ಅಪ್ಪು 2ನೇ ಪುಣ್ಯಸ್ಮರಣೆ: ಅಪ್ಪು ಸ್ಮಾರಕದ ಮುಂದೆ ಅವರಿಗಿಷ್ಟವಾದ ತಿನಿಸು ಇಟ್ಟ ಮುದ್ದು ಮಕ್ಕಳು..!

Puneeth Rajkumar: ಭಾನುವಾರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎರಡನೇ ವರ್ಷದ ಪುಣ್ಯತಿಥಿಯಂದು ರಾಜ್ಯದ ಹಲವು ಭಾಗಗಳಿಂದ ಅಭಿಮಾನಿಗಳು ಪುನೀತ್ ಸ್ಮಾರಕದ ಬಳಿ ಜಮಾಯಿಸಿದ್ದರು. ರಾಜ್‌ಕುಮಾರ್ ಕುಟುಂಬ ಸದಸ್ಯರು ಸಹ  ಸ್ಮಾರಕ ಮುಂದೆ ಅಪ್ಪುಗೆ ಇಷ್ಟವಾದ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸದ್ದಾರೆ.

Written by - Zee Kannada News Desk | Last Updated : Oct 29, 2023, 05:59 PM IST
  • ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿಯಲ್ಲಿ ಪುಣ್ಯತಿಥಿ ನಡೆದಿದೆ
  • ಅಪ್ಪುಗೆ ಇಷ್ಟವಾದ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಸಲ್ಲಿಸಿದ ಮಕ್ಕಳು
  • ಎಲ್ಲಾ ವಯಸ್ಸಿನವರು ಸರದಿ ಸಾಲಿನಲ್ಲಿ ನಿಂತು ಅಪ್ಪು ಸಮಾಧಿಯನ್ನು ನೋಡಿ ಕಣ್ಣೀರಿಟ್ಟು ಗೌರವ ಸಲ್ಲಿಸಿದ್ದಾರೆ.
ಅಪ್ಪು 2ನೇ ಪುಣ್ಯಸ್ಮರಣೆ: ಅಪ್ಪು ಸ್ಮಾರಕದ ಮುಂದೆ  ಅವರಿಗಿಷ್ಟವಾದ ತಿನಿಸು ಇಟ್ಟ ಮುದ್ದು ಮಕ್ಕಳು..! title=

Puneeth Rajkumar 2nd Death Anniversary: ಕರುನಾಡ ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅಗಲಿ ಇಂದಿಗೆ ಎರಡು ವರ್ಷ ಕಳೆದಿದ್ದು, ಇನ್ನು ಕನ್ನಡನಾಡು ದುಖಃದಲ್ಲಿಯೇ ಇದೆ.ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿಯಲ್ಲಿ ಪುಣ್ಯತಿಥಿ ನಡೆದಿದ್ದು, ರಾಜ್ಯದ ಹಲವು ಭಾಗಗಳಿಂದ ಅಭಿಮಾನಿಗಳು ಪುನೀತ್ ಸ್ಮಾರಕದ ಬಳಿ ಆಗಮಿಸಿದ್ದು, ರಾಜ್‌ಕುಮಾರ್ ಕುಟುಂಬ ಸದಸ್ಯರು ಕೂಡ ಮನೆ ಮಗನಿಗೆ ನಮನ ಸಲ್ಲಿಸುತ್ತಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್ ಅವರ ಸಮಾಧಿ ಮಾದರಿಯಲ್ಲೇ ಅಪ್ಪು ಸಮಾಧಿಯನ್ನು ಕಟ್ಟಲಾಗಿದೆ. ಬಿಳಿ ಮಾರ್ಬಲ್ ಬಳಕೆ ಮಾಡಿ ಅಪ್ಪು ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅಪ್ಪು ಸಮಾಧಿ ಬಳಿ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನಡೆಸಿದ್ದು, ಅಪ್ಪುಗೆ ಇಷ್ಟವಾದ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು, ರಾಘವೇಂದ್ರ ರಾಜ್‌ಕುಮಾರ್, ಯುವರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಕ್ಕಳು ಪೂಜೆ ಮಾಡಿದ್ದಾರೆ.

ಇದನ್ನು ಓದಿ: ಪುನೀತ್‌ ರಾಜ್‌ಕುಮಾರ್‌ 2ನೇ ವರ್ಷದ ಪುಣ್ಯಸ್ಮರಣೇ: ಸಹೋದರನ ನೆನೆದು ಮಾತನಾಡಿದ ಶಿವಣ್ಣ

ಇವತ್ತು ಕಂಠೀರವ ಸ್ಟೂಡಿಯೋದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯಸ್ಸಿನವರು ಸರದಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಟನ ಸಮಾಧಿಯನ್ನು ನೋಡಿ ಕಣ್ಣೀರು ಸುರಿಸುತ್ತಾ ಗೌರವಿಸಿದ್ದಾರೆ. ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳ ದಂಡು ನೆರೆದಿದ್ದು, ರಾಜ್ ಕುಮಾರ್ ಕುಟುಂಬದವರು ದೂರದ ಊರುಗಳಿಂದ ಬೆಳಗ್ಗೆಯೇ ಬಂದಿರುವ ಅಭಿಮಾನಿಗಳಿಗಾಗಿ ಹಲವು ವ್ಯವಸ್ಥೆ ಮಾಡಿದರು.ಇಂದು ಸ್ಮಾರಕಕ್ಕೆ ಬಂದ ಅಭಿಮಾನಿಗಳಿಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಯುವರಾಜ್ ಕುಮಾರ್  ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಅನ್ನದಾನ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಕೂಡ ನಡೆದಿದೆ. 

ಕಂಠೀರವ ಸ್ಟೋಡಿಯೋದಲ್ಲಿ ಮಾತ್ರವಲ್ಲದೆ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ಅಂಗವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಭಿಮಾನಿಗಳಿಗೆ ಉಚಿತ ಬಿರಿಯಾನಿ ವಿತರಣೆ ಮಾಡಿದ್ದಾರೆ. ಕೋಡಂಬಳ್ಳಿ ಗ್ರಾಮದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಬಿರಿಯಾನಿ ವಿತರಣೆ ನಡೆದಿದೆ. ಬಲ್ಲಾಪಟ್ಟಣ ಗ್ರಾಮದ ವಿವೇಕ್ ಎಂಬಾತ ಅಪ್ಪು ಅಪ್ಪಟ ಅಭಿಮಾನಿ,  ಉಚಿತವಾಗಿ ವಿತರಣೆ ಮಾಡಲು 250 KG ಚಿಕನ್ ಬಿರಿಯಾನಿ ತಯಾರಿಸಿ ವಿತರಣೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ರಾಜ್ಯದ ಹಲವು ಭಾಗಗಳಲ್ಲಿ ಇಂದು ಅನ್ನದಾನ, ರಕ್ತದಾನ ಮತ್ತು ಸಮಾಜಮುಖಿ ಕೆಲಸಗಳು ನಡೆದಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News