ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಆಪತ್ತು ಫಿಕ್ಸ್!

ತಲೆಗೆ ತೀವ್ರ ಪೆಟ್ಟಾಗುತ್ತಿರುವ ಹಿನ್ನೆಲೆ ಸಾವಿನ ಸಂಖ್ಯೆಗಳು ಹಾಗೂ ವಿವಿಧ ರೀತಿಯ ಅಂಗ ವೈಕಲ್ಯತೆ ಕೇಸ್‍ಗಳು ಹೆಚ್ಚಾಗುತ್ತಿವೆಯಂತೆ. ಇನ್ನು ನಿಮ್ಹಾನ್ಸ್ ನಲ್ಲಿ ಪ್ರತಿ ತಿಂಗಳು ಸರಾಸರಿ 150 ಹಾಗೂ ವಾರ್ಷಿಕ 1,800 ಕೇಸ್‍ಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿರುವ ಆಘಾತಕಾರಿ ವಿಚಾರ.

Written by - Manjunath Hosahalli | Edited by - Puttaraj K Alur | Last Updated : Feb 8, 2023, 03:44 PM IST
  • ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿ ಗಾಡಿ ಓಡಿಸುವವರೇ ಎಚ್ಚರ.. ಎಚ್ಚರ..
  • ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ನೀಡಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ
  • ರಸ್ತೆ ಅಪಘಾತಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ
ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಆಪತ್ತು ಫಿಕ್ಸ್! title=
ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್!

ಬೆಂಗಳೂರು: ದ್ವಿಚಕ್ರ ವಾಹನ ಸವಾರರೇ ಎಚ್ಚರ ಎಚ್ಚರ! ಟ್ರಾಫಿಕ್ ರೂಲ್ಸ್ ಗಳನ್ನು ಉಲ್ಲಂಘಿಸಿ ಗಾಡಿ ಓಡಿಸುವವರೇ ತಪ್ಪದೇ ಈ ಸುದ್ದಿ ನೋಡಿ.‌ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

ಹೌದು, ವಾಹನ ಸವಾರರಿಗೆ ಶಾಕಿಂಗ್ ಸುದ್ದಿಯನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಅಂದ್ರೇ NIMHANS ನೀಡಿದೆ. ರಸ್ತೆ ಅಪಘಾತಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2017ರಿಂದ 2022ರವರೆಗೆ ನಿಮ್ಹಾನ್ಸ್‍ನಲ್ಲಿ ದಾಖಲಾಗಿದ್ದು ಬರೋಬ್ಬರಿ 76,883 ಕೇಸ್‍ಗಳು..

ತಲೆಗೆ ತೀವ್ರ ಪೆಟ್ಟಾಗುತ್ತಿರುವ ಹಿನ್ನೆಲೆ ಸಾವಿನ ಸಂಖ್ಯೆಗಳು ಹಾಗೂ ವಿವಿಧ ರೀತಿಯ ಅಂಗ ವೈಕಲ್ಯತೆ ಕೇಸ್‍ಗಳು ಹೆಚ್ಚಾಗುತ್ತಿವೆಯಂತೆ. ಇನ್ನು ನಿಮ್ಹಾನ್ಸ್ ನಲ್ಲಿ ಪ್ರತಿ ತಿಂಗಳು ಸರಾಸರಿ 150 ಹಾಗೂ ವಾರ್ಷಿಕ 1,800 ಕೇಸ್‍ಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿರುವ ಆಘಾತಕಾರಿ ವಿಚಾರ ಇದು.

ಇದನ್ನೂ ಓದಿ: ದೇಣಿಗೆ ಸಂಗ್ರಹಿಸುತ್ತಿದ್ದ ವಿಶೇಷಚೇತನನ ಮೇಲೆ ಮಂಗಳಮುಖಿಯರಿಂದ ಹಲ್ಲೆ ಆರೋಪ, ಕೇಸ್ ದಾಖಲು

ರ್ಯಾಶ್ ಡ್ರೈವಿಂಗ್, ಒನ್ ವೇಗಳಲ್ಲಿ ಸಂಚಾರ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ವಾಹನ ಚಾಲನೆ ವೇಳೆಯಲ್ಲಿ ಮೊಬೈಲ್ ಬಳಕೆ, ಅಪಾಯಕಾರಿ ವೀಲಿಂಗ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ಕುಡಿದು ವಾಹನ ಚಾಲನೆ ಸೇರಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯೇ ಈ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ಹೆಡ್ ಇಂಜ್ಯೂರಿ ಕೇಸ್ ಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಕಾರಣಗಳು ಹಲವಾರು. ಅವುಗಳನ್ನು ತಜ್ಞರು ಈ ರೀತಿ ಹೆಸರಿಸಿದ್ದಾರೆ.

1) ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿರೋದು ಅಪಘಾತಗಳಿಗೆ ಕಾರಣವಾಗಿರಬಹುದು.

2) ಇನ್ನು ISI ಸ್ಟ್ಯಾಂಡರ್ಡ್ ಹೆಲ್ಮೆಟ್ ಬಳಕೆ ಕಡಿಮೆಯಿದೆ, ಕ್ಯಾಪ್ ಹೆಲ್ಮೆಟ್ ಸಂಖ್ಯೆ ಜಾಸ್ತಿಯಿದೆ.

3)  ಅಪಘಾತಗಳು ಸಂಭವಿಸಿದಾಗ ತಲೆಗೆ ಪೆಟ್ಟು ಬೀಳುವ ಸಂಭವ ಹೆಚ್ಚಾಗಿರುತ್ತೆ. ಮತ್ತೊಂದು ಮೇಜರ್ ವಿಚಾರವೇನು ಅಂದ್ರೇ ತಲೆಗೆ ಪೆಟ್ಟು ಬಿದ್ದಾಗ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಸಹ ಕಡಿಮೆಯಿದೆ.

4)  ನ್ಯೂರೋ ಸರ್ಜನ್ಸ್ ಇಲ್ಲದೇ ಇದ್ದಾಗ ಸಮಸ್ಯೆ ಹೆಚ್ಚಾಗುತ್ತೆ. ಹೆಡ್ ಇಂಜ್ಯೂರಿ ಆದಾಗ ಅದನ್ನು ಟ್ರೀಟ್ ಮಾಡಲು ಎಲ್ಲಾ ವೈದ್ಯರಿಗೂ ಸಾಧ್ಯವಾಗದೇ ಇರೋದು.

5) ತಾಲೂಕು ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳಲ್ಲಿ ಅಪಘಾತ ಪ್ರಕರಣಗಳ ಸಂದರ್ಭದಲ್ಲಿ ಕೆಲವು ಬೇಸಿಕ್ ಚಿಕಿತ್ಸೆಯನ್ನಾದ್ರೂ ನೀಡುವಂತಾಗಬೇಕು. ಇದರಿಂದಾಗಿ ನಿಮಾನ್ಸಿಗೆ ಬರುವ ಗಾಯಾಳುಗಳ ಕೇಸ್ ಕಡಿಮೆಯಾಗುತ್ತವಂತೆ.

6) ಕಡ್ಡಾಯವಾಗಿ ISI ಸ್ಟ್ಯಾಂಡರ್ಡ್ ಹೆಲ್ಮೆಟ್ ಬಳಸುವಂತೆ ಪೊಲೀಸರು ಎನ್ಫೋರ್ಸ್ಮೆಂಟ್ ಮಾಡಬೇಕು. ಎಷ್ಟು ಬ್ರೈನ್ ಇಂಜ್ಯೂರಿ ಆಗುತ್ತಿದೆ ಎನ್ನುವ ಲೆಕ್ಕ ಅಂದ್ರೇ ಸರ್ವೇಲೆನ್ಸ್ ಸಿಸ್ಟಮ್ ಇದ್ರೇ ಒಳ್ಳೆಯದು. ನಿಮಾನ್ಸಿಗೆ ಅಥವಾ ಬೇರೆ ಬೇರೆ ಆಸ್ಪತ್ರೆಗಳಿಗೆ ಯಾವ ಯಾವ ರೀತಿಯ ಗಾಯಾಳುಗಳು ಬರ್ತಾರೆ ಅಂತಾ ಗೊತ್ತಾದಾಗ ವೈದ್ಯರಿಗೆ ಟ್ರೀಟ್ ಮಾಡಲು ಅನುಕೂಲವಾಗುತ್ತೆ ಅಂತಾರೆ ತಜ್ಙರು.

ಇದನ್ನೂ ಓದಿ: ಹುಡುಗಿ ಅಂತಾ ಹೇಳಿಕೊಂಡು ಚಾಟಿಂಗ್ : ವಿಷಯ ತಿಳಿದ ಯುವತಿ ಅಣ್ಣನಿಂದ ಯುವಕನಿಗೆ ಚಾಕು ಇರಿತ..!

ಒಟ್ಟಾರೆ ನಿಮಾನ್ಸ್ಗೆ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಬರುವವರ ಸಂಖ್ಯೆ ನಿಜಕ್ಕೂ‌ ಶಾಕಿಂಗ್ ಆಗಿದೆ.  ವಾಹನ‌ ಚಾಲನೆ ಸಂದರ್ಭದಲ್ಲಿ ಜಾಗರೂಕರಾಗಿರಿ. ಯಾರೂ ಸಹ ನಿಮ್ಮ‌ ನಿಮ್ಮ‌ ತಲೆಗಳನ್ನು ನಿರ್ಲಕ್ಷಿಸಬೇಡಿ ಅನ್ನೋದು ಜೀ ಕನ್ನಡ ನ್ಯೂಸ್ ಮನವಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News