Karnataka Election 2023: ವರುಣಾಗೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ- ವಿ.ಸೋಮಣ್ಣ

Karnataka Assembly Election 2023: ಅಭಿವೃದ್ಧಿ ಕೆಲಸ‌ ಮಾಡುವವನಿಗೆ ಯಾವುದೇ ಜಾತಿ, ಗ್ರಾಮ ಇಲ್ಲ. ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಅಳವಡಿಸಿಕೊಂಡವನು ನಾನು. ಇದು ಮಾಜಿ ಸಿಎಂ ಕ್ಷೇತ್ರ, ಇಲ್ಲಿನ ಜನರ ಪ್ರೀತಿ ನೋಡಿ ಖುಷಿಯಾಗಿದೆ ಎಂದು ಸೋಮಣ್ಣ ಹೇಳಿದರು.

Written by - Puttaraj K Alur | Last Updated : Apr 26, 2023, 05:41 PM IST
  • ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಅಬ್ಬರದ ಪ್ರಚಾರ
  • ವರುಣಾಗೆ ಮೇ 2ರಂದು ಅಮಿತ್ ಶಾ ಮತ್ತು ಮೇ 4ರಂದು ಪ್ರಧಾನಿ ಮೋದಿ ಭೇಟಿ
  • ಡಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸುವಂತೆ ವಿ.ಸೋಮಣ್ಣ ಮನವಿ
Karnataka Election 2023: ವರುಣಾಗೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ- ವಿ.ಸೋಮಣ್ಣ  title=
ಬಿಜೆಪಿ ಬೆಂಬಲಿಸುವಂತೆ ವಿ.ಸೋಮಣ್ಣ ಮನವಿ

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಸೋಮಣ್ಣ ಮತದಾರರ ಬಳಿ ಮನವಿ ಮಾಡಿಕೊಂಡಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಮೇ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮೇ 4ರಂದು ಪ್ರಧಾನಿ ಮೋದಿ ಆಗಮಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

ಇದನ್ನೂ ಓದಿ: "ಮೈಲಾರಿ ಹೊಟೇಲ್ ನಲ್ಲಿ ನನಗೆ ಕರ್ನಾಟಕದ ಸ್ವಾಭಿಮಾನ, ಪರಿಶ್ರಮದ ದರ್ಶನವಾಯಿತು"-ಪ್ರಿಯಾಂಕಾ ಗಾಂಧಿ 

ಅಭಿವೃದ್ಧಿ ಕೆಲಸ‌ ಮಾಡುವವನಿಗೆ ಯಾವುದೇ ಜಾತಿ, ಗ್ರಾಮ ಇಲ್ಲ. ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಅಳವಡಿಸಿಕೊಂಡವನು ನಾನು. ಇದು ಮಾಜಿ ಸಿಎಂ ಕ್ಷೇತ್ರ, ಇಲ್ಲಿನ ಜನರ ಪ್ರೀತಿ ನೋಡಿ ಖುಷಿಯಾಗಿದೆ ಎಂದು ಸೋಮಣ್ಣ ಹೇಳಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಹಾಡಿ ಹೊಗಳಿದ ವಿ.ಸೋಮಣ್ಣ, ‘ನನಗೆ ಈಗ 72 ವರ್ಷ ವಯಸ್ಸು. ಹುಷಾರು, ನೀನು ಚಾಲೆಂಜ್ ಸ್ವೀಕಾರ ಮಾಡು ಅಂತಾ ಯಡಿಯೂರಪ್ಪನವರು ಹೇಳಿದರು. ಆಗ ನನಗೆ ಭಯ ಇತ್ತು, ಆದರೆ ಈಗ ಆ ಪುಣ್ಯಾತ್ಮ ಹೇಳಿದ್ದು ನಿಜ ಅನಿಸುತ್ತಿದೆ. ಇಲ್ಲಿನ ಜನರು ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸೋಮಣ್ಣ ಹೇಳಿದರು.

ಇದನ್ನೂ ಓದಿ: Karnataka Election: ಡಿಕೆಶಿ ರಕ್ತದಲ್ಲಿ ಬರೆದು ಕೊಡೋದು ಬೇಡ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News