"ಬೊಮ್ಮಾಯಿ ಅವರೇ ಮೀಸಲಾತಿ ವಿಚಾರವಾಗಿ ನಿಮ್ಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆದಿರುವುದೇಕೆ?"

ದುರಾದೃಷ್ಟವಶಾತ್, ಬಸವರಾಜ ಬೊಮ್ಮಾಯಿ ಅವರು ಅವರದೇ ಪಕ್ಷ ಶಾಸಕ ನೆಹರೂ ಓಲೇಕರ್ ಅವರ ಪ್ರಕಾರ 40% ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪ ನಾವು ಮಾಡಿಲ್ಲ. ನೆಹರೂ ಓಲೇಕರ್ ಹೇಳಿರುವುದನ್ನು ಸಿದ್ದರಾಮಯ್ಯ ಪುನರುಚ್ಛರಿಸಿದರೆ, ಅದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

Written by - Zee Kannada News Desk | Last Updated : Apr 23, 2023, 12:12 PM IST
  • ಸುಳ್ಳು ಹಾಗೂ ವಂಚನೆ ಹೆಚ್ಚಿನ ಕಾಲ ಬಾಳಿಕೆ ಬರುವುದಿಲ್ಲ.
  • ಆದರೆ ಬಿಜೆಪಿ ಇದನ್ನೇ ಮಾಡುತ್ತಿದೆ. ಬಿಜೆಪಿಯವರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಲಿ.
  • ಬೊಮ್ಮಾಯಿ ಅವರ ಸರ್ಕಾರ ಲಿಂಗಾಯತರ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆಹಿಡಿದಿರುವುದೇಕೆ?
"ಬೊಮ್ಮಾಯಿ ಅವರೇ ಮೀಸಲಾತಿ ವಿಚಾರವಾಗಿ ನಿಮ್ಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆದಿರುವುದೇಕೆ?" title=

ಬೆಂಗಳೂರು: ಬಿಜೆಪಿ ಹಾಗೂ ಬೊಮ್ಮಾಯಿ ಅವರು ಎಸ್ ಸಿ, ಎಸ್ ಟಿ, ಒಬಿಸಿಗೆ ಮಾತ್ರ ಮೋಸ ಮಾಡಿಲ್ಲ, ಮೀಸಲಾತಿ ಹೆಸರಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು, ಅದನ್ನು ಒಕ್ಕಲಿಗರು, ಲಿಂಗಾಯತರಿಗೆ ನೀಡಿ, ಈ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆ ಹಿಡಿದಿದ್ದಾರೆ. ಬೊಮ್ಮಾಯಿ ಅವರೇ ಮೀಸಲಾತಿ ವಿಚಾರವಾಗಿ ನಿಮ್ಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆದಿರುವುದೇಕೆ? ಇಂದು ಬಸವಣ್ಣನವರ ಜಯಂತಿ, ಹೀಗಾಗಿ ನೀವು ಲಿಂಗಾಯತ ಸಮುದಾಯದವರಿಗೆ ಈ ವಿಚಾರವಾಗಿ ಸ್ಪಷ್ಟನೆ ನೀಡಬೇಕು. ನೀವು ಲಿಂಗಾಯತರಿಗೆ ಅಪಮಾನ, ದ್ರೋಹ ಬಗೆದಿದ್ದು, ನೀವು ನಮ್ಮನ್ನು ಪ್ರಶ್ನೆ ಮಾಡುತ್ತೀರಾ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Photo Gallery: ಮೋದಿ ಏನು ದೇವರಾ? ಮಠಾಧೀಶರಾ? ಅಥವಾ ಛೂಮಂತರ್ ಬಾಬಾನಾ?-ಕಾಂಗ್ರೆಸ್ ಪ್ರಶ್ನೆ

ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು

ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ಬಹಳ ಸ್ಪಷ್ಟವಾಗಿ ತಮ್ಮ ಹೇಳಿಕೆ ನೀಡಿದ್ದು, ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೊಡುಗೆಗಳನ್ನು ನೀಡಿರುವವರ ಬಗ್ಗೆ ನನಗೆ ಬಹಳ ಗೌರವವಿದೆ. ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್, ನಿಜಲಿಂಗಪ್ಪ ಅವರು ಲಿಂಗಾಯತ ಸಮುದಾಯದಿಂದ ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್, ಬಸವರಾಜ ಬೊಮ್ಮಾಯಿ ಅವರು ಅವರದೇ ಪಕ್ಷ ಶಾಸಕ ನೆಹರೂ ಓಲೇಕರ್ ಅವರ ಪ್ರಕಾರ 40% ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪ ನಾವು ಮಾಡಿಲ್ಲ. ನೆಹರೂ ಓಲೇಕರ್ ಹೇಳಿರುವುದನ್ನು ಸಿದ್ದರಾಮಯ್ಯ ಪುನರುಚ್ಛರಿಸಿದರೆ, ಅದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: Photo Gallery: ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಗೆ ಕಾರಂಜಿ ರೀತಿ ಚಿಮ್ಮಿದ ನೀರು....!

ಬೊಮ್ಮಾಯಿ ಅವರು ತಾವೊಬ್ಬರೆ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ ಭ್ರಮೆಯಿಂದ ಹೊರಬರಬೇಕು. ಬೊಮ್ಮಾಯಿ ಅವರು ತಮ್ಮ 40% ಕಮಿಷನ್ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್ ಸೇರಿದಂತೆ ರಾಜ್ಯದ ಪ್ರಮುಖ ಮುಖ್ಯಮಂತ್ರಿಗಳು ತಮ್ಮ ಸಮುದಾಯಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಬೊಮ್ಮಾಯಿ ಅವರು ಇವರುಗಳನ್ನು ನೋಡಿ ಶೇ.1 ರಷ್ಟಾದರೂ ಕಲಿತಿದ್ದರೆ ಸಾಕಿತ್ತು. ಇಂದು ಬಸವಣ್ಣ ಜಯಂತಿ. ಬಸವಣ್ಣನ ಸಿದ್ಧಾಂತ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಜಾತಿರಹಿತ ಸಮಾಜ, ಅಸಮಾನತೆ ರಹಿತ ಸಮಾಜ ನಿರ್ಮಾಣ ಬಸವಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ. ಬಸವಣ್ಣನವರು ಮನುಷ್ಯರಲ್ಲಿ ಸಮಾನತೆಯನ್ನು ಸಾರಲು ಮುಂದಾದವರು. ಅವರ ಮಾರ್ಗದರ್ಶನಗಳೇ ಭಾರತದ ಪ್ರಜಾಪ್ರಭುತ್ವದ ಅಡಿಪಾಯ. ಇಂದು ದೇಶದಲ್ಲಿ ಕಾಣುತ್ತಿರುವ ಸಂಸತ್ ಪ್ರಜಾಪ್ರಭುತ್ವವನ್ನು ಬಸವಣ್ಣನವರು 900 ವರ್ಷಗಳ ಹಿಂದೆಯೇ ಅಳವಡಿಸಿಕೊಂಡಿದ್ದರು. ಕಾಂಗ್ರೆಸ್ ಸ್ವಾತಂತ್ರ್ಯ ಚಳುವಳಿ ಬಸವಣ್ಣನವರ ವಚನ, ಮಹಾತ್ಮಾ ಗಾಂಧಿ ಅವರ ಆದರ್ಶಗಳ ಮೇಲೆ ಸಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: Photo Gallery: ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಗೆ ಕಾರಂಜಿ ರೀತಿ ಚಿಮ್ಮಿದ ನೀರು....!

ಬಸವರಾಜ ಬೊಮ್ಮಾಯಿಯಂತಹವರು ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಬಿಜೆಪಿಯವರು ಈ ಸಮಾಜದ ಪ್ರಮುಖರಾದ ಯಡಿಯೂರಪ್ಪ ಅವರಂತಹ ಪ್ರಮುಖ ನಾಯಕರನ್ನು ಬಳಸಿ ಮೂಲೆಗೆ ಬಿಸಾಡಿದೆ. ಯಡಿಯೂರಪ್ಪ ಅವರ ಜತೆ ನಮಗೆ ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಾವು ಯಡಿಯೂರಪ್ಪ ಅವರನ್ನು ಶೋಭಾ ಕರಂದ್ಲಾಜೆ ಅವರ ಕೆಳಗೆ ನೇಮಕ ಮಾಡುತ್ತಿರಲಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಅಪಮಾನ ಮಾಡಿದ್ದು ನಾವಲ್ಲ, ಬಿಜೆಪಿಯವರು. ಉಪಮುಖ್ಯಮಂತ್ರಿಯಾಗಿದ್ದ ಸವದಿ ಅವರನ್ನು ಮೂಲೆ ಗುಂಪು ಮಾಡಿದ್ದು ಬಿಜೆಪಿ. ಅನೇಕ ಲಿಂಗಾಯತ ನಾಯಕರನ್ನು ಅಪಮಾನ ಮಾಡಿದ್ದು ಬಿಜೆಪಿ. 

ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ದ ಬಿಜೆಪಿ ನಾಯಕರ ನಿರಂತರ ಟ್ವೀಟ್ ಬಗ್ಗೆ ಕೇಳಿದಾಗ, ‘ಸುಳ್ಳು ಹಾಗೂ ವಂಚನೆ ಹೆಚ್ಚಿನ ಕಾಲ ಬಾಳಿಕೆ ಬರುವುದಿಲ್ಲ. ಆದರೆ ಬಿಜೆಪಿ ಇದನ್ನೇ ಮಾಡುತ್ತಿದೆ. ಬಿಜೆಪಿಯವರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಲಿ. ಬೊಮ್ಮಾಯಿ ಅವರ ಸರ್ಕಾರ ಲಿಂಗಾಯತರ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆಹಿಡಿದಿರುವುದೇಕೆ? ಬೊಮ್ಮಾಯಿ ಅವರು ಸಾಲಿಸಿಟರ್ ಜೆನರಲ್ ತುಷಾರ್ ಮೆಹ್ತಾ ಅವರ ಮುಖೇನ ಸುಪ್ರೀಂ ಕೋರ್ಟ್ ನಲ್ಲಿ ಲಿಂಗಾಯತ, ಒಖ್ಕಲಿಗ, ಪರಿಶಿಷ್ಟ ಜಾತಿ ಹಾಗೂ ಪಂಗಡ ಮೀಸಲಾತಿ ಹೆಚ್ಚಳದ ಸರ್ಕಾರಿ ಆದೇಶಕ್ಕೆ ತಡೆ ತಂದಿರುವುದೇಕೆ? ಇದು ಈ ಸಮುದಾಯಗಳಿಗೆ ಮಾಡಿರುವ ಅಪಮಾನ, ದ್ರೋಹವಲ್ಲವೇ?

ಬೊಮ್ಮಾಯಿ ಹಾಗೂ ಸಂತೋಷ್ ಅವರು ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದು ಯಾಕೆ?ಬೊಮ್ಮಾಯಿ ಹಾಗೂ ಸಂತೋಷ್ ಅವರು ನಿರಂತರವಾಗಿ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿರುವುದೇಕೆ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಿದ ನಂತರ ಅವರು ನಮ್ಮನ್ನು ಪ್ರಶ್ನಿಸಲಿ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಸಿಪಿಐನ ರಾಜ್ಯ ಕಾರ್ಯದರ್ಶಿಗಳಾದ ಸುದ್ರೇಶ್ ಅವರು ಎಐಟಿಯುಸಿ ರಾಜ್ಯಾಧ್ಯಕ್ಷರಾದ ಕಾಮ್ರೇಡ್ ಅನಂತ ಸುಬ್ಬರಾವ್, ಸಿಪಿಐ ರಾಜ್ಯ ಸಹಾಯಕ ಕಾರ್ಯದರ್ಶಿ ಕಾಮ್ರೇಡ್ ಅಮ್ಜದ್, ಸಿಪಿಐನ ಕಾರ್ಯಕಾರಿ ಸದಸ್ಯರಾದ ಕಾಮ್ರೇಡ್ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News