ಆಧುನಿಕ ಭಗೀರಥ ಖ್ಯಾತಿಯ ಕೆರೆ ಕಾಮೇಗೌಡ ನಿಧನ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆರೆ ಕಾಮೇಗೌಡ ಅವರು  ಇಹ ಲೋಕ ತ್ಯಜಿಸಿದ್ದಾರೆ. 

Written by - Ranjitha R K | Last Updated : Oct 17, 2022, 08:47 AM IST
  • ಕೊನೆಯುಸಿರೆಳೆದ ಕೆರೆ ಕಾಮೇಗೌಡ ನಿಧನ
  • ನೀರಾವರಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದ ಕೆರೆ ಕಾಮೇಗೌಡ
  • ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಆಧುನಿಕ ಭಗೀರಥ ಖ್ಯಾತಿಯ ಕೆರೆ ಕಾಮೇಗೌಡ ನಿಧನ  title=
Kere KameGowda Death

ಮಂಡ್ಯ : ಆಧುನಿಕ ಕೆರೆ ನಿರ್ಮಾತೃ  ಎಂದೇ ಖ್ಯಾತಿ ಪಡೆದಿದ್ದ ಕೆರೆ ಕಾಮೇಗೌಡ  ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಿಧನರಾದ ಮಳವಳ್ಳಿಯ ಕಲ್ಮನೆ ಕಾಮೇಗೌಡ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  

ಕಲ್ಮನೆ ಕಾಮೇಗೌಡ ಆಧುನಿಕ ಭಾಗೀರಥ ಎಂದೇ ಖ್ಯಾತಿ ಪಡೆದಿದ್ದರು. ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ದಿಗಾಗಿ 15 ಕ್ಕೂ ಹೆಚ್ಚು ಕೆರೆ ನಿರ್ಮಿಸಿದ ಖ್ಯಾತಿ ಅವರದ್ದು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆರೆ ಕಾಮೇಗೌಡ ಅವರು  ಇಹ ಲೋಕ ತ್ಯಜಿಸಿದ್ದಾರೆ. 

ಇದನ್ನೂ ಓದಿ : “ನಮ್ಮಿಬ್ಬರನ್ನು ನೆನಪಿಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ಸಮಾಧಾನ ಆಗುವುದಿಲ್ಲ”

ಇಂದು ಸ್ವಗ್ರಾಮ ದಾಸನದೊಡ್ಡಿ ಗ್ರಾಮದಲ್ಲಿ ಕೆರೆ ಕಾಮೇಗೌಡ  ಅವರ ಅಂತ್ಯಕ್ರಿಯೆ ನಡೆಯಲಿದೆ. ಕಾಮೇಗೌಡ ಅವರು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಕಾಮೇಗೌಡರ ನಿಧನಕ್ಕೆ ಹಲವು ಗಣ್ಯರೂ ಸಂತಾಪ ಸೂಚಿಸಿದ್ದಾರೆ. 

ಕುಂದೂರು ಬೆಟ್ಟದಲ್ಲಿ ಸಾವಿರಾರು ಮರ ಗಿಡ ನೆಟ್ಟು ಬೆಳೆಸಿದ್ದ ಅದ್ಭುತ ಪರಿಸರ ಪ್ರೇಮಿಯಾಗಿದ್ದರು  ಕೆರೆ ಕಾಮೇಗೌಡ. ಕೆರೆ ಕಾಮೇಗೌಡ ಅವರು ರಾಜ್ಯೋತ್ಸವ ಪ್ರಶಸ್ತಿ,ಬಸವ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ಬೀರಾವರಿ ಕ್ಷೇತ್ರದಲ್ಲಿ ಅವರು ಮಾಡಿರುವ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿಯಿಂದಲೂ ಪ್ರಶಂಸೆ ಪಡೆದಿದ್ದರು . 

ಇದನ್ನೂ ಓದಿ : “ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಗಾಂಧಿ ಪರಿವಾರದ ಸಲಹೆ ಪಡೆಯುತ್ತೇನೆ”

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News