ಅಖಂಡ ಭಾರತ ತುಂಡು ಮಾಡಿದ್ದ ಕಾಂಗ್ರೆಸ್‌ನಿಂದ ʼಭಾರತ ಒಗ್ಗೂಡಿಸಿʼ ನಾಟಕ : ಕಮಲ ಕಿಡಿ

ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದ ಕಾಂಗ್ರೆಸ್‌ ಇಂದು ಭಾರತ ಒಗ್ಗೂಡಿಸಿ (ಭಾರತ್‌ ಜೋಡೋ) ಎಂಬ ಬೃಹನ್ನಾಟಕವಾಡುತ್ತಿದೆ ಎಂದು ಕಾಂಗೆಸ್‌ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆದಿದೆ.

Written by - Krishna N K | Last Updated : Sep 7, 2022, 02:46 PM IST
  • ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದು ಕಾಂಗ್ರೆಸ್.
  • ಅದೇ ಕಾಂಗ್ರೆಸ್‌ ಈಗ ಭಾರತ್‌ ಜೋಡೋ ಎಂಬ ಬೃಹನ್ನಾಟಕ ಮಾಡುತ್ತಿದೆ.
  • ಭಾರತವನ್ನು ಜೋಡಿಸುವ ಆಸೆಯಿದ್ದರೆ, ಪಾಕಿಸ್ಥಾನದಿಂದ ಭಾರತ್‌ ಜೋಡೋ ಯಾತ್ರೆ ಆರಂಭಿಸಲಿ
ಅಖಂಡ ಭಾರತ ತುಂಡು ಮಾಡಿದ್ದ ಕಾಂಗ್ರೆಸ್‌ನಿಂದ ʼಭಾರತ ಒಗ್ಗೂಡಿಸಿʼ ನಾಟಕ : ಕಮಲ ಕಿಡಿ title=

ಬೆಂಗಳೂರು: ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದ ಕಾಂಗ್ರೆಸ್‌ ಇಂದು ಭಾರತ ಒಗ್ಗೂಡಿಸಿ (ಭಾರತ್‌ ಜೋಡೋ) ಎಂಬ ಬೃಹನ್ನಾಟಕವಾಡುತ್ತಿದೆ ಎಂದು ಕಾಂಗೆಸ್‌ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆದಿದೆ.

ಇಂದು (ಸೆ.7) ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಟ್ಟೀಟ್‌ ಮೂಲಕ ವ್ಯಂಗ್ಯವಾಡಿರುವ ಕಮಲಪಾಳಯ, ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದೇ ಕಾಂಗ್ರೆಸ್. ಅದೇ ಕಾಂಗ್ರೆಸ್‌ ಈಗ ಭಾರತ್‌ ಜೋಡೋ ಎಂಬ ಬೃಹನ್ನಾಟಕ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ನಿಜಕ್ಕೂ ಭಾರತವನ್ನು ಜೋಡಿಸುವ ಆಸೆಯಿದ್ದರೆ, ಪಾಕಿಸ್ತಾನದಿಂದ ಭಾರತ್‌ ಜೋಡೋ ಯಾತ್ರೆ ಆರಂಭಿಸಲಿ’ ಎಂದು ಸವಾಲ್‌ ಹಾಕಿದೆ.

ಇದನ್ನೂ ಓದಿ: Bharat Jodo Yatra : ಇಂದಿನಿಂದ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ' ಆರಂಭ : ಭರ್ಜರಿ ತಯಾರಿಯಲ್ಲಿ ಕೈ!

ಅಲ್ಲದೆ, ತಮ್ಮ ರಾಜಕೀಯ ಹಸಿವಿಗಾಗಿ ಭಾರತವನ್ನೇ ಇಭ್ಭಾಗ ಮಾಡಿದ ಕಾಂಗ್ರೆಸ್‌ ಇಂದು ಭಾರತವನ್ನು‌ ಜೋಡಿಸುವ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ಸಿಗರೇ, ಮೊದಲು ಹರಿದು ಹಂಚಿಹೋಗುತ್ತಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದೆ. ಇನ್ನು ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್, ಚಂಡೀಗಡ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಹಾದುಹೋಗಲಿದೆ.

ಮೂರು ದಿನ ತಮಿಳುನಾಡಿನಲ್ಲಿ ಯಾತ್ರೆ ಇರಲಿದ್ದು, ಸೆ.11 ರಂದು ಕೇರಳ ಪ್ರವೇಶಿಸುತ್ತದೆ. ಕರ್ನಾಟಕದಲ್ಲಿ 21 ದಿನಗಳಲ್ಲಿ 511 ಕಿ.ಮೀ ಕ್ರಮಿಸಲಿದೆ. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಯಾತ್ರೆಯ ತಲಾ 15 ರಿಂದ 20 ದಿನಗಳ ಕಾಲ ಯಾತ್ರೆ ನಡೆಯಲಿದೆ. 3-5 ದಿನಗಳಲ್ಲಿ ಇತರ ರಾಜ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News