ನ್ಯಾಯಾಂಗ ತರಬೇತಿಗಾಗಿ ಕಾನೂನು ಪದವೀಧರರಿಗೆ ಅರ್ಜಿ ಆಹ್ವಾನ

2020-21ನೇ ಸಾಲಿಗಾಗಿ ಬೀದರ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ಮತ್ತು 2 ವರ್ಷ ನ್ಯಾಯಾಂಗ ತರಬೇತಿಗಾಗಿ ಸದರಿ ಯೋಜನೆಯ ಸರಳೀಕರಣ ಹಾಗೂ ಶಿಷ್ಯವೇತನ ತ್ವರಿತಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯ ತಂತ್ರಾAಶವನ್ನು ಸಿದ್ಧಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ.

Last Updated : Sep 25, 2020, 10:40 PM IST
ನ್ಯಾಯಾಂಗ ತರಬೇತಿಗಾಗಿ ಕಾನೂನು ಪದವೀಧರರಿಗೆ ಅರ್ಜಿ ಆಹ್ವಾನ title=
ಸಾಂದರ್ಭಿಕ ಚಿತ್ರ

ಬೆಂಗಳೂರು: 2020-21ನೇ ಸಾಲಿಗಾಗಿ ಬೀದರ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ಮತ್ತು 2 ವರ್ಷ ನ್ಯಾಯಾಂಗ ತರಬೇತಿಗಾಗಿ ಸದರಿ ಯೋಜನೆಯ ಸರಳೀಕರಣ ಹಾಗೂ ಶಿಷ್ಯವೇತನ ತ್ವರಿತಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯ ತಂತ್ರಾAಶವನ್ನು ಸಿದ್ಧಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ.

ಈ ತರಬೇತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೈಬ್‌ಸ್ಶೆಟ್ www.sw.kar.nic.in ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕು. ಪ.ಜಾತಿಯ ಒಟ್ಟು ಅಭ್ಯರ್ಥಿಗಳು 14 ಇದರಲ್ಲಿ ಶೇ.33 ಪ್ರತಿಶತ ಮಹಿಳೆಯುರಿಗೆ ಮೀಸಲಿರಿಸಿದೆ. ಅಭ್ಯರ್ಥಿಯು ಎಲ್.ಎಲ್.ಬಿ.ಯಲ್ಲಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗಳ ವಯಸ್ಸು 40 ವರ್ಷಗಳಿಗೆ ಮಿರಿರಬಾರದು. ಅಭ್ಯರ್ಥಿಯ ಆದಾಯ ವಾರ್ಷಿಕ ರೂ.2,50,000/- ಸಾವಿರಕ್ಕಿಂತ ಕಡಿಮೆ ಇರತಕ್ಕದ್ದು., ತರಬೇತಿಯ ಅವಧಿಯಲ್ಲಿ ತಿಂಗಳಿಗೆ ರೂ.10,000/- ತರಬೇತಿ ಭತ್ಯೆ ನೀಡುವುದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಎರಡು(2) ವರ್ಷಗಳವರೆಗೆ ತರಬೇತಿ ನೀಡಲಾಗುವುದು. 

ಅಭ್ಯರ್ಥಿಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು., ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿಮಾಡಿ, ದ್ವಿಪ್ರತಿಯಲ್ಲಿ ಕೊನೆಯ ದಿನಾಂಕದೊಳಗೆ ಎಸ್.ಎಸ್.ಎಲ್.ಸಿ ಹಾಗು ಮೇಲ್ಪಟ್ಟ ಎಲ್ಲಾ ಪರೀಕ್ಷೆಗಳ ಅಂಕಪಟ್ಟಿ , ಜಾತಿ ಪ್ರಮಾಣ ಪತ್ರ, ಬಾರ ಅಸೊಸಿಯೇಷನ್ ನೊಂದಣಿ ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸಬೇಕು., ಅರ್ಜಿ ಸಲ್ಲಿಸುವ ದಿನಾಂಕಕ್ಕೆ 2 ವರ್ಷಗಳ ಒಳಗೆ ಕಾನೂನು ಪದವಿಯನ್ನು ಪಾಸ ಮಾಡಬೇಕು. ಅಂತಹ ಅಭ್ಯರ್ಥಿಗಳು ಮಾತ್ರ ಅರ್ಹರಿರುತ್ತಾರೆ. (2016-17 & 2017-18), ಅಭ್ಯರ್ಥಿಗಳು ಸರ್ಕಾರದಿಂದ ರೂಪಿಸಲಾದ ನಿಯಮಗಳಿಗೆ ಬದ್ಧನಾಗಿರಬೇಕು ತರಬೇತಿಯನ್ನು ಮಧ್ಯದಲ್ಲಿ ಬಿಡದಿರುವ ಬಗ್ಗೆ 20 ರೂಪಾಯಿ ಛಾಪಾ ಪತ್ರದ ಮೇಲೆ ಮುಚ್ಚಳಿಕೆ ಬರೆದಕೊಡಬೇಕು.

ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಅಭ್ಯರ್ಥಿಗಳನ್ನು ಸಂರ್ದಶನಕ್ಕೆ ಕರೆದು ಆಯ್ಕೆ ಮಾಡಿ 2 ವರ್ಷ ಅವಧಿಗೆ ತರಬೇತಿ ಸರ್ಕಾರಿ ಅಭಿಯೋಜಕರಿಂದ ತರಬೇತಿ ನೀಡಲಾಗುವುದು., ತರಬೇತಿಗೆ ಆಯ್ಕೆ ಆಗಿರುವ ಅಭ್ಯರ್ಥಿಯು ಯಾವುದೇ ಸರ್ಕಾರಿ ಅಥವಾ ಖಾಸಗಿ ಸೇವೆಗಳಲ್ಲಿ ಇರಬಾರದು. ನಿಯೋಜಿತ ಅರ್ಜಿ ಫಾರಂ ದಿನಾಂಕ: 01-07-2020ರಿಂದ ದಿನಾಂಕ 30-11-2020ರವರೆಗೆ ವೈಬ್‌ಸ್ಶೆಟ್ www.sw.kar.nic.in ಗೆ ಭೇಟಿ ನೀಡಿ, ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ ಸಂಜೆ 5.30ರೊಳಗೆ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News