ಕರುನಾಡಿನಲ್ಲಿ ರಾಹುಲ್‌ ಗಾಂಧಿ, ಮಂಗಳೂರಿನಲ್ಲಿ ರಾಗಾ ಭರ್ಜರಿ ರೋಡ್‌ ಶೋ

Rahul Gandhi : ಕರುನಾಡ ಕುರುಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಕದನ ಕಲಿಗಳು ರಣರಂಗದಲ್ಲಿ ಯಶಸ್ಸುಗಳಿಸಲು ಅಬ್ಬರದ ಪ್ರಚಾರವನ್ನು ನಡೆಸುತ್ತಿದ್ದಾರೆ. ಚುನಾವಣಾ ಕಣ ರಂಗೆರುತ್ತಿದ್ದಂತೆ ಕೇಂದ್ರ ನಾಯಕರು ಗೆಲುವು ಸಾಧಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೇಸ್‌ ತನ್ನ ಕೇಂದ್ರನಾಯಕರನ್ನು ರಾಜ್ಯಕ್ಕೆ ಕರೆರಲಿದೆ.   

Written by - Zee Kannada News Desk | Last Updated : Apr 27, 2023, 08:57 AM IST
  • ಮಂಗಳೂರಿನಲ್ಲಿ ರಾಹುಲ್‌ ಗಾಂಧಿ ಭರ್ಜರಿ ರೋಡ್‌ ಶೋ
  • ಜಿಲ್ಲೆಯ ಎಲ್ಲ ಕ್ಷೇತ್ರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
  • ಸುಮಾರು ಎರಡು ಕಿಮೀ ರೋಡ್ ಶೋ ನಡೆಸಲಿದ್ದಾರೆ.
ಕರುನಾಡಿನಲ್ಲಿ ರಾಹುಲ್‌ ಗಾಂಧಿ, ಮಂಗಳೂರಿನಲ್ಲಿ ರಾಗಾ ಭರ್ಜರಿ ರೋಡ್‌ ಶೋ  title=

Karnataka Assembly Election 2023 : ಬುಧವಾರ ಕಾಂಗ್ರೇಸ್‌ನ ನಾಯಕಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ನಡೆಸಿದ್ದರು. ಇಂದು ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಮಂಗಳೂರಿನಲ್ಲಿ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಭರ್ಜರಿ ರೋಡ್‌ ಶೋ ನಡೆಯಲಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ನಗರದ ಕಲೆಕ್ಟರ್ಸ್ ಗೇಟ್ ನಿಂದ ನೆಹರೂ ಮೈದಾನದವರೆಗೆ ಸುಮಾರು ಎರಡು ಕಿಮೀ ರೋಡ್ ಶೋ ನಡೆಸಲಿದ್ದಾರೆ. 

ಮಂಗಳೂರಿನಲ್ಲಿ ರಾಹುಲ್‌ ಗಾಂಧಿ ಕಲೆಕ್ಟರ್‌ ಗೇಟ್ ನಡುವೆ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಇದೀಗ ಅದಕ್ಕೆ ಅವಕಾಶ ಸಿಗದ ಕಾರಣ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿದ್ದು, ಸಭೆಗೂ ಮುನ್ನ ರಾಹುಲ್‌ ಗಾಂಧಿ ಅಡ್ಯಾರ್‌ನಲ್ಲಿ ಹೆದ್ದಾರಿ ಉದ್ದಕ್ಕೆ ರೋಡ್‌ ಶೋ ಮಾಡಲಿದ್ದಾರೆ. 

ಇದನ್ನೂ ಓದಿ-"ಅಮಿತ್ ಶಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ"-ಸಿದ್ದರಾಮಯ್ಯ

ಇದಲ್ಲದೇ ಇದೇ ಏಪ್ರೀಲ್‌ 29ಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳೂರಿಗೆ ಆಗಮಿಸಲಿದ್ದು, ಭರ್ಜರಿ ಮೆರವಣಿಗೆ ಜೊತೆಗೆ ರೋಡ್‌ ಶೋ ಸಹ ನಡೆಯಲಿದೆ. ಅಲ್ಲದೇ ಪ್ರಧಾನಿ ಮೋದಿ ಈ ತಿಂಗಳು ಚುನಾವಣಾ ಪ್ರಚಾರಕ್ಕೆ ಇಳಿಯಲಿದ್ದು, ಏಪ್ರಿಲ್‌ 29 ರಿಂದ ಮೇ 7ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಆರು ದಿನಗಳಲ್ಲಿ ನರೇಂದ್ರ ಮೋದಿ ಹೆಚ್ಚು ರೋಡ್‌ ಶೋ ಗಳಲ್ಲಿ ಭಾಗವಹಿಸಲಿದ್ದು, ಬಿಜೆಪಿ ಪರವಾಗಿ ಅಬ್ಬರದ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. 

ಇದನ್ನೂ ಓದಿ-Karnataka Election 2023: ನೀತಿ ಸಂಹಿತೆ ಮುಗಿದ ಕೂಡಲೇ ಮಹದಾಯಿ ಯೋಜನೆ ಆರಂಭ- ಸಿಎಂ ಬೊಮ್ಮಾಯಿ‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News