ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ

ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಠಾಣೆಯ ಅಂದಿನ ಪೊಲೀಸ ಇನ್ಸಪೆಕ್ಟರ್ ವಿಜಯ ಬಿರಾದಾರ ಹಾಗೂ ಅವರ ತನಿಖಾತಂಡ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

Written by - Zee Kannada News Desk | Last Updated : Jan 5, 2024, 06:34 PM IST
  • ಇನ್ಸಪೆಕ್ಟರ್ ವಿಜಯ ಬಿರಾದಾರ ಹಾಗೂ ಅವರ ತನಿಖಾತಂಡ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ title=

ಧಾರವಾಡ : ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಗುಂಡಿ ಗ್ರಾಮದಲ್ಲಿ ಹೋಳಿಗಣಿ ಸರ್ಕಲ್ ಹತ್ತಿರ ದಿನಾಂಕ.6-9-2020 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ 02 ಜನ ಆರೋಪಿತರು ಕೂಡಿಕೊಂಡು ಈ ಹಿಂದೆ ಅವರ ಹಾಗೂ ಪಿರ್ಯಾದಿದಾರರ ನಡುವೆ ಹಿತ್ತಲದಲ್ಲಿತಿಪ್ಪೆ ಹಾಕಿದ್ದರ ವಿಷಯವಾಗಿ ಮೇಲಿಂದ ಮೇಲೆ ಜಗಳ ಮಾಡುತ್ತಾ ಬೈದಾಡುತ್ತಾ ಜೀವ ಬೆದರಿಕೆ ಹಾಕುತ್ತಾ ಬಂದು, ಅದೇ ವಿಷಯಕ್ಕೆ ವೈಮನಸ್ಸು ಮತ್ತು ದ್ವೇಷದಿಂದ ಪಿರ್ಯಾದಿದಾರನ ತಮ್ಮನಾದ ಜಗದೀಶ ಈತನು ಕಲಘಟಗಿಗೆ ಹೋಗಿ ಮರಳಿ ನಡೆದುಕೊಂಡು ಬರುತ್ತಿರುವುದನ್ನು ನೋಡಿ ಶಾರದಾ ಪಾಟೀಲ ಇವಳ ಪ್ರಚೋದನೆ ಯಿಂದ ಗಂಗಾಧರ ನೂಲ್ವಿ ಈತನು ತನ್ನ ಮೋಟಾರ ಸೈಕಲನ್ನು ಪಿರ್ಯಾದಿದಾರನ ತಮ್ಮನ ಮೈಮೇಲೆ ಏರಿಹೋಗಿ ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿದ್ದ ಹರಿತವಾದ ಚಾಕುದಿಂದ ಜಗದೀಶತಾಂಬೆ ಈತನ ಎಡ ಪಕ್ಕಡಿಗೆ ಹೊಡೆದು ಭಾರಿ ಪ್ರಮಾಣ ಗಾಯಗೊಳಿಸಿ, ಕೊಲೆ ಮಾಡಿದ್ದು, ಅದರಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಅಪರಾದ ಸಂಖ್ಯೆ 113/2020 ಕಲಂ 114,302,504,506,34 ಐಪಿಸಿ ನೇದ್ದರಲ್ಲಿ ಪ್ರಕರಣದಾಖಲಾಗಿತ್ತು.

ಇದನ್ನೂ ಓದಿ:"ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣ"

ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಠಾಣೆಯ ಅಂದಿನ ಪೊಲೀಸ ಇನ್ಸಪೆಕ್ಟರ್ ವಿಜಯ ಬಿರಾದಾರ ಹಾಗೂ ಅವರ ತನಿಖಾತಂಡ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ದಿನಾಂಕ. 04-01-2024 ರಂದು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದ ಕುರಿತು ಕೂಲಂಕುಶ ವಿಚಾರಣೆ ಕೈಕೊಂಡು ಆರೋಪಿತರುತಪ್ಪಿತಸ್ಥರೆಂದು ನಿರ್ದರಿಸಿ, 02 ಜ£ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ರೂ.1,25,000/- ದಂಡ ವಿಧಿಸಿ ದಿ.04-01-2024 ರಂದು ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ, ಸರ್ಕಾರಿ ಅಭಿಯೋಜಕರಾದ ಪ್ರಶಾಂತ್ ಎಸ್. ತೊರಗಲ್ ಮತ್ತು ಪ್ರಕಾಶ್ ಎಸ್ ಸುಂಕದ ಇವರು ಸರ್ಕಾರದ ಪರ ವಾದವನ್ನು ಮಂಡಿಸಿದ್ದು ಇರುತ್ತದೆ.

ಇದನ್ನೂ ಓದಿ: ಜನರೇ ನಮ್ಮ ಪಾಲಿನ ದೇವರು, ಅವರ ಸೇವೆಗೆ ನಾವು ಸದಾ ಬದ್ಧ

ಸದರ ಪ್ರಕರಣದಲ್ಲಿ ವಿಚಾರಣೆಗೆ ಸಹಾಯಕರಾಗಿ ದಾಖಲಾತಿ ಪೊರೈಸಿದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸಪೆಕ್ಟರ್ ಶ್ರೀಶೈಲ್.ಎಸ್. ಕೌಜಲಗಿ, ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ನಂದೀಶ.ಎಸ್.ವಡ್ರಾಳಿ ಸಿ.ಹೆಚ್.ಸಿ-620 ಮತ್ತುಕೋರ್ಟ ಸಿಬ್ಬಂದಿಯವರಾದ ಅನಿತಾ.ಜಿ.ಸಿಂಗ್ ಮಹೆಚ್‍ಸಿ-842 ರವರಿಗೆ ಹಾಗೂ ಸರ್ಕಾರದ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರಿಗೆ ಅಭಿನಂದನೆಯನ್ನು ಸಲ್ಲಿಸಿ, ಸನ್ಮಾಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News