ಬಾಂಬ್‌ ಪತ್ತೆ ದಳದ ʻಬೆಳ್ಳಿʼ ಹೆಸರಿನ ಶ್ವಾನ ನಿಧನ

Bomb Squad Dog: ಕಳೆದ ಮೂರು ತಿಂಗಳಿಂದ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದ ಉತ್ತರಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ʻಬೆಳ್ಳಿʼ ಹೆಸರಿನ ಶ್ವಾನ ಕಾಯಿಲೆ ಗುಣಮುಖವಾಗದೆ ಕೊನೆಯುಸಿರೆಳೆದಿದೆ. 

Written by - Zee Kannada News Desk | Last Updated : Jun 15, 2023, 09:16 AM IST
  • ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದ ಬೆಳ್ಳಿ ಹೆಸರಿನ ಶ್ವಾನ
  • ಉತ್ತರಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಶ್ವಾನ
  • ಕಾಯಿಲೆ ಗುಣಮುಖವಾಗದೆ ಕೊನೆಯುಸಿರೆಳೆದ ಬೆಳ್ಳಿ
ಬಾಂಬ್‌ ಪತ್ತೆ ದಳದ ʻಬೆಳ್ಳಿʼ ಹೆಸರಿನ ಶ್ವಾನ ನಿಧನ title=

ಕಾರವಾರ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಗೆ ಅತಿ ಗಣ್ಯರು ರಾಜ್ಯಕ್ಕೆ ಬರುವ ಕಾರ್ಯಕ್ರಮಗಳಲ್ಲಿ ಚುರುಕುನಿಂದ ಓಡಾಡಿ ಭದ್ರತೆಯ ಮೇಲೆ ಕಣ್ಣಿಡುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಬಾಂಬ್‌ ಪತ್ತೆ ದಳದ ಶ್ವಾನ ʻಬೆಳ್ಳಿʼ ನಿಧನವಾಗಿದೆ. 

9 ವರ್ಷದ ಆರು ತಿಂಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಬಾಂಬ್ ಪತ್ತೆ ಹಚ್ಚುವ ಕೆಲಸ ಮಾಡಿದ್ದ ಹತ್ತು ವರ್ಷದ ಲ್ಯಾಬ್ರೆಡಾರ್ ತಳಿಯ ʻಬೆಳ್ಳಿʼ ಉದರ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. 2013ರಲ್ಲಿ ಮೂರು ತಿಂಗಳ ಮರಿಯನ್ನು ಬೆಂಳೂರಿನಿಂದ ತರಲಾಗಿತ್ತು. ಅದಕ್ಕೆ ಬೆಳ್ಳಿ ಎಂದು ಪೊಲೀಸ್ ಇಲಾಖೆ ನಾಮಕರಣ‌ ಮಾಡಿತ್ತು. ಇದಕ್ಕೆ  ಆರು ತಿಂಗಳು  ಆಡುಗೋಡಿಯಲ್ಲಿರುವ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. 

ಇದನ್ನೂ ಓದಿ: ನನ್ನ ರಾಜಕೀಯ ನಿಲುವಿನಲ್ಲಿ ರಾಜಿಯಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ದಿನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಾಂಬ್ ಪತ್ತೆ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿತ್ತು. 300ಕ್ಕೂ ಹೆಚ್ಚು ಸಮಾವೇಶ, ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಲ್ಲಿ ಅದರ ಪಾತ್ರ ಮಹತ್ವವಾಗಿತ್ತು.

2020 ಮುರೂರು ಗುಡ್ಡದಲ್ಲಿ ಕುಮಟಾದ ಬೆದರಿಕೆ ಕರೆ ಬಂದಿದ್ದ ವೇಳೆ ಇಡೀ ಗುಡ್ಡವನ್ನು ಸುತ್ತಾಡಿ ಬಾಂಬ್ ಪತ್ತೆ ಮಾಡಿತ್ತು. ಬಳಿಕ ಅದು ನಕಲಿ ಬಾಂಬ್ ಎಂಬುದು ಮನವರಿಕೆ ಆಗಿತ್ತು. ಪಶ್ಚಿಮ ವಲಯದ ಪೊಲೀಸ್‌ ಕ್ರೀಡಾಕೂಟದಲ್ಲಿ ಬಾಂಬ್ ನಿಷ್ಕ್ರಿಯ - ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸಹ ಪಡೆದಿದ್ದ ಬೆಳ್ಳಿ, ಮೂರು ತಿಂಗಳಿನಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕ್ಯಾನ್ಸರ್ ಪತ್ತೆಯಾಯಿತು. ಕೊನೆಗೂ ಗುಣಮುಖವಾಗದೇ ಕೊನೆಯುಸಿರೆಳೆದಿದೆ. 

ಇದನ್ನೂ ಓದಿ: ರಾಜ್ಯಗಳಿಗೆ ಅಕ್ಕಿ ಮಾರಾಟ ವಿಚಾರ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗರಂ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News