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ- ಕಾಂಗ್ರೆಸ್

Karnataka Election 2023: ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ, ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ, ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲವೇಕೆ? ಇದೇನಾ ಸಾಮಾಜಿಕ ನ್ಯಾಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Apr 17, 2023, 04:02 PM IST
  • ಟಿಕೆಟ್ ನೀಡುವ ವಿಚಾರದಲ್ಲಿ ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ
  • ಲಿಂಗಾಯತ ಸಮುದಾಯ ತಿರುಗಿ ಬೀಳುತ್ತಿದ್ದಂತೆಯೇ ಊಸರವಳ್ಳಿ ಬಣ್ಣ ಬದಲಿಸಿದ ಬಿಜೆಪಿ
  • ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲವೇಕೆ? ಎಂದು ಪ್ರಶ್ನಿಸಿದ ಕಾಂಗ್ರೆಸ್
Karnataka Election 2023: ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ- ಕಾಂಗ್ರೆಸ್ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಮುಂದಿನ ದಿನಗಳಲ್ಲಿಯೂ ಲಿಂಗಾಯಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬೀಳುತ್ತಿದ್ದಂತೆಯೇ ಊಸರವಳ್ಳಿ ಬಣ್ಣ ಬದಲಿಸಿದೆ ಬಿಜೆಪಿ’ ಎಂದು ಟೀಕಿಸಿದೆ.

ಇದನ್ನೂ ಓದಿ: ನಿಗೂಢ ಎಲೆಕ್ಷನ್ ಸ್ಟಾಟರ್ಜಿ : ಅಪ್ಪ ಕಾಂಗ್ರೆಸ್ ಅಭ್ಯರ್ಥಿ- ಮಗ ಪಕ್ಷೇತರನಾಗಿ ನಾಮಿನೇಷನ್

‘ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ, ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ, ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲವೇಕೆ? ಇದೇನಾ ಸಾಮಾಜಿಕ ನ್ಯಾಯ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವವರಿಗಿಂತ ರಾಜೀನಾಮೆ ಪತ್ರ ಸಲ್ಲಿಕೆ ಮಾಡುವವರೇ ಹೆಚ್ಚಿದ್ದಾರೆ! ಮುಳುಗುವ ಹಡಗಿನಿಂದ ಹೊರಜಿಗಿದು ಬದುಕುಳಿಯುವ ಅಭಿಯಾನ ಇದು! ಚಿತ್ತಾಪುರ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿದ್ದ ಬಿಜೆಪಿಯ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ನಿಖಿಲ್ ಕುಮಾಸ್ವಾಮಿ ನಾಮಪತ್ರ : ದೇವೇಗೌಡರರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು

‘ದೇಶದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯ ಕರ್ನಾಟಕ. ಆದರೆ ಕೇಂದ್ರ ಸರ್ಕಾರಕ್ಕೆ ಹೋಗುವ ಈ ತೆರಿಗೆ ವಾಪಾಸ್ ಕರ್ನಾಟಕಕ್ಕೆ ಬರುವುದು ಬಿಡಿಗಾಸಿನ ರೂಪದಲ್ಲಿ. ಉತ್ತರದ ರಾಜ್ಯಗಳಿಗೆ ನಮ್ಮ ತೆರಿಗೆಯ ಸಿಂಹಪಾಲು. ನಮ್ಮದೇ ತೆರಿಗೆಯಲ್ಲಿ ನಮಗೆ ಬಿಡಿಗಾಸು. ಇದು ಬಿಜೆಪಿ ದ್ರೋಹ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News