ಬೆಂಗಳೂರು: ಶನಿವಾರ ನಿಧನರಾದ ರೆಬೆಲ್ ಸ್ಟಾರ್ ಅಂಬರೀಷ್ ಅವರ ಅಂತಿಮ ಯಾತ್ರೆ ಇಂದು ನಡೆಯಲಿದೆ. ಕಂಠೀರವ ಕ್ರೀಡಾಂಗಣಲ್ಲಿ ಅಂತಿಮ ಯಾತ್ರೆ ಆರಂಭವಾಗಲಿದ್ದು, ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆಯಲ್ಲಿ ಪಾರ್ಥೀವ ಶರೀರ ಸಾಗಲಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ವಿಶೇಷವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅದರ ವಿವರ ಇಂತಿದೆ.
- 11,000 ಕಾನೂನು ಸುವ್ಯವಸ್ಥೆ ಪೊಲೀಸರು ಹಾಗೂ ಅಧಿಕಾರಿಗಳು
- 4,000 ಸಂಚಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳು
- 30 ಕೆ ಎಸ್ ಆರ್ ಪಿ ತುಕಡಿಗಳು
- 34 ಸಿ ಎ ಆರ್ ತುಕಡಿಗಳು
- 3 ಆರ್ ಎ ಎಫ್ ತುಕಡಿಗಳು
- 5 ಆರ್ ಐ ವಿ
- 15 ಡಿಸಿಪಿ
- 4 ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸಹ ನೇಮಿಸಲಾಗಿದೆ.
ಪಾರ್ಥಿವ ಶರೀರ ಸಾಗುವ ಮಾರ್ಗದಲ್ಲಿನ ರಸ್ತೆಗಳನ್ನು ವಿಭಾಗಗಳಾಗಿ ವಿಂಗಡಿಸಿದ್ದು ಪ್ರತಿ ವಿಭಾಗದ ಉಸ್ತುವಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ. ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ವಾಹನ ದಟ್ಟಣೆಯಾಗುವ ಸಂಭವವಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪೋಲೀಸರು ಮನವಿ ಮಾಡಿದ್ದಾರೆ.
ಅಂತಿಮ ಯಾತ್ರೆ ಸಾಗುವ ಮಾರ್ಗ -
- ಹಡ್ಸನ್ ರಸ್ತೆ
- ಹಲಸೂರು ಗೇಟ್ ಪೋಲೀಸ್ ಠಾಣೆ
- ಕೆಜಿ ರಸ್ತೆ
- ಮೈಸೂರು ಬ್ಯಾಂಕ್ ವೃತ್ತ
- ಸಿಐಡಿ ಜಂಕ್ಷನ್
- ಬಸವೇಶ್ವರ ವೃತ್ತ
- ವಿಂಡ್ಸರ್ ಮ್ಯಾನರ್
- ಕಾವೇರಿ ಜಂಕ್ಷನ್
- ಸ್ಯಾಂಕಿ ರಸ್ತೆ
- ಮಾರಮ್ಮ ವೃತ್ತ
- ಯಶವಂತಪುರ ಮೇಲ್ಸೇತುವೆ
- ಆರ್ ಎಂಸಿ ಯಾರ್ಡ್ ಪೋಲೀಸ್ ಠಾಣೆ
- ಗೊರಗುಂಟೇಪಾಳ್ಯ ಜಂಕ್ಷನ್
- ಕಂಠೀರವ ಸ್ಟುಡಿಯೋ