Bangalore Corona Cases Update: ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಪೋಟ

Covid-19 Update - ಬೆಂಗಳೂರಿನಲ್ಲಿ ಕೊರೊನಾ ಮೂರನೆ ಅಲೆಯ (Corona Third Wave) ಆರ್ಭಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ದಿನ ನಿತ್ಯ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. 

Edited by - Nitin Tabib | Last Updated : Jan 7, 2022, 12:44 PM IST

    ಕಳೆದ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಿದ ಅಂತರಾಷ್ಟ್ರೀಯ ಪ್ರಯಾಣಿಕರೆಷ್ಟು..?

    ನಿತ್ಯ ಬೆಂಗಳೂರಿಗೆ ಬರ್ತಿರೊ ವಿದೇಶಿ ಪ್ರಯಾಣಿಕರಲ್ಲಿ ಎಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿದೆ

    ಅಂತರಾಷ್ಟ್ರೀಯ ಪ್ರಯಾಣಿಕರೇ ಒಮಿಕ್ರಾನ್ ಹೊತ್ತು ತರ್ತಿದ್ದಾರಾ..?

Bangalore Corona Cases Update: ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಪೋಟ title=
Bangalore Corona Update

ಬೆಂಗಳೂರು: Covid-19 Update - ಬೆಂಗಳೂರಿನಲ್ಲಿ ಕೊರೊನಾ ಮೂರನೆ ಅಲೆಯ (Corona Third Wave) ಆರ್ಭಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ದಿನ ನಿತ್ಯ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.  ಇಂದು ಬೆಂಗಳೂರಿನಲ್ಲಿ‌ 6613 ಕೊರೊನಾ (Coronavirus) ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಪೂರ್ವ ವಲಯ ಹಾಗೂ ಬೆಂಗಳೂರಿನ ಮಹಾದೇವಪುರ ವಲಯದಲ್ಲಿ ಕೊರೊನಾ ಬ್ಲಾಸ್ಟ್ ಆಗಿದೆ. ಕಂಟೆನ್ಮೆಂಟ್ ಜೋನ್, ಹೋಮ್ ಐಸೋಲೆಷನ್ ಮೇಲೆ ಕಣ್ಣಿಡಲು BBMP ವಾರ್ ರೂಮ್ ಗಳನ್ನು ನಿರ್ಮಿಸಿದ್ದು, KAS ಅಧಿಕಾರಿಗಳನ್ನು ನೇಮಕ ಮಾಡಿದೆ.

ವಲಯವಾರು ಕೊರೊನಾ (Covid-19) ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೀಗಿದೆ
ಬೆಂಗಳೂರು ಪೂರ್ವ ವಲಯ - 1140
ಮಹಾದೇವ ಪುರ ವಲಯ - 1240
ಬೊಮ್ಮನಹಳ್ಳಿ ವಲಯ - 622
ದಕ್ಷಿಣ ವಲಯ - 867
ಪಶ್ಚಿಮ ವಲಯ - 960
ಯಲಹಂಕ ವಲಯ - 350
ಆರ್ ಆರ್ ನಗರ- 457
ದಾಸರಹಳ್ಳಿ- 54

ಕಳೆದ 10 ದಿನಗಳ‌ ಅಂತರಾಷ್ಟ್ರೀಯ ಪ್ರಯಾಣಿಕರ ಡಿಟೇಲ್ಸ್ ಇಲ್ಲಿದೆ

ದಿನಾಂಕ ಪ್ರಯಾಣಿಕರ ಸಂಖ್ಯೆ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ
ಡಿಸೆಂಬರ್ 27 704 09
ಡಿಸೆಂಬರ್ 28  129 03
ಡಿಸೆಂಬರ್ 29  1281 20
ಡಿಸೆಂಬರ್ 30  75 09
ಡಿಸೆಂಬರ್ 31  416 09
ಜನವರಿ 01  618 13
ಜನವರಿ 02  368 05
ಜನವರಿ 03 740 06
ಜನವರಿ 04 995 10
ಜನವರಿ 05 1122 14

>> ಕಳೆದ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಿದವರ ಸಂಖ್ಯೆ - 6448
>> 6448 ಮಂದಿಯನ್ನ ಟೆಸ್ಟ್ ಗೆ ಒಳಪಡಿಸಿದಾಗ 98 ಮಂದಿ ಸೋಂಕು ದೃಢ
>> ಕಳೆದ‌ 10 ದಿನಗಳಲ್ಲಿ 98 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ‌ ಕಾಣಿಸಿಕೊಂಡ ಪಾಸಿಟಿವ್

ಪೊಲೀಸ್ ಠಾಣೆಗಳಿಗೂ ತಟ್ಟಿದ ಕೊರೊನಾ ಬಿಸಿ
ಇನ್ನೊಂದೆಡೆ ಬೆಂಗಳೂರಿನ ಪೊಲೀಸ್ ಠಾಣೆಗಳಿಗೂ ಕೂಡ ಕೊರೊನಾ ಕಾಲಿಟ್ಟಿದೆ. ಈ ಹಿನ್ನಲೆ ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸ್ ಮಾಡಿಸುತ್ತಿರುವ ಪೊಲೀಸರು, ಚಂದ್ರಲೇಔಟ್, ಕೆ.ಆರ್.ಮಾರ್ಕೇಟ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಈಗಾಗಲೇ ಮಾರ್ಕೇಟ್ ಠಾಣೆಯಲ್ಲಿ 14 ಪ್ರಕರಣಗಳು ಪಾಸಿಟಿವ್ ಪತ್ತೆಯಾಗಿವೆ. ಬ್ಯಾಟರಾಯನಪುರ, ಕಾಟನ್ ಪೇಟೆ, ಉಪ್ಪಾರಪೇಟೆಯಲ್ಲಿ ಒಬ್ಬರ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.  

Trending News