ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರದ ಹಿಂದೆ ಬಿಜೆಪಿಯದ್ದೇ ಕೈವಾಡ : ಕಾಂಗ್ರೆಸ್‌ ಆರೋಪ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ ಹಿಂಸಾಚಾರಕ್ಕೆ ತಿರುಗಿದ್ದು, ಇದು ಬಿಜೆಪಿಯದ್ದೇ ಕೈವಾಡ ಎಂದು ರಾಜ್ಯ ಕಾಂಗ್ರೆಸ್‌ ಆರೋಪಿಸಿದೆ.

Written by - Krishna N K | Last Updated : Sep 14, 2022, 05:43 PM IST
  • ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ ಹಿಂಸಾಚಾರಕ್ಕೆ ತಿರುಗಿದೆ
  • ಗಲಭೆ ಹಾಗೂ ಹಿಂಸಾಚಾರದ ಹಿಂದೆ ಬಿಜೆಪಿಯದ್ದೇ ಕೈವಾಡ ಇದೆ ಎಂದು ಕಾಂಗ್ರೆಸ್‌ ಆರೋಪಿಸಿದೆ
  • ಸಂಸ್ಕೃತಿ ರಕ್ಷಕರು, ಕಾನೂನನ್ನು ಗೌರವಿಸುವವರು ಎಂದುಕೊಳ್ಳುವ ಬಿಜೆಪಿಯ ಅಸಲಿ ಸಂಸ್ಕೃತಿ ಇದೇ ಅಲ್ಲವೇ?
ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರದ ಹಿಂದೆ ಬಿಜೆಪಿಯದ್ದೇ ಕೈವಾಡ : ಕಾಂಗ್ರೆಸ್‌ ಆರೋಪ title=

ಬೆಂಗಳೂರು : ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ ಹಿಂಸಾಚಾರಕ್ಕೆ ತಿರುಗಿದ್ದು, ಇದು ಬಿಜೆಪಿಯದ್ದೇ ಕೈವಾಡ ಎಂದು ರಾಜ್ಯ ಕಾಂಗ್ರೆಸ್‌ ಆರೋಪಿಸಿದೆ.

ಈ ಕುರಿತು ಟ್ಟೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್‌, ಕೋಲ್ಕತ್ತದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಿಜೆಪಿಗರನ್ನು ಭಯೋತ್ಪಾದಕರೆನ್ನದೆ ಬೇರೇನು ಹೇಳಬೇಕು?  ಸಂಸದ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಅವರೇ ಎಲ್ಲಿ ಅಡಗಿದ್ದೀರಿ? ಬಂಗಾಳಕ್ಕೆ ಬುಲ್ಡೋಸರ್ ಕಳಿಸಿಕೊಡುವುದಿಲ್ಲವೇ? ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರಗಳ ಹಿಂದೆ ಬಿಜೆಪಿಯದ್ದೇ ಕೈವಾಡವಿರುವುದಕ್ಕೆ ಇದು ತಾಜಾ ಉದಾಹರಣೆ ಎಂದು ಹರಿಹಾಯ್ದಿದೆ.

ಇದನ್ನೂ ಓದಿ: "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ಅಲ್ಲದೆ, ಪೊಲೀಸರ ಮೇಲೆ ಹಲ್ಲೆ ಮಾಡುವವರನ್ನು, ಸರ್ಕಾರಿ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೇ? ಈ ಮಾತನ್ನು ನಿಮ್ಮವರೇ ಹೇಳಿದ್ದಲ್ಲವೇ? ಯಾರ ನಿರ್ದೇಶನದಂತೆ ಈ ಭಯೋತ್ಪಾದನೆ ನಡೆಸುತ್ತಿರುವುದು? ನಾವು ಸಂಸ್ಕೃತಿ ರಕ್ಷಕರು, ಕಾನೂನನ್ನು ಗೌರವಿಸುವವರು ಎಂದುಕೊಳ್ಳುವ ಬಿಜೆಪಿಯ ಅಸಲಿ ಸಂಸ್ಕೃತಿ ಇದೇ ಅಲ್ಲವೇ? ಎಂದು ಕಿಡಿಕಾರಿದೆ.

ಇನ್ನು ಸಾರ್ವಜನಿಕ ಆಸ್ತಿ ಹಾನಿ ಮಾಡುವವರು ಭಯೋತ್ಪಾದಕರು' ಬಿಜೆಪಿಯವರೇ ಹೇಳಿದ ಈ ಮಾತು ಈಗ ಬಿಜೆಪಿಯವರಿಗೇ ಅನ್ವಯಿಸುತ್ತದೆಯಲ್ಲವೇ ಬಿಜೆಪಿಗೆ? ಆಸ್ತಿ ಮಟ್ಟುಗೋಲು ಹಾಕಿಕೊಳ್ಳಬೇಕು, ಬುಲ್ಡೋಸರ್ ಹತ್ತಿಸಬೇಕು, ಭಯೋತ್ಪಾದನೆ ತಡೆ ಕಾಯ್ದೆಯಲ್ಲಿ ಬಂಧಿಸಬೇಕು ಎಂಬ ಬಿಜೆಪಿ ಕಡೆಯಿಂದ ಕೇಳಿಬರದೇ ನೀರವ ಮೌನ ಆವರಿಸಿರುವುದೇಕೆ? ಎಂದು ಪ್ರಶ್ನಿಸಿದೆ.

ಕೋಲ್ಕತ್ತದಲ್ಲಿ ನಡೆದ ನಬಾನ್ನ ಚಲೊ ಅಭಿಯಾನ ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆ ತಾರಕಕ್ಕೇರಿತು. ಪ್ರತಿಭಟನಾಕಾರು ಪೊಲೀಸರತ್ತ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News