ಕವಿ, ನಾಟಕಕಾರ ಎಚ್.ಎಸ್ ಶಿವಪ್ರಕಾಶ್ ಅವರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ

  ಡಾ ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ 2021 ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗೂ ನಾಟಕಕಾರ ಎಚ್.ಎಸ್ ಶಿವಪ್ರಕಾಶ್ ಅವರನ್ನು ಆಯ್ಕೆಮಾಡಲಾಗಿದೆ.

Last Updated : Jan 19, 2021, 11:36 PM IST
  • ಈ ಪ್ರಶಸ್ತಿಯನ್ನು ವರಕವಿ ದ.ರಾ. ಬೇಂದ್ರೆ ಅವರ 125ನೇ ಜಯಂತಿ ಸಂದರ್ಭದಲ್ಲಿ ಧಾರವಾಡದ ಬೇಂದ್ರೆ ಭವನದಲ್ಲಿ ಪ್ರಧಾನ ಮಾಡಲಾಗುವುದು.
  • ಪ್ರಶಸ್ತಿ ಮೊತ್ತ 1 ಲಕ್ಷ ರೂಪಾಯಿಗಳ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
  • ಡಾ ಗುರುಪಾದ ಮರೆಗುದ್ದಿ ಹಾಗೂ ಶಿವಾನಂದ ಕೆಳಗಿನಮನಿ,ಡಾ ತಾರಿಣಿ ಶುಭದಾಯಿನಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸಭೆಯಲ್ಲಿ ಕವಿ ಎಚ್.ಎಸ್ ಶಿವಪ್ರಕಾಶ್ ಅವರ ಹೆಸರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕವಿ, ನಾಟಕಕಾರ ಎಚ್.ಎಸ್ ಶಿವಪ್ರಕಾಶ್ ಅವರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ title=
Photo Courtesy: Facebook

ಬೆಂಗಳೂರು:  ಡಾ ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ 2021 ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗೂ ನಾಟಕಕಾರ ಎಚ್.ಎಸ್ ಶಿವಪ್ರಕಾಶ್ ಅವರನ್ನು ಆಯ್ಕೆಮಾಡಲಾಗಿದೆ.

ಈ ಪ್ರಶಸ್ತಿಯನ್ನು ವರಕವಿ ದ.ರಾ. ಬೇಂದ್ರೆ ಅವರ 125ನೇ ಜಯಂತಿ ಸಂದರ್ಭದಲ್ಲಿ ಧಾರವಾಡದ ಬೇಂದ್ರೆ ಭವನದಲ್ಲಿ ಪ್ರಧಾನ ಮಾಡಲಾಗುವುದು.ಪ್ರಶಸ್ತಿ ಮೊತ್ತ 1 ಲಕ್ಷ ರೂಪಾಯಿಗಳ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.ಡಾ ಗುರುಪಾದ ಮರೆಗುದ್ದಿ ಹಾಗೂ ಶಿವಾನಂದ ಕೆಳಗಿನಮನಿ,ಡಾ ತಾರಿಣಿ ಶುಭದಾಯಿನಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸಭೆಯಲ್ಲಿ ಕವಿ ಎಚ್.ಎಸ್ ಶಿವಪ್ರಕಾಶ್ ಅವರ ಹೆಸರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ವರ್ಷದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನನಗೆ ನೀಡಲಾಗಿದೆ. ಇದಕ್ಕಾಗಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನವರಿಗೆ...

Posted by HS Shiva Prakash on Tuesday, 19 January 2021

ಈಗ ಈ ಪ್ರಶಸ್ತಿಗೆ ಸಂತಸ ವ್ಯಕ್ತಪಡಿಸಿರುವ ಎಚ್.ಎಸ್ ಶಿವಪ್ರಕಾಶ್ (HS Shiva Prakash) ಅವರು "ಈ ವರ್ಷದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನನಗೆ ನೀಡಲಾಗಿದೆ.ಇದಕ್ಕಾಗಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನವರಿಗೆ ನಾನು ಆಭಾರಿ. ನನ್ನ ಯುವಾವಸ್ಥೆಯಲ್ಲಿ ಕಾವ್ಯಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.ಅವರ ಹೆಸರಿನ ಈ ಪ್ರಶಸ್ತಿಯನ್ನು ವರಕವಿ ಬೇಂದ್ರೆಯವರ ಆಶೀರ್ವಾದವೆಂದು ತಿಳಿದು ಕೃತಜ್ಞತಾಪೂರ್ವಕ ಸ್ವೀಕರಿಸುತ್ತಿದ್ದೇನೆ' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News