ಬಿಜೆಪಿ ಆಡಳಿತದಲ್ಲಿ ಬೆಂಗಳೂರು ‘ಡ್ರಗ್ಸ್ ಸಿಟಿ’ಆಗುತ್ತಿದೆ: ಕಾಂಗ್ರೆಸ್ ಆರೋಪ

ಇತ್ತೀಚೆಗೆ ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳಿಂದ ವಶಪಡಿಸಿಕೊಂಡಿರುವ ಡ್ರಗ್ಸ್ ಬಗ್ಗೆ ಉಲ್ಲೇಖಿಸಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಡ್ರಗ್ಸ್ ಅಡ್ಡವಾಗುತ್ತಿದೆ’ ಅಂತಾ ಕುಟುಕಿದೆ. ‘

Written by - Zee Kannada News Desk | Last Updated : Oct 25, 2021, 05:08 PM IST
  • ಕಾಂಗ್ರೆಸ್ ಅವಧಿಯಲ್ಲಿ ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಬಿಜೆಪಿ ಆಡಳಿತದಲ್ಲಿ ಡ್ರಗ್ಸ್ ಸಿಟಿಯಾಗುತ್ತಿದೆ
  • ಬಿಜೆಪಿಗೂ ಡ್ರಗ್ಸ್ ಪೆಡ್ಲರ್‌ಗಳಿಗೂ ಇರುವ ನಂಟೇ ಈ ಹಂತಕ್ಕೆ ಬರಲು ಕಾರಣವೆಂದು ಕಾಂಗ್ರೆಸ್ ಆರೋಪ
  • ಮಾದಕ ದ್ರವ್ಯ ಜಾಲ‌ ಬಲವಾಗಿ ಬೇರು ಬಿಟ್ಟಾಗ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕುಳಿತಿತ್ತು ಅಂತಾ ಬಿಜೆಪಿ ತಿರುಗೇಟು
ಬಿಜೆಪಿ ಆಡಳಿತದಲ್ಲಿ ಬೆಂಗಳೂರು ‘ಡ್ರಗ್ಸ್ ಸಿಟಿ’ಆಗುತ್ತಿದೆ: ಕಾಂಗ್ರೆಸ್ ಆರೋಪ title=

ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಬಿಜೆಪಿ ಆಡಳಿತದಲ್ಲಿ ‘ಡ್ರಗ್ಸ್ ಸಿಟಿ’ (Drugs City)ಆಗುತ್ತಿದೆ ಅಂತಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆರೋಪ ಮಾಡಿದೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

Congress-Twitt.jpg

ಇತ್ತೀಚೆಗೆ ಬೆಂಗಳೂರಿನಲ್ಲಿ(Bangalore) ವಿದೇಶಿ ಪ್ರಜೆಗಳಿಂದ ವಶಪಡಿಸಿಕೊಂಡಿರುವ ಡ್ರಗ್ಸ್ ಬಗ್ಗೆ ಉಲ್ಲೇಖಿಸಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರ(BJP Government)ದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ಸ್ ಅಡ್ಡವಾಗುತ್ತಿದೆ’ ಅಂತಾ ಕುಟುಕಿದೆ. ‘ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಬಿಜೆಪಿ ಆಡಳಿತದಲ್ಲಿ 'ಡ್ರಗ್ಸ್ ಸಿಟಿ' ಆಗುತ್ತಿದೆ. ಬಿಜೆಪಿಗೂ ಡ್ರಗ್ಸ್ ಪೆಡ್ಲರ್‌ಗಳಿಗೂ ಇರುವ ನಂಟೇ ಈ ಹಂತಕ್ಕೆ ಬರಲು ಕಾರಣ. ಅದಾನಿ ಪೋರ್ಟ್‌ನ ಡ್ರಗ್ಸ್ ಬಗ್ಗೆ ಬಿಜೆಪಿಗರು ಮಾತನಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ’ ಅಂತಾ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ

ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿ #CongressAndDrugs ಹ್ಯಾಶ್ ಟ್ಯಾಗ್ ಬಳಿಸಿ ತಿರುಗೇಟು ನೀಡಿದೆ. ‘ಡ್ರಗ್ಸ್ ವ್ಯವಹಾರದ ಜೊತೆಗೆ ಡಾರ್ಕ್ ನೆಟ್, ಬಿಟ್ ಕಾಯಿನ್ ವ್ಯವಹಾರವೂ ತಳುಕು ಹಾಕಿಕೊಂಡಿರುವ ಬಗ್ಗೆ ಈ ಹಿಂದೆ ಪೊಲೀಸರು ಬಹಿರಂಗಪಡಿಸಿದ್ದರು. ಆಗ ಕಾಂಗ್ರೆಸ್ ಪಕ್ಷ(Congress Party)ದ ಪ್ರಭಾವಿ ಶಾಸಕರ ಪುತ್ರನೊಬ್ಬ ಈ ಜಾಲದ ಹಿನ್ನೆಲೆಯಲ್ಲಿ ಪಬ್‌ನಲ್ಲಿ ಹೊಡೆದಾಟ ಮಾಡಿದ್ದು ಮರೆತು ಹೋಯಿತೇ? ಅವರೀಗ ಭಾರೀ ಪ್ರಭಾವಿ ಅನಿಸಿಕೊಂಡಿದ್ದಾರೆ!’ ಅಂತಾ ಬಿಜೆಪಿ ಟೀಕಿಸಿದೆ.

‘4 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಾದಕ ದ್ರವ್ಯದ(Drugs) ಜಾಲ‌ ಬಲವಾಗಿ ಬೇರು ಬಿಟ್ಟಿತ್ತು.ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕೈ ಕಟ್ಟಿ ಕುಳಿತಿತ್ತು. ಏಕೆಂದರೆ ಅಧಿಕಾರ ನಡೆಸುತ್ತಿದ್ದ ಮಹಾನುಭಾವರೊಬ್ಬರ ಮಗ-ಸೊಸೆ ಪಬ್‌ನಲ್ಲಿ ನಡೆಸುತ್ತಿದ್ದದ್ದು ಅದೇ ದಂಧೆಯಲ್ಲವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: Spice Jet: ಬೆಳಗಾವಿಯಲ್ಲಿ ರಾಂಗ್ ರನ್​ವೇನಲ್ಲಿ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್, ತಪ್ಪಿದ ಭಾರೀ ದುರಂತ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News