ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಂಗಳು ಸೃಷ್ಟಿಯಾಗಿವೆ!: ಕಾಂಗ್ರೆಸ್

ಸಿಎಂ ಬಸವರಾಜ ಬೊಮ್ಮಾಯಿಯವರೇ ಬಂಡವಾಳ ಹೂಡಿಕೆದಾರರಿಗೆ ರಸ್ತೆ ಗುಂಡಿ, ಕಸಗಳನ್ನು ತೋರಿಸಿ ಹೂಡಿಕೆ ಮಾಡಲು ಕೇಳಿದಿರಾ? ಎಂದು ಕಾಂಗ್ರೆಸ್ ಕುಟುಕಿದೆ.

Written by - Puttaraj K Alur | Last Updated : Nov 7, 2022, 04:30 PM IST
  • ಕರ್ನಾಟಕ ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವಾರು ಟೀಂಗಳು ಸೃಷ್ಟಿಯಾಗಿವೆ
  • ಮುರುಗೇಶ್ ನಿರಾಣಿಯವರನ್ನು ಸಿಎಂ ಮಾಡಲು ಯತ್ನಿಸಿದ ಟೀಂಗೆ ಹಿನ್ನಡೆಯಾಗಿದ್ದೇಕೆ ಬಿಜೆಪಿ?
  • ಸಿಎಂ ಹುದ್ದೆಯ ಹರಾಜು ಮೊತ್ತ 2,500 ಕೋಟಿ ರೂ. ನೀಡಲು ವಿಫಲವಾಗಿದ್ದಕ್ಕಾ?
ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಂಗಳು ಸೃಷ್ಟಿಯಾಗಿವೆ!: ಕಾಂಗ್ರೆಸ್ title=

ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಬೇಕೆಂದು ಟೀಂ ಕಟ್ಟಿದ್ದೇ ನಾನು ಎಂಬ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಮ್‌ಗಳು ಸೃಷ್ಟಿಯಾಗಿವೆ ಎಂದು ಟೀಕಿಸಿದೆ.

ಇದನ್ನೂ ಓದಿ: 6 ರಾಜ್ಯಗಳ 7 ಸ್ಥಾನಗಳನ್ನು ಗೆದ್ದವರು ಯಾರು? ಉಪಚುನಾವಣೆಯ ಅಂತಿಮ ಫಲಿತಾಂಶ ಇಲ್ಲಿದೆ ನೋಡಿ

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಮ್‌ಗಳು ಸೃಷ್ಟಿಯಾಗಿವೆ! BSY ಟೀಂ, ಸಂತೋಷ್ ಟೀಂ, ವಲಸಿಗರ ಟೀಂ, ಬೊಮ್ಮಾಯಿ ಟೀಂ, ಸಂಘಿಗಳ ಟೀಂ ಮತ್ತು ನಿರಾಣಿ ಟೀಂ! ಮುರುಗೇಶ್ ನಿರಾಣಿಯವರನ್ನು ಸಿಎಂ ಮಾಡಲು ಯತ್ನಿಸಿದ ಟೀಂಗೆ ಹಿನ್ನಡೆಯಾಗಿದ್ದೇಕೆ ಬಿಜೆಪಿ? ಸಿಎಂ ಹುದ್ದೆಯ ಹರಾಜು ಮೊತ್ತ 2,500 ಕೋಟಿ ರೂ. ನೀಡಲು ವಿಫಲವಾಗಿದ್ದಕ್ಕಾ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ನ. 11 ರಂದು ರಾಜ್ಯಕ್ಕೆ ಪ್ರಧಾನಿ ಭೇಟಿ, ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ

ಕಸದ ಸಮಸ್ಯೆಯೂ ಉಲ್ಬಣಿಸಿದೆ!

ಬೆಂಗಳೂರಿನಲ್ಲಿ ರಸ್ತೆಗುಂಡಿಗಳಷ್ಟೇ ಅಲ್ಲ, #40PercentSarkaraದಲ್ಲಿ ಕಸದ ಸಮಸ್ಯೆಯೂ ಉಲ್ಬಣಿಸಿದೆ. ಕಸ ವಿಲೇವಾರಿ ಘಟಕಗಳು ಕೆಲಸ ಮಾಡ್ತಿಲ್ಲ, ಬೆಂಗಳೂರಿನ ಕಸಕ್ಕೆ ಮುಕ್ತಿ ಸಿಗ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರೇ, ಬಂಡವಾಳ ಹೂಡಿಕೆದಾರರಿಗೆ ರಸ್ತೆ ಗುಂಡಿ, ಕಸಗಳನ್ನು ತೋರಿಸಿ ಹೂಡಿಕೆ ಮಾಡಲು ಕೇಳಿದಿರಾ? ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ?’ ಎಂದು ಕಾಂಗ್ರೆಸ್ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News