ವರುಣ ಬಳಿಕ ಚಾಮರಾಜನಗರದಲ್ಲಿ ಸೋಮಣ್ಣ ಸ್ಟ್ರಾಟಜಿ: 2 ದಿನ ವಾಸ್ತವ್ಯ, ರಣನೀತಿ!

Karnataka Assembly Election 2023: ವರುಣ ಹಾಗೂ ಚಾಮರಾಜನಗರದಲ್ಲಿ ‘ಕಮಲ’ ಪತಾಕೆ ಹಾರಿಸಲು ಹತ್ತಾರು ಅಸ್ತ್ರ ಪ್ರಯೋಗಿಸಲಿರುವ ಸೋಮಣ್ಣ 2 ದಿನ ಮೊಕ್ಕಾಂ ಹೂಡಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದಾರೆ.

Written by - Zee Kannada News Desk | Last Updated : Apr 15, 2023, 10:34 AM IST
  • ವರುಣ ಕ್ಷೇತ್ರದ ಬಳಿಕ ಚಾಮರಾಜನಗರದಲ್ಲಿ ಚುನಾವಣಾ ರಣನೀತಿ ರೂಪಿಸುತ್ತಿರುವ ವಿ.ಸೋಮಣ್ಣ
  • ಶನಿವಾರ & ಭಾನುವಾರ 2 ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ
  • ವರುಣದಷ್ಟೇ ಚಾಮರಾಜನಗರದಲ್ಲೂ ಸೋಮಣ್ಣ ಪ್ರಬಲ ಸ್ಪರ್ಧೆ ಎದುರಿಸಿಬೇಕಾಗಿದೆ
ವರುಣ ಬಳಿಕ ಚಾಮರಾಜನಗರದಲ್ಲಿ ಸೋಮಣ್ಣ ಸ್ಟ್ರಾಟಜಿ: 2 ದಿನ ವಾಸ್ತವ್ಯ, ರಣನೀತಿ! title=
ಚುನಾವಣಾ ರಣನೀತಿ ರೂಪಿಸುತ್ತಿರುವ ವಿ.ಸೋಮಣ್ಣ!

ಚಾಮರಾಜನಗರ: ವರುಣ ಕ್ಷೇತ್ರದ ಬಳಿಕ ಚಾಮರಾಜನಗರದಲ್ಲಿ ಚುನಾವಣಾ ರಣನೀತಿ ರೂಪಿಸಲು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬರುತ್ತಿದ್ದು, ಶನಿವಾರ ಮತ್ತು ಭಾನುವಾರ 2 ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿದ್ದಾರೆ.

ಹೊಸ ಮನೆಗೆ ಸೋಮಣ್ಣ ಪತ್ನಿ ಪೂಜೆ

ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೊಸ ಮನೆ ಮಾಡಿದ್ದು, ಸದ್ದಿಲ್ಲದೇ ಸೋಮಣ್ಣ ಪತ್ನಿ ಆಗಮಿಸಿ ಹೊಸ ಮನೆಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ. ವರುಣದಷ್ಟೇ ಚಾಮರಾಜನಗರದಲ್ಲೂ ಸೋಮಣ್ಣ ಪ್ರಬಲ ಸ್ಪರ್ಧೆ ಎದುರಿಸಿಬೇಕಾಗಿದ್ದು, ಇದಕ್ಕಾಗಿ 2 ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ರಣನೀತಿ ರೂಪಿಸುವ ಜೊತೆಗೆ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದತಿ: ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತ-ಸಿದ್ದು

ಸಮಯವಕಾಶ ಕಡಿಮೆ ಇರುವ ಹಿನ್ನೆಲೆ ತಾಪಂ ಕ್ಷೇತ್ರವಾರು ಪ್ರಚಾರ ನಡೆಸಿ, ಬಹಿರಂಗ ಸಭೆ, ಮುಖಂಡರನ್ನು ಭೇಟಿಯಾಗಿ ತಮ್ಮದೇ ಆದ ಸ್ಟೈಲಿನಲ್ಲಿ ಅಖಾಡಕ್ಕೆ ಧುಮುಕಲಿದ್ದಾರೆ.

ಬಂಡಾಯ ಶಮನ-ರಣನೀತಿಯತ್ತ ಗಮನ!

ಈಗಾಗಲೇ ಬಿಜೆಪಿಯಲ್ಲಿನ ಬಂಡಾಯ ಅರ್ಧ ಶಮನವಾಗಿದ್ದು, ಸೋಮಣ್ಣ ಹಾದಿ ಸುಗಮವಾಗುತ್ತಿದೆ. ಮುಖಂಡರನ್ನು ಭೇಟಿಯಾಗಿ ಲೂಪ್ ಹೋಲ್ ಗಳನ್ನು ಮುಚ್ಚಿ, ಮುಖಂಡರ ಪಕ್ಷಾಂತರ ಎಲ್ಲದಕ್ಕೂ ಬ್ರೇಕ್ ಹಾಕಲಿದ್ದಾರೆ.

ಇದನ್ನೂ ಓದಿ: "ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ"

ಒಟ್ಟಿನಲ್ಲಿ ವರುಣ ಹಾಗೂ ಚಾಮರಾಜನಗರದಲ್ಲಿ ‘ಕಮಲ’ ಪತಾಕೆ ಹಾರಿಸಲು ಹತ್ತಾರು ಅಸ್ತ್ರ ಪ್ರಯೋಗಿಸಲಿರುವ ಸೋಮಣ್ಣ 2 ದಿನ ಮೊಕ್ಕಾಂ ಹೂಡಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News