ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ 

ಯಾಲಕ್ಕಿ ಶೆಟ್ಟರ ಕಾಲನಿಯ ತೇಜಸ್ವಿನಿ ಹುದ್ದಾರ ಅನ್ನುವ ವಿದ್ಯಾರ್ಥಿನಿ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಕಂಪನಿ ಮೂಲಕ ಪೇ ಲೇಟರ್ ವ್ಯವಸ್ಥೆ ಅಡಿ ರೂ.1,999 ಕಿಮ್ಮತ್ತಿನ ಟ್ಯಾಬ್ ಪೆನ್ ಖರೀದಿಸಿದ್ದರು. ಪಾರ್ಸಲ್ ಬಂದು ಅದನ್ನು ತೆರೆದು ನೋಡಿದಾಗ ಅದರೊಳಗೆ ಉಪಯೋಗಿಸಿದ ಹಳೆಯ ಟ್ಯಾಬ್ ಪೆನ್‍ಇತ್ತು.

Written by - Manjunath N | Last Updated : Jun 9, 2023, 10:42 PM IST
  • ತಕ್ಷಣ ಆ ಸಂಗತಿಯನ್ನು ದೂರುದಾರರು ಅಮೆಜಾನ್ ಕಸ್ಟಮರ್ ಕೇರಗೆ ತಿಳಿಸಿದರು.
  • ಎದುರುದಾರರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೂರುದಾರರು ಬೇರೊಂದು ಟ್ಯಾಬ್ ಪೆನ್ ಖರೀದಿಸಿ ತಮ್ಮ ವ್ಯಾಸಂಗ ಮುಂದುವರಿಸಿದರು.
ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ  title=
ಸಾಂದರ್ಭಿಕ ಚಿತ್ರ

ಧಾರವಾಡ: ಯಾಲಕ್ಕಿ ಶೆಟ್ಟರ ಕಾಲನಿಯ ತೇಜಸ್ವಿನಿ ಹುದ್ದಾರ ಅನ್ನುವ ವಿದ್ಯಾರ್ಥಿನಿ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಕಂಪನಿ ಮೂಲಕ ಪೇ ಲೇಟರ್ ವ್ಯವಸ್ಥೆ ಅಡಿ ರೂ.1,999 ಕಿಮ್ಮತ್ತಿನ ಟ್ಯಾಬ್ ಪೆನ್ ಖರೀದಿಸಿದ್ದರು. ಪಾರ್ಸಲ್ ಬಂದು ಅದನ್ನು ತೆರೆದು ನೋಡಿದಾಗ ಅದರೊಳಗೆ ಉಪಯೋಗಿಸಿದ ಹಳೆಯ ಟ್ಯಾಬ್ ಪೆನ್‍ಇತ್ತು.

ತಕ್ಷಣ ಆ ಸಂಗತಿಯನ್ನು ದೂರುದಾರರು ಅಮೆಜಾನ್ ಕಸ್ಟಮರ್ ಕೇರಗೆ ತಿಳಿಸಿದರು. ಎದುರುದಾರರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೂರುದಾರರು ಬೇರೊಂದು ಟ್ಯಾಬ್ ಪೆನ್ ಖರೀದಿಸಿ ತಮ್ಮ ವ್ಯಾಸಂಗ ಮುಂದುವರಿಸಿದರು. ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಬೆಂಗಳೂರಿನ ಅಮೆಜಾನ್ ಹಾಗೂ ಅಪಾರಿಯೋರಿಟೇಲ್ ಪ್ರೈ.ಲಿ. ಅವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ- Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿಯ ಸಂಕೇತ, ರಾಜೀನಾಮೆಗೆ ಮುಂದಾದ ಸಿಎಂ ಪುತ್ರ ಶ್ರೀಕಾಂತ್ ಸಿಂಧೆ!

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಸದಸ್ಯರು, ಹಣಕೊಟ್ಟು ಹೊಸ ಸರಕನ್ನು ಖರೀದಿಸುವಾಗ ಮಾರುವವರು ಗ್ರಾಹಕರು ಕೇಳುವ ಒಳ್ಳೆ ಗುಣ ಮಟ್ಟದ ಹೊಸ ಸರಕನ್ನು ಕೊಡುವುದು ಮಾರಾಟಗಾರರ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಹೊಸ ಸರಕನ್ನು ಸರಬರಾಜು ಮಾಡುವ ಬದಲು ಉಪಯೋಗಿಸಿದ ಮತ್ತು ಹಳೆಯದಾದ ದೋಷಯುಕ್ತ ಸರಕನ್ನು ದೂರುದಾರಳಾದ ವಿದ್ಯಾರ್ಥಿನಿಗೆ ಸರಬರಾಜು ಮಾಡಿರುವುದರಿಂದ ಅವರ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಮತ್ತು ಆ ತಪ್ಪಿಗೆ ಇಬ್ಬರು ಎದುರುದಾರರು ಹೊಣೆಗಾರರಾಗುತ್ತಾರೆ ಅಂತಾ ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ- Amarnath Yatra: ಅಮರನಾಥ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಮಿತ್ ಶಾ ಮಹತ್ವದ ಸಭೆ, ಐಬಿ ಮುಖ್ಯಸ್ಥರು ಉಪಸ್ಥಿತ

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರಳಿಗೆ  ಟ್ಯಾಬ್ ಪೆನ್ನಿನ ಹಣ ರೂ.1,999 ಗಳನ್ನು ಇಬ್ಬರು ಎದುರು ದಾರರು ಕೊಡಬೇಕು ಮತ್ತು ದೋಷಯುಕ್ತ ಸರಕನ್ನು ಕೊಟ್ಟಿರುವುದರಿಂದ ವಿದ್ಯಾರ್ಥಿನಿಯಾದ ದೂರುದಾರಳಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎರಡು ಕಂಪನಿಗಳಿಗೆ ಆಯೋಗ ಆದೇಶ ನೀಡಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News