ದೆಹಲಿಯಲ್ಲಿ ಸಚಿವ ಸಂಪುಟ ರಚನೆಗೆ ಕಸರತ್ತು
ದೆಹಲಿಯಲ್ಲಿ ಸಚಿವ ಸಂಪುಟ ರಚನೆ ಕಸರತ್ತು ನಡೆದಿದೆ. ನಾಲ್ವರು ನಾಯಕರ ನಡುವೆ ಮಹತ್ವದ ಸಭೆ ಜರುಗುತ್ತಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ನಿಯೋಜಿತ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಡಿಸಿಎಂ ಡಿಕೆಶಿ ಸಭೆಯಲ್ಲಿ ಉಪಸ್ಥಿತರಿದ್ದಾರೆ. 40 ಕ್ಕೂ ಹೆಚ್ಚು ಶಾಸಕರ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾವಾರು, ಜಾತಿವಾರು ಸಚಿವ ಸ್ಥಾನ ನೀಡಿಕೆ, ಅಲ್ಪಸಂಖ್ಯಾತ ಸಮುದಾಯದಿಂದ ಮೂವರಿಗೆ ಸ್ಥಾನ, ಜಮೀರ್ ಅಹ್ಮದ್, ಯು.ಟಿ.ಖಾದರ್, ತನ್ವೀರ್ ಸೇಠ್ಗೆ ಸಚಿವ ಸ್ಥಾನ, ಚಾಮರಾಜನಗರದ ಪುಟ್ಟರಂಗ ಶೆಟ್ಟಿಗೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ, ಮೈಸೂರಿನಿಂದ ಅನಿಲ್ ಚಿಕ್ಕಮಾದು ಹೆಸರು, ಕೊಡಗಿನ ಪೊನ್ನಣ್ಣ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ , ಎಸ್.ಎಸ್.ಮಲ್ಲಿಕಾರ್ಜುನ್, ಆರ್.ಬಿ.ತಿಮ್ಮಾಪೂರ, ಕೆ.ಹೆಚ್.ಮುನಿಯಪ್ಪ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಸ್ಪೀಕರ್ ಸ್ಥಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಇನ್ನು ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಶರಣ ಪ್ರಕಾಶ್ ಪಾಟೀಲ್ ಆಯ್ಕೆ ಪೆಂಡಿಂಗ್ನಲ್ಲಿದೆ ಎನ್ನಲಾಗಿದೆ. ಕೆ.ಎನ್.ರಾಜಣ್ಣ, ಎಸ್.ಆರ್.ಶ್ರೀನಿವಾಸ್ ಹೆಸರು ಇನ್ನೂ ಚರ್ಚೆಗೆ ಬಂದಿಲ್ಲ. ಲಕ್ಷ್ಮೀಹೆಬ್ಬಾಳ್ಕರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ. ಲಕ್ಷ್ಮಣ್ ಸವದಿ ಹೆಸರು ಚರ್ಚೆಗೆ ಬಂದಿಲ್ಲ ಆದ್ರೆ, ಜಗದೀಶ್ ಶೆಟ್ಟರ್ಗೆ ಸಚಿವ ಸ್ಥಾನ ನೀಡಲು ಸಮ್ಮತಿ ಇದೆ ಎಂದು ತಿಳಿದು ಬಂದಿದೆ.