ಗ್ರಾ. ಪಂ. ಚುನಾವಣೆ: ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ!

ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಸದ್ಯ ಡಿಸೆಂಬರ್‌ ಅಂತ್ಯದ ವರೆಗೆ ಸಂಪುಟ ವಿಸ್ತರಣೆ ಆಗುವ ಯಾವುದೇ ಸಾಧ್ಯತೆ ಇಲ್ಲ

Last Updated : Nov 30, 2020, 02:07 PM IST
  • ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಸದ್ಯ ಡಿಸೆಂಬರ್‌ ಅಂತ್ಯದ ವರೆಗೆ ಸಂಪುಟ ವಿಸ್ತರಣೆ ಆಗುವ ಯಾವುದೇ ಸಾಧ್ಯತೆ ಇಲ್ಲ
  • ಸಂಪುಟ ವಿಸ್ತರಣೆ ನಡೆಸಲು ನೀತಿ ಸಂಹಿತೆ ಅಡ್ಡಿ
  • ಸದ್ಯ ಖಾಲಿ ಇರುವ ಏಳು ಸ್ಥಾನಗಳಿಗೆ ವಲಸಿಗರು ಹಾಗೂ ಮೂಲನಿವಾಸಿಗಳ ನಡುವೆ ಪೈಪೋಟಿ
ಗ್ರಾ. ಪಂ. ಚುನಾವಣೆ: ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ!

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು ಸಂಪುಟ ವಿಸ್ತರಣೆ ಮತ್ತೆ ಮುಂದೂಡಲ್ಪಟ್ಟಿದೆ. ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಸದ್ಯ ಡಿಸೆಂಬರ್‌ ಅಂತ್ಯದ ವರೆಗೆ ಸಂಪುಟ ವಿಸ್ತರಣೆ ಆಗುವ ಯಾವುದೇ ಸಾಧ್ಯತೆಗಳು ಇಲ್ಲ.

ಡಿಸೆಂಬರ್‌ 22 ಹಾಗೂ 27 ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ(Grama Ganchayat Election), ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್‌ 30 ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದಾಗಿ ಸಂಪುಟ ವಿಸ್ತರಣೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಲಿದೆ. ಈ ಕಾರಣ ನೀಡಿ ಸದ್ಯ ವಿಸ್ತರಣೆ ಗೊಂದಲವನ್ನು ಒಂದು ತಿಂಗಳು ಮುಂದೂಡುವ ಸಾಧ್ಯತೆ ಇದೆ.

'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ'

ಸದ್ಯ ಖಾಲಿ ಇರುವ ಏಳು ಸ್ಥಾನಗಳಿಗೆ ವಲಸಿಗರು ಹಾಗೂ ಮೂಲನಿವಾಸಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ದೆಹಲಿ ಅಂಗಳದಲ್ಲಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ನಡೆಸಬೇಕು ಎಂದು ಬಿಎಸ್‌ ಯಡಿಯೂರಪ್ಪ ಯೋಜನೆ ಹಾಕಿಕೊಂಡಿದ್ದರು.

ಡಿ.ಕೆ.ಶಿವಕುಮಾರ್ ಗೆ 'ಟಾಂಗ್' ನೀಡಿದ ಬಿ.ವೈ. ವಿಜಯೇಂದ್ರ!

ಇದರಂತೆ ದೆಹಲಿಗೆ ಹೋಗಿ ಬಂದು ಪ್ರಯೋಜನ ಆಗಿಲ್ಲವಾದರೂ ತೆರೆಮರೆಯಲ್ಲಿ ಹೈಕಮಾಂಡ್‌ ಜೊತೆಗೆ ಮಾತುಕತೆಯನ್ನು ಬಿಎಸ್‌ವೈ ಮುಂದುವರಿಸಿದ್ದರು. ಆದರೆ ಇದೀಗ ಗ್ರಾಮಪಂಚಾಯಿತಿ ಚುನಾವಣೆ ಘೋಷಣೆ ಆಗಿದೆ. ಡಿಸೆಂಬರ್‌ 30 ರ ವರೆಗೆ ಚುನಾವಣೆ ಪ್ರಕ್ರಿಯೆಗಳು ನಡೆಯಲಿವೆ. ಪರಿಣಾಮ ಸಂಪುಟ ವಿಸ್ತರಣೆ ಇನ್ನೇನಿದ್ದರೂ ಜನವರಿ ತಿಂಗಳಲ್ಲಿ ನಡೆಯಲು ಸಾಧ್ಯ.

ಗ್ರಾಮಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್

More Stories

Trending News