ಧಾರವಾಡ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಹಾಗೂ ಕುಂದಗೋಳದ ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಸಹಯೋಗದೊಂದಿಗೆ ಭಾರತರತ್ನ ಪಂ.ಭೀಮಸೇನ ಜೋಶಿ (Bhimsen Joshi) ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಮಾರ್ಚ್ 22 ರಂದು ಸಂಜೆ 5 ಗಂಟೆಗೆ ಕುಂದಗೋಳದ ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಸಭಾಂಗಣದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಉದ್ಘಾಟಿಸಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಅರವಿಂದ ಕಟಗಿ, ಪತ್ರಕರ್ತ ಡಾ.ಬಂಡು ಕುಲಕರ್ಣಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಇದನ್ನೂ: IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..!
ಸಮಾರಂಭದಲ್ಲಿ ಪಂ.ಬಸವರಾಜ ಹೆಡಿಗ್ಗೊಂಡ ಅವರಿಂದ ಶಹನಾಯಿ, ಗದುಗಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ನಾಡಗೀತೆ ಜರುಗುವುದು.ಪಂ.ಸದಾಶಿವ ಪಾಟೀಲ ಅವರಿಂದ ಭಕ್ತಿ ಸಂಗೀತ, ಹುಬ್ಬಳ್ಳಿಯ ಪಂ.ಅಶೋಕ ನಾಡಿಗೇರ ಅವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ವಿದುಷಿ ಮುಕ್ತಾ ಮುಜುಂದಾರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಬೆಂಗಳೂರಿನ ಡಾ.ನಾಗರಾಜರಾವ್ ಹವಾಲ್ದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹುಬ್ಬಳ್ಳಿಯ ಹರೀಶ ಕುಲಕರ್ಣಿ ಅವರಿಂದ ಕೊಳಲು ಮತ್ತು ನಿಖಿಲ್ ಜೋಷಿ ಅವರಿಂದ ಸಿತಾರ ಹಾಗೂ ಧಾರವಾಡದ ಪಂ.ಬಾಲಚಂದ್ರ ನಾಕೋಡ, ಶ್ರೀಪಾದ ಹೆಗಡೆ ಅವರಿಂದ ದ್ವಂದ್ವ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಆಯ್ಕೆದಾರರಿಗೆ ಸಿಕ್ಕಿದ್ದಾರೆ ಹೊಸ ಹಿಟ್‌ಮ್ಯಾನ್; ಈ ಬ್ಯಾಟ್ಸ್‌ಮನ್ ರೋಹಿತ್‌ಗಿಂತ ಹೆಚ್ಚು ಅಪಾಯಕಾರಿ!
ಮಾರ್ಚ್ 23 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾರತರತ್ನ ಪಂ.ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.