ಬಿಜೆಪಿಯ 'ಮಂಗಳೂರು ಚಲೋ' ಕಾರ್ಯಕ್ರಮಕ್ಕೆ ಸಜ್ಜಾದ ಮಂಗಳೂರು

ಬಿಜೆಪಿಯ ಮಂಗಳೂರು ಚಲೋ ಚಳುವಳಿಯ ಹಿನ್ನೆಲೆಯಲ್ಲಿ ಮಂಗಳೂರು ತಲುಪಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಆರ್.ಅಶೋಕ್ ಹಾಗೂ ಇನ್ನಿತರ ಪ್ರಮುಖ ನಾಯಕರ ಆಗಮನ.

Last Updated : Sep 7, 2017, 11:00 AM IST
ಬಿಜೆಪಿಯ 'ಮಂಗಳೂರು ಚಲೋ' ಕಾರ್ಯಕ್ರಮಕ್ಕೆ ಸಜ್ಜಾದ ಮಂಗಳೂರು title=
Pic Courtesy : Twitter

ಮಂಗಳೂರು: ಬಿಜೆಪಿ ಆಯೋಜಿತ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು. ಕಡಲ ನಗರಿ ಮಂಗಳೂರು ಸಜ್ಜಾಗಿದೆ. ಜ್ಯೋತಿ ಸರ್ಕಲ್ ನಿಂದ ಮೆರವಣಿಗೆ ಮಾಡಲು ಬಿಜೆಪಿ ಯೋಜನೆ ರೂಪಿಸಿದ್ದು, ಮಂಗಳೂರು ನಗರ ಪೋಲೀಸ್ ಆಯುಕ್ತರು ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದಾರೆ ಮತ್ತು ನೆಹರು ಮೈದಾನದಲ್ಲಿ ಮಾತ್ರ ಪ್ರತಿಭಟನಾ ಸಮಾವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಜ್ಯೋತಿ ಸರ್ಕಲ್ ನಲ್ಲಿ ಮಂಗಳೂರು ಚಲೋ ಪ್ಲೇಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜ್ಯೋತಿ ಸರ್ಕಲ್ ನಲ್ಲಿ ಪೋಲಿಸರನ್ನು ನಿಯೋಜಿಸಲಾಗಿದೆ.

ಈಗಾಗಲೇ ಮಂಗಳೂರು ನಗರಕ್ಕೆ ಬಿಜೆಪಿ ಮುಖಂಡರು ಆಗಮಿಸುತ್ತಿದ್ದಾರೆ. ಬೇರೆ ಜಿಲ್ಲೆಗಳ ಕಾರ್ಯಕರ್ತರುಗಳು ಮೊದಲೇ ಬಸ್ ಗಳಲ್ಲಿ ಬಂದು ಮಂಗಳೂರಿನಲ್ಲಿ ನೆಲೆಸಿದ್ದಾರೆ. ಸ್ಥಳೀಯ ಕಾರ್ಯಕರ್ತರು ಬೈಕ್ ಗಳಲ್ಲಿ ಜ್ಯೋತಿ ಸರ್ಕಲ್ಗೆ ಬರಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. 

ಆದರೆ ಮೆರವಣಿಗೆ ಹೊರಟರೆ ಕಾರ್ಯಕರ್ತರನ್ನು ಬಂಧಿಸಲು ಪೋಲೀಸ್ ಪಡೆ ರೆಡಿಯಾಗಿದೆ.ಇಂದು ನಡೆಯಲಿರುವ ಮಂಗಳೂರು ಚಲೋ ಚಳುವಳಿಯಾ ಜಟಾಪಟಿಗೆ ನಗರದ ಜ್ಯೋತಿ ಸರ್ಕಲ್ ಸಾಕ್ಷಿಯಾಗಲಿದೆ. ನೆಹರು ಮೈದಾನದಲ್ಲಿ ಯಾವುದೇ ಪ್ರತಿಭಟನಾ ಸಭೆ ನಡೆಯೋ ಸಾಧ್ಯತೆ ಕಡಿಮೆಯಿದ್ದೂ, ಆದರೂ ನೆಹರು ಮೈದಾನದಲ್ಲಿ ಭದ್ರತೆಯನ್ನು ಮುಂದುವರಿಸಲಾಗಿದೆ.

ಜ್ಯೋತಿ ಸರ್ಕಲ್ ನಿಂದ ಮೆರವಣಿಗೆ ಹೊರಟಾಗಲೇ ಬಂಧಿಸಲು ಪೊಲೀಸರು ತಯಾರಾಗಿರೋ ಹಿನ್ನೆಲೆಯಲ್ಲಿ ನೆಹರು ಮೈದಾನದಲ್ಲಿ ಯಾವುದೇ ಪ್ರತಿಭಟನಾ ಸಭೆಗಳು ನಡೆಯುವ ಸಾಧ್ಯತೆ ಕಡಿಮೆ ಇರುವ ಲಕ್ಷಣಗಳು ಕಂಡು ಬಂದಿದೆ. ನಗರ ಸಂಪರ್ಕಿಸುವ ರಸ್ತೆಗಳಲ್ಲಿ ಬೈಕ್ ಜಾಥಾ ಆಗಮಿಸುವ ಸಾಧ್ಯತೆ ಇರುವುದರಿಂದ, ಜಿಲ್ಲಾ ಗಡಿಗಳಲ್ಲಿ ಪೋಲೀಸರ ಕಣ್ಗಾವಲು ಹೆಚ್ಚಾಗಿದೆ. 

Trending News