'ಗೋವಾ ಸಿಎಂ ಆರೋಪ ಸಾಬೀತಾದ್ರೆ ನಾನು ರಾಜೀನಾಮೆ ಕೊಡುತ್ತೇನೆ'

ಆರೋಪ ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ- ಸಚಿವ ರಮೇಶ ಜಾರಕಿಹೊಳ

Last Updated : Nov 30, 2020, 03:15 PM IST
  • ಮಹದಾಯಿ ವಿಚಾರದಲ್ಲಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಗೋವಾ ಸಿಎಂ ಅವರಿಗೆ ಆಹ್ವಾನ
  • ಆರೋಪ ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ- ಸಚಿವ ರಮೇಶ ಜಾರಕಿಹೊಳಿ
  • ಗ್ರಾ.ಪಂ. ಚುನಾವಣೆ ‌ಘೋಷಣೆಯಾಗಿರುವುದರಿಂದ ನಮ್ಮ ಇಲಾಖೆಯ ಸಭೆಯನ್ನು ಮುಂದೂಡಲಾಗಿದೆ
'ಗೋವಾ ಸಿಎಂ ಆರೋಪ ಸಾಬೀತಾದ್ರೆ ನಾನು ರಾಜೀನಾಮೆ ಕೊಡುತ್ತೇನೆ'

ಬೆಳಗಾವಿ: ಮಹದಾಯಿ ವಿಚಾರದಲ್ಲಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಗೋವಾ ಸಿಎಂ ಅವರಿಗೆ ಆಹ್ವಾನ ಕೊಡುತ್ತೇನೆ. ಅವರ ಆರೋಪ ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾ(Goa) ಸಿಎಂಗೆ ಆಹ್ವಾನ ಕೊಡುತ್ತೇನೆ. ನಾವು ಮಹದಾಯಿ ಯೋಜನೆಯ ಒಂದು ಗೋಡೆ ಮುಟ್ಟಿದ್ದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದರು.

ಮುಸಲ್ಮಾನರಿಗೆ ಪಕ್ಷದ ಟಿಕೆಟ್ ನೀಡಲ್ಲ: ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಗ್ರಾ.ಪಂ. ಚುನಾವಣೆ ‌ಘೋಷಣೆಯಾಗಿರುವುದರಿಂದ ನಮ್ಮ ಇಲಾಖೆಯ ಸಭೆಯನ್ನು ಮುಂದೂಡಲಾಗಿದೆ. ಅಧಿಕಾರಿಗಳಿಂದ ಕೊರೊನಾ ಸೋಂಕಿನ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದರು.

ಗ್ರಾ. ಪಂ. ಚುನಾವಣೆ: ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ!

More Stories

Trending News