ರಾಜ್ಯದಲ್ಲಿ 5 ಗ್ಯಾರಂಟಿಗಳ ಅನುಷ್ಠಾನದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್..!

Congress Guarantee : ರಾಜ್ಯದಲ್ಲಿ ಐದು ಗ್ಯಾಟಂಟಿಗಳ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ಮದ್ಯಪ್ರಿಯರಿಗೆ ಶಾಕ್‌ ಕೊಡುವ ಸಾದ್ಯತೆಯಿದೆ. ಇದೀಗ ಮದ್ಯದ ದರದಲ್ಲಿ ಪ್ರತಿ ಬಾಟಲ್‌ಗೆ ರೂ 10ರಿಂದ 20ರವರೆಗೆ ಹೆಚ್ಚಿಸುವ ಶೀಫಾರಸ್ಸು ಸರ್ಕಾರದ ಮುಂದೆ ಇದೆ ಎಂದು ಹೇಳಲಾಗುತ್ತಿದೆ.   

Written by - Savita M B | Last Updated : Jun 7, 2023, 11:53 AM IST
  • ಗ್ಯಾಟಂಟಿಗಳ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ಮದ್ಯಪ್ರಿಯರಿಗೆ ಶಾಕ್‌
  • ಬಿಯರ್‌ ಸೇರಿ ಹಾರ್ಡ್‌ ಡ್ರಿಂಕ್ಸ್‌ ಬೆಲೆ ಹೆಚ್ಚಾಗಲಿದೆ.
  • ಕಿಂಗ್‌ ಫಿಶರ್‌ ದರ ರೂ160 ರಿಂದ 170 ಆಗಬಹುದು ಎನ್ನಲಾಗುತಿದ್ದು,
ರಾಜ್ಯದಲ್ಲಿ 5 ಗ್ಯಾರಂಟಿಗಳ ಅನುಷ್ಠಾನದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್..!  title=

Karnataka Government : ಬಿಯರ್‌ ಸೇರಿ ಹಾರ್ಡ್‌ ಡ್ರಿಂಕ್ಸ್‌ ಬೆಲೆ ಹೆಚ್ಚಾಗಲಿದೆ. ಕಿಂಗ್‌ ಫಿಶರ್‌ ದರ ರೂ160 ರಿಂದ 170  ಆಗಬಹುದು ಎನ್ನಲಾಗುತಿದ್ದು, ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ದೊರೆತಿಲ್ಲ. ರಾಜ್ಯದಲ್ಲಿ ಮೇ 12ರಂದು ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ವಿದ್ಯತ್‌ ದರ ಹೆಚ್ಚಳಮಾಡಿ ಶಾಕ್‌ ನೀಡಿದ್ದ ಕೆಇಆರ್‌ಸಿ ಇದೀಗ ಮತ್ತೆ ಪ್ರತಿ ಯೂನಿಟ್‌ಗೆ ವಿವಿಧ ಎಸ್ಕಾಂಗಳ ಗ್ರಾಹಕರಿಗೆ ಯುನಿಟ್‌ 41 ಪೈಸೆಯಿಂದ 50 ಪೈಸೆವರೆಗೂ ಶುಲ್ಕ ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ. 

ಪರಿಷ್ಕೃತ ಶುಲ್ಕವನ್ನು ಜುಲೈ ತಿಂಗಳಿನಿಂದ ಪಾಲಿಸುವುದಾಗಿ ತಿಳಿಸಲಾಗಿದ್ದು, ಗೃಹ ಜ್ಯೋತಿ ಯೋಜನಾ ಫಲಾನುಭವಿಗಳು ಈ ಹೊರೆಯಿಂದ ಪಾರಾಗಲಿದ್ದಾರೆ ಎಂದು ತಿಳಿಸಲಾಗಿದೆ. ವಾಣಿಜ್ಯ ಸಂಪರ್ಕ ಹೊಂದಿರುವವರು ಹಾಗೂ ಗೃಹ ಜ್ಯೋತಿ ಫಲಾನುಭವಿಗಳು ಅಲ್ಲದ ಗ್ರಾಹಕರಿಗೆ ಇದರಿಂದ ಇನ್ನು ಹೆಚ್ಚು ಹೊರೆಯಾಗಲಿದ್ದು, ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ದರವನ್ನು ಪಾವತಿಬೇಕು. 

ಇದನ್ನೂ ಓದಿ-ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಮುಂದಿನ 3 ದಿನ ಭಾರೀ ಮಳೆ

ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ದರ ಹೆಚ್ಚಳ ಅನುಷ್ಠಾನಗೊಳಿಸಿರಲಿಲ್ಲ, ಹೀಗಾಗಿ ಜನವರಿಯಿಂದ ಮಾ.31ರವರೆಗಿನ ಹೊಂದಾಣಿಕೆ ಶುಲ್ಕವನ್ನು ಜುಲೈನಿಂದ ಸೆಪ್ಟಂಬರ್‌ ವರೆಗೆ ಪ್ರತಿ ತಿಂಗಳು ಯುನಿಟ್‌ಗೆ 101 ಪೈಸೆಯೆಂತೆ ಹೆಚ್ಚುವರಿ ಶುಲ್ಕವಿಧಿಸಿ ಸಂಗ್ರಹಿಸಬೇಕಾಗಿತ್ತು ಇದು ಹೊರೆಯಾಗುವ ಸಾಧ್ಯತೆಗಳಿರುವುದರಿಂದ ಬೆಸ್ಕಾಂ ಜುಲೈನಿಂದ ಸೆಪ್ಟಂಬರ್‌ವರೆಗೆ ಹಾಘೂ ಅಕ್ಟೋಬರ್‌ನಿಂದ ಎರಡು ಮೂರುತಿಂಗಳಲ್ಲಿ ಅರ್ಧದಷ್ಟು ಶುಲ್ಕ ಪಾತಿಸಲು ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು, ಅದರಂತೆ ಕೆಇಆರ್ ಸಿಯು ಆದೇಶ ಹೊರಡಿಸಿದೆ. 

ಇದನ್ನೂ ಓದಿ-ಕರ್ನಾಟಕ ವಿಧಾನ ಪರಿಷತ್ತಿನ 3 ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ: ಚುನಾವಣಾ ಆಯೋಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News